ನರೇಂದ್ರ ಮೋದಿ ಸರ್ಕಾರದ ನೀತಿಯಿಂದಾಗಿ ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಮೋದಿ ಸರ್ಕಾರ ಘೋಷಿಸಿದ ಬುಲೆಟ್ ರೈಲು ಇನ್ನೂ ಬಂದಿಲ್ಲ, ಆದರೆ ಆ ರೈಲಿಗಿಂತ ಹಣದುಬ್ಬರ ವೇಗವಾಗಿ ಓಡುತ್ತಿದೆ ಎಂದು ಟೀಕಿಸಿದೆ. ಇದರಿಂದ ಶ್ರೀಸಾಮಾನ್ಯನಿಗೆ ಇನ್ನಿಲ್ಲದ ಹೊರೆಯಾಗುತ್ತಿದೆ ಎಂದು ವಿರೋದ ಪಕ್ಷ ಹೇಳಿದೆ.
“ಮೋದಿ ಸರ್ಕಾರ ಘೋಷಿಸಿದ ಬುಲೆಟ್ ರೈಲು ಇನ್ನೂ ಬಂದಿಲ್ಲ, ಆದರೆ ಹಣದುಬ್ಬರವು ಆ ರೈಲಿಗಿಂತ ವೇಗವಾಗಿ ಓಡುತ್ತಿದೆ. ಕಳೆದ ಹತ್ತೂವರೆ ವರ್ಷಗಳಲ್ಲಿ ಹಣದುಬ್ಬರ ಎರಡು-ಮೂರು ಪಟ್ಟು ಹೆಚ್ಚಾಗಿದೆ. ತರಕಾರಿ, ಅಡುಗೆ ಎಣ್ಣೆ, ಅಗತ್ಯ ವಸ್ತುಗಳ ಬೆಲೆ ಸಾಮಾನ್ಯರಿಗೆ ಕೈಗೆಟುಕದಂತಾಗಿದೆ. ಮೋದಿ ಸರಕಾರದಲ್ಲಿ ಎಲ್ಲವೂ ದುಬಾರಿಯಾಗುತ್ತಿದೆ. ಟೊಮೆಟೊದಿಂದ ಆಲೂಗಡ್ಡೆ, ಎಣ್ಣೆ ಮತ್ತು ಹಾಲು ಇವುಗಳ ಬೆಲೆಯೇರಿಕೆಯಿಂದಾಗಿ ಸಾಮಾನ್ಯರಿಗೆ ನಷ್ಟವಾಗುತ್ತಿದೆ,’’ ಎಂದು ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ.
ನೀವು ಭರವಸೆ ನೀಡಿದ ಒಳ್ಳೆಯ ದಿನಗಳು ಇವೇ? ‘ಎಕ್ಸ್’ ವೇದಿಕೆಯಲ್ಲಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ ಅವರು, ಜನರು ಉತ್ತರವನ್ನು ಬಯಸುತ್ತಾರೆ. ಇದನ್ನು ನಾವು ಸುಮ್ಮನೆ ವಾಕ್ಚಾತುರ್ಯ ಪ್ರದರ್ಶಿಸುವ ಸಲುವಾಗಿ ಹೇಳುತ್ತಿದ್ದಾರೆ. ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ ಎಂದು ಮಾಧ್ಯಮಗಳಲ್ಲಿ ಹರಿಹಾಯ್ದಿರುವ ಜೈರಾಮ್ ರಮೇಶ್, ಕೇಂದ್ರ ಸರ್ಕಾರದ ಧೋರಣೆಯನ್ನು ಟೀಕಿಸಿದ್ದಾರೆ.