ಭಾರತ ಮತ್ತು ವಿಂಡೀಸ್ ಸರಣಿಯ ಎರಡನೇ ಟಿ 20 ಪಂದ್ಯ ಇಂದು ಸಂಜೆ 8 ಗಂಟೆಗೆ ಶುರುವಾಗಲಿದೆ. ಬ್ಯಾಸೆಟೆರ್ರೆಯಲ್ಲಿ ಇಂದು ಎರಡೂ ತಂಡಗಳು ಸೆಣೆಸಲಿವೆ. ಮೊದಲ ಪಂದ್ಯದಲ್ಲಿ ಗೆದ್ದು ಬೀಗುತ್ತಿರುವ ಭಾರತವನ್ನು ಬಗ್ಗು ಬಡಿಯಲು ವಿಂಡೀಸ್ ತಂಡ ಗೇಮ್ ಪ್ಲ್ಯಾನ್ ಮಾಡುತ್ತಿದೆ. ಆದರೆ ಸರಣಿಯಲ್ಲಿ ಇದುವರೆಗೂ ಒಂದೂ ಪಂದ್ಯವನ್ನು ಗೆಲ್ಲಲಾಗದ ವಿಂಡೀಸ್ ಗೆ ಅದು ಸುಲಭದ ಕೆಲಸ ಅಲ್ಲ. ರೋಹಿತ್ ಶರ್ಮಾ ಪಡೆ ಈಗ ತನ್ನ ಫಾರ್ಮ್ ನ ಉತ್ತುಂಗದಲ್ಲಿದೆ. ತಂಡದ ಬ್ಯಾಟ್ಸ್ ಮನ್ ಮತ್ತು ಬೋಲರ್ ಗಳು ಸಮತೋಲಿತ ಪ್ರದರ್ಶನ ನೀಡುತ್ತಿದ್ದಾರೆ. ತಂಡದ ಎಲ್ಲಾ ಆಟಗಾರರು ಅವಕಾಶ ಸಿಕ್ಕಾಗಲೆಲ್ಲ ಅದನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಇದರ ಜೊತೆ, ಎಂದಿನಂತೆ ದಿನೇಶ್ ಕಾರ್ತಿಕ್ ಕೂಡಾ ಫಿನಿಷರ್ ಆಗಿ ಮಿಂಚುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಸ್ಪಿನ್ನರ್ ಗಳು ತಮ್ಮ ಸಾಮರ್ಥ್ಯ ಪ್ರದರ್ಶನ ಮಿಂಚಿದ್ದರು. ಅದು ಸ್ಪಿನ್ ಗೆ ಪೂರಕ್ ಪಿಚ್ ಆಗಿದ್ದರಿಂದ ಜಡೇಜಾ, ಬಿಷ್ಣೋಯ್ ಮತ್ತು ಅಶ್ವಿನ್ ಸೇರಿದಂತೆ ಮೂವರು ಸ್ಪಿನ್ನರ್ ಗಳು ಆ ಪಂದ್ಯ ಆಡಿದ್ದರು. ಆದರೆ ಇವರಲ್ಲಿ ಒಬ್ಬರು ಎರಡನೇ ಪಂದ್ಯದಲ್ಲಿ ಹರ್ಷಲ್ ಪಟೇಲ್ ಅವರಿಗೆ ಜಾಗ ಮಾಡಿಕೊಡುವ ಸಾಧ್ಯತೆ ಇದೆ. ಇನ್ನು ವೆಸ್ಟ್ಇಂಡೀಸ್ ತಂಡಕ್ಕೆ ಬ್ರ್ಯಾಂಡನ್ ಕಿಂಗ್ ಮತ್ತು ರೊಮಾರಿಯೋ ಶೆಪರ್ಡ್ ವಾಪಸ್ ಬರುವ ಸಾಧ್ಯತೆ ಇದೆ. ವಿಂಡೀಸ್ ತಂಡದಲ್ಲಿ ಪ್ರತಿಭೆಗಳ ಮಹಾಪೂರವೇ ಇದ್ದರೂ ಗೆಲುವಿನ ರುಚಿ ನೋಡಲು ಸಾಧ್ಯವಾಗುತ್ತಿಲ್ಲದಿರುವುದು ವಿಂಡೀಸ್ ನಾಯಕ ನಿಕೋಲಸ್ ಪೂರನ್ ಅವರಿಗೆ ತಲೆನೋವಿನ ವಿಷಯವಾಗಿದೆ. ಇಂದಿನ ಪಂದ್ಯದಲ್ಲಾದರೂ ವಿಂಡೀಸ್ ಗೆಲುವಿನ ಲಯಕ್ಕೆ ಮರಳಲಿದೆಯೇ ಅನ್ನೋದು ಸದ್ಯದ ಕುತೂಹಲ. ಪಂದ್ಯ ಇಂದು ಸಂಜೆ ಭಾರತೀಯ ಕಾಲಮಾನ 8 ಗಂಟೆಗೆ ಶುರುವಾಗಲಿದೆ.
ಸಂಭವನೀಯ ತಂಡಗಳು
ವಿಂಡೀಸ್
1 ಕೈಲ್ ಮೇಯರ್ಸ್, 2 ಬ್ರ್ಯಾಂಡನ್ ಕಿಂಗ್, 3 ನಿಕೋಲಸ್ ಪೂರನ್ (ಕ್ಯಾಪ್ಟನ್ ಮತ್ತು ವಿ.ಕೀ), 4 ಜೇಸನ್ ಹೋಲ್ಡರ್, 5 ರೋವ್‌ಮನ್ ಪೊವೆಲ್, 6 ಶಿಮ್ರಾನ್ ಹೆಟ್ಮೆಯರ್, 7 ರೊಮಾರಿಯೋ ಶೆಫರ್ಡ್, 8 ಅಕೆಲ್ ಹೋಸೇನ್ 9 ಕೀಮೋ ಪಾಲ್ / ಹೇಡನ್ ವಾಲ್ಷ್ ಜೂನಿಯರ್, 10 ಅಲ್ಝರ್ರಿ ಜೋಸೆಫ್ 11 ಒಬೆಡ್ ಮೆಕಾಯ್
ಭಾರತ
1 ರೋಹಿತ್ ಶರ್ಮಾ (ನಾಯಕ), 2 ಸೂರ್ಯಕುಮಾರ್ ಯಾದವ್, 3 ಶ್ರೇಯಸ್ ಅಯ್ಯರ್, 4 ರಿಷಭ್ ಪಂತ್ (ವಿ.ಕೀ), 5 ಹಾರ್ದಿಕ್ ಪಾಂಡ್ಯ, 6 ರವೀಂದ್ರ ಜಡೇಜಾ, 7 ದಿನೇಶ್ ಕಾರ್ತಿಕ್, 8 ಆರ್ ಅಶ್ವಿನ್, 9 ರವಿ ಬಿಷ್ಣೋಯ್/ಹರ್ಷಲ್ ಪಟೇಲ್, 10 ಭುವನೇಶ್ವರ್ ಕುಮಾರ್, 11 ಭುವನೇಶ್ವರ್/ಅರ್ಶದೀಪ್ ಸಿಂಗ್