Tuesday, September 30, 2025

ಸತ್ಯ | ನ್ಯಾಯ |ಧರ್ಮ

ಜಾಗತಿಕ ಹಸಿವು ಸೂಚ್ಯಂಕ ಭಾರತ ಶೋಚನಿಯ ಕುಸಿತ: ಕೇಂದ್ರ ಸರ್ಕಾರದ ವಿರುದ್ಧ ಮಹದೇವಪ್ಪ ವಾಗ್ದಾಳಿ

ಬೆಂಗಳೂರು: 2022 ರ ಜಾಗತಿಕ ಹಸಿವು ಸೂಚ್ಯಾಂಕದಲ್ಲಿ ಭಾರತವು ಏಷ್ಯಾ ಖಂಡದಲ್ಲೇ ಅತ್ಯಂತ ಹಸುವಿನ ದೇಶ ಎಂಬ ಅಂಶ ಬೇಳಕಿಗೆ ಬಂದಿರುವ ಕುರಿತು ಮಾಜಿ ಸಚಿವ ಹೆಚ್‌.ಸಿ. ಮಹದೇವಪ್ಪ ಅವರು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, ಹಗಲು ರಾತ್ರಿ ಪಾಕಿಸ್ತಾನ ಮತ್ತು ಕಾರ್ಪೊರೇಟ್ ಶ್ರೀಮಂತರ ಜಪ ಮಾಡುವುದನ್ನು ಬಿಟ್ಟು ಭಾರತದ ಸಾಮಾನ್ಯರ ಆರೋಗ್ಯ, ಹಸಿವಿನ ಬಗ್ಗೆ ತಲೆ ಕೆಡಿಸಿಕೊಂಡಿದ್ದರೆ ಈ ದಿನ ಭಾರತ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಪಾಕಿಸ್ತಾನಕ್ಕಿಂತಲೂ ಕೆಳ ಮಟ್ಟಕ್ಕೆ ಜಾರುತ್ತಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದು, ದೇಶದ ಜನರ ಹಸಿವಿಗೆ ಸ್ಪಂದಿಸದ ವ್ಯಕ್ತಿ ವಿಶ್ವಗುರು ಅಗಬಲ್ಲರೇ? ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಕುರಿತು ಟೀಕಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page