Home ದೆಹಲಿ ಭಾರತದ ಅಭಿವೃದ್ಧಿ ದರ ಕುಸಿತ: ಐಎಂಎಫ್ ಅಂದಾಜು ಪ್ರಕಟ

ಭಾರತದ ಅಭಿವೃದ್ಧಿ ದರ ಕುಸಿತ: ಐಎಂಎಫ್ ಅಂದಾಜು ಪ್ರಕಟ

0

ದೆಹಲಿ: ಮುಂದಿನ ಆರ್ಥಿಕ ವರ್ಷದಲ್ಲಿ ಭಾರತದ ಅಭಿವೃದ್ಧಿ ದರ (Growth Rate) ಗಣನೀಯವಾಗಿ ಕುಸಿಯಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಅಂದಾಜಿಸಿದೆ.

2025-26ನೇ ಸಾಲಿಗೆ ಶೇ. 7.3 ರಷ್ಟಿರಲಿದ್ದ ವೃದ್ಧಿ ದರವು ಶೇ. 6.4 ಕ್ಕೆ ಇಳಿಕೆಯಾಗಲಿದೆ ಎಂದು ಐಎಂಎಫ್ ತನ್ನ ‘ವರ್ಲ್ಡ್ ಎಕನಾಮಿಕ್ ಔಟ್‌ಲುಕ್’ ವರದಿಯಲ್ಲಿ ತಿಳಿಸಿದೆ. ಇತ್ತೀಚೆಗಷ್ಟೇ ವಿಶ್ವಬ್ಯಾಂಕ್ ಭಾರತದ ವೃದ್ಧಿ ದರ ಶೇ. 6.5 ರಷ್ಟು ಮುಂದುವರಿಯಲಿದೆ ಎಂದು ಹೇಳಿತ್ತು. ಆದರೆ, ಅದರ ಬೆನ್ನಲ್ಲೇ ಐಎಂಎಫ್ ಈ ಪರಿಷ್ಕೃತ ವರದಿಯನ್ನು ಬಿಡುಗಡೆ ಮಾಡಿದೆ.

ಕೆಲವು ತಾತ್ಕಾಲಿಕ ಕಾರಣಗಳು ಮತ್ತು ಆರ್ಥಿಕ ಚೌಕಟ್ಟಿಗೆ ಸಂಬಂಧಿಸಿದ ಅಂಶಗಳ ಕುಸಿತದಿಂದಾಗಿ 2026 ಮತ್ತು 2027ರಲ್ಲಿ ವೃದ್ಧಿ ದರ ಶೇ. 6.4 ರಷ್ಟಿರಲಿದೆ ಎಂದು ಐಎಂಎಫ್ ಹೇಳಿದೆ. 2025ರ ಮೂರನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ. 8.2 ಕ್ಕೆ ಏರಿಕೆಯಾಗಿತ್ತು, ಈ ಹಿನ್ನೆಲೆಯಲ್ಲಿ ಆರ್‌ಬಿಐ ತನ್ನ ಅಂದಾಜನ್ನು ಶೇ. 7.3 ಕ್ಕೆ ಏರಿಸಿತ್ತು. ಆದರೆ ಈಗ ಐಎಂಎಫ್ ಅದನ್ನು ಕಡಿತಗೊಳಿಸಿದೆ.

ಇದೇ ಫೆಬ್ರವರಿಯಲ್ಲಿ ಭಾರತವು ತನ್ನ ಜಿಡಿಪಿ ಲೆಕ್ಕಾಚಾರದ ವಿಧಾನಗಳನ್ನು ಆಧುನೀಕರಿಸಲಿದ್ದು, ಇದರಿಂದಾಗಿ ವೃದ್ಧಿ ದರದ ಅಂದಾಜಿನಲ್ಲಿ ಮತ್ತೆ ಬದಲಾವಣೆಗಳಾಗುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ. ಇದೇ ವೇಳೆ, ಜಾಗತಿಕ ಮಟ್ಟದಲ್ಲಿ ಎಐ (AI) ಮತ್ತು ತಂತ್ರಜ್ಞಾನ ವಲಯದ ಹೂಡಿಕೆಗಳಿಂದಾಗಿ 2026ರ ಜಾಗತಿಕ ವೃದ್ಧಿ ದರವನ್ನು ಶೇ. 3.3 ಕ್ಕೆ ಹೆಚ್ಚಿಸಲಾಗಿದೆ. ಅಮೆರಿಕ ಮತ್ತು ಚೀನಾ ದೇಶಗಳ ವೃದ್ಧಿ ದರದ ಅಂದಾಜನ್ನೂ ಕೂಡ ಐಎಂಎಫ್ ಏರಿಕೆ ಮಾಡಿದೆ.

You cannot copy content of this page

Exit mobile version