ಬೆಂಗಳೂರು: 2022 ರ ಜಾಗತಿಕ ಹಸಿವು ಸೂಚ್ಯಾಂಕದಲ್ಲಿ ಭಾರತವು ಏಷ್ಯಾ ಖಂಡದಲ್ಲೇ ಅತ್ಯಂತ ಹಸುವಿನ ದೇಶ ಎಂಬ ಅಂಶ ಬೇಳಕಿಗೆ ಬಂದಿರುವ ಕುರಿತು ಮಾಜಿ ಸಚಿವ ಹೆಚ್.ಸಿ. ಮಹದೇವಪ್ಪ ಅವರು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಹಗಲು ರಾತ್ರಿ ಪಾಕಿಸ್ತಾನ ಮತ್ತು ಕಾರ್ಪೊರೇಟ್ ಶ್ರೀಮಂತರ ಜಪ ಮಾಡುವುದನ್ನು ಬಿಟ್ಟು ಭಾರತದ ಸಾಮಾನ್ಯರ ಆರೋಗ್ಯ, ಹಸಿವಿನ ಬಗ್ಗೆ ತಲೆ ಕೆಡಿಸಿಕೊಂಡಿದ್ದರೆ ಈ ದಿನ ಭಾರತ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಪಾಕಿಸ್ತಾನಕ್ಕಿಂತಲೂ ಕೆಳ ಮಟ್ಟಕ್ಕೆ ಜಾರುತ್ತಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದು, ದೇಶದ ಜನರ ಹಸಿವಿಗೆ ಸ್ಪಂದಿಸದ ವ್ಯಕ್ತಿ ವಿಶ್ವಗುರು ಅಗಬಲ್ಲರೇ? ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಕುರಿತು ಟೀಕಿಸಿದ್ದಾರೆ.