Friday, February 28, 2025

ಸತ್ಯ | ನ್ಯಾಯ |ಧರ್ಮ

ಇನ್ಫೋಸಿಸ್ ಸಂಸ್ಥೆಯಿಂದ ವಜಾ ಪ್ರಕರಣ; ಕೆಲಸ ಕಳೆದುಕೊಂಡವರು ಕಂಪನಿ ಉದ್ಯೋಗಿಗಳೇ ಅಲ್ಲ ಎಂದು ವರದಿ ಸಲ್ಲಿಕೆ

ಐಟಿ ದೈತ್ಯ ಭಾರತೀಯ ಮೂಲದ ಇನ್ಫೋಸಿಸ್ ಕಂಪನಿಯು ಇತ್ತೀಚೆಗೆ ತನ್ನ ಮೈಸೂರು ಘಟಕದಿಂದ ಮುನ್ನೂರಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆ ಕೇಳಿದ್ದ ಪ್ರಶ್ನೆಗಳಿಗೆ, ವಜಾಗೊಂಡವರು ಸಂಸ್ಥೆಯ ಉದ್ಯೋಗಿಗಳೇ ಅಲ್ಲ ಎಂದು ವರದಿ ನೀಡಿದೆ.

ಕರ್ನಾಟಕ ಕಾರ್ಮಿಕ ಇಲಾಖೆಯು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ ಮಧ್ಯಂತರ ವರದಿ ಸಲ್ಲಿಸಿದೆ. ಮೈಸೂರು ಕ್ಯಾಂಪನ್‌ನಿಂದ ಇನ್ಫೋಸಿಸ್ ಸುಮಾರು 300 ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಈ ವಜಾ ಪ್ರಕ್ರಿಯೆಯಲ್ಲಿ ಕಂಪನಿಯು ಯಾವುದೇ ಕಾರ್ಮಿಕ ಕಾನೂನುಗಳ ಉಲ್ಲಂಘನೆ ಆಗಿಲ್ಲ ಎಂದು ಆ ವರದಿಯಲ್ಲಿ ತಿಳಿಸಲಾಗಿದೆ.

ಕಂಪನಿಯು ವಜಾಗೊಳಿಸಿದ ವ್ಯಕ್ತಿಗಳು ಅವರು ಕಂಪನಿಯು ಉದ್ಯೋಗಿಗಳು ಅಲ್ಲ. ಬದಲಾಗಿ ತರಬೇತಿ ಪಡೆದವರು ಎಂದು ಇಲಾಖೆಯು ಸ್ಪಷ್ಟಪಡಿಸಿದೆ. ಹೀಗಾಗಿ ಇದರಲ್ಲಿ ಕಾರ್ಮಿಕ ಕಾನೂನು ಉಲ್ಲಂಘನೆ ಆಗಿಲ್ಲ ಎಂದು ಹೇಳಿದೆ.

ಇನ್ಫೋಸಿಸ್‌ ನಿಂದ ಹೊರ ಬಂದ ನೂರಾರು ವ್ಯಕ್ತಿಗಳು ಮತ್ತು ಕಂಪನಿ ಮಧ್ಯೆ ಉದ್ಯೋಗಿ-ಉದ್ಯೋಗದಾತ ಎಂಬ ಯಾವ ಸಂಬಂಧವು ಇರಲಿಲ್ಲ. ವಜಾಗೊಂಡವರು ಕಂಪನಿ ನೌಕರ ಎಂದು ಕರೆಯಲು ಯಾವುದೇ ನೇಮಕಾತಿ ಪತ್ರ ಸಹ ನೀಡಿರಲಿಲ್ಲ. ಅವರು ಸಂಸ್ಥೆಯಿಂದ ತರಬೇತಿ ಪಡೆದವರಾಗಿದ್ದಾರೆ. ಮೂರು ತಿಂಗಳು ಅಪ್ರೆಂಟಿಸ್ ತರಬೇತಿ ಪಡೆದಿದ್ದರು. ಅದಕ್ಕಾಗಿ ಸ್ಟೇಫಂಡ್ ಕೂಡ ಸ್ವೀಕರಿಸಿದ್ದಾರೆ ಎಂದು ಸಂಸ್ಥೆಯು ಕಾರ್ಮಿಕ ಇಲಾಖೆಗೆ ವರದಿ ಮಾಡಿದೆ.

ಈ ಬಗ್ಗೆ ಇನ್ನೊಂದು ವಾರದಲ್ಲಿ ಅಂತಿಮ ವರದಿಯೊಂದನ್ನು ಮತ್ತೆ ಸಲ್ಲಿಸಲಾಗುವುದು. ಸದ್ಯ ಈ ವರದಿ ಪ್ರತಿಯನ್ನು ಕೇಂದ್ರಕ್ಕೆ ರವಾನಿಸಲಾಗುವುದು ಎಂದು ಕಾರ್ಮಿಕ ಇಲಾಖೆ ತಿಳಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page