Friday, June 14, 2024

ಸತ್ಯ | ನ್ಯಾಯ |ಧರ್ಮ

‘ಮಹಾರಾಜ್’ ಸಿನಿಮಾ ಬಿಡುಗಡೆಗೆ ತಡೆಯಾಜ್ಞೆ: ಶ್ರೀಕೃಷ್ಣನ ಭಕ್ತರ ಪರ ನಿಂತ ಕೋರ್ಟ್‌

ಹಿಂದೂಗಳ ಆರಾಧ್ಯ ದೈವ ಶ್ರೀಕೃಷ್ಣನಿಗೆ ಅವಮಾನಿಸಲಾಗಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ನಟ ಅಮೀರ್ ಖಾನ್ ಪುತ್ರ ಜುನೈದ್ ಖಾನ್ ಅಭಿನಯದ ‘ಮಹಾರಾಜ್’ ಸಿನಿಮಾ ಬಿಡುಗಡೆಗೆ ಗುಜರಾತ್ ಹೈಕೋರ್ಟ್ ಗುರುವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಚಿತ್ರವು ಜೂನ್ 14 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿತ್ತು. ನ್ಯಾಯಮೂರ್ತಿ ಸಂಗೀತಾ ಕೆ ವಿಶನ್ ಅವರು ಚಲನಚಿತ್ರದ ಬಿಡುಗಡೆಯನ್ನು ತಡೆಹಿಡಿದು ಮಧ್ಯಂತರ ಆದೇಶವನ್ನು ಹೊರಡಿಸಿದ್ದಾರೆ. ಈ ಕುರಿತು ಹೆಚ್ಚಿನ ವಿಚಾರಣೆಯನ್ನು ಜೂನ್ 18ಕ್ಕೆ ನಿಗದಿಪಡಿಸಲಾಗಿದೆ.

ಅರ್ಜಿಗಳನ್ನು  ಪರಿಗಣಿಸಲಾಗಿದೆ, ಪ್ರತಿವಾದಿಗಳಿಗೆ ನೋಟಿಸ್ ನೀಲಾಗಿದೆ, ಮುಂದಿನ ವಿಚಾರಣೆಯವರೆಗೆ ಪ್ಯಾರಾಗ್ರಾಫ್ 11ರ ಪ್ರಕಾರ ಸಿನಿಮಾ ಬಿಡುಗಡೆ ಮಾಡದಂತೆ ನ್ಯಾಯಾಲಯ ಮಧ್ಯಂತರ ನಿರ್ದೇಶನ ನೀಡಿದೆ. ಶ್ರೀಕೃಷ್ಣನ ಭಕ್ತರು ಮತ್ತು ಪುಷ್ಟಿಮಾರ್ಗ್ ಪಂಥದ ಅನುಯಾಯಿಗಳ ಪರವಾಗಿ ಸಲ್ಲಿಸಲಾದ ಮನವಿಯ ಮೇರೆಗೆ ಈ ಆದೇಶವನ್ನು ನೀಡಲಾಗಿದೆ ತಿಳಿದು ಬಂದಿದೆ.

1862ರ ಮಾನಹಾನಿ ಪ್ರಕರಣವನ್ನು ಆಧರಿಸಿದ “ಮಹಾರಾಜ್” ಚಲನಚಿತ್ರವು ಸಾರ್ವಜನಿಕ ಸುವ್ಯವಸ್ಥೆಯನ್ನು ಅಡ್ಡಿಪಡಿಸುತ್ತದೆ ಮತ್ತು ಹಿಂದೂ ಧರ್ಮದ ವಿರುದ್ಧ ಕೋಮುಭಾವನೆ ಪ್ರಚೋದಿಸುತ್ತದೆ ಎಂದು ವಾದಿಸಲಾಗಿತ್ತು. ಸುಪ್ರೀಂಕೋರ್ಟ್‌ನ ಅಂದಿನ ನ್ಯಾಯಾಧೀಶರು ನಿರ್ಧರಿಸಿದ 1862ರ ಪ್ರಕರಣವು ಹಿಂದೂ ಧರ್ಮ, ಭಗವಾನ್ ಕೃಷ್ಣ ಮತ್ತು ಭಕ್ತಿಗೀತೆಗಳು ಮತ್ತು ಸ್ತೋತ್ರಗಳ ಬಗ್ಗೆ ತೀವ್ರವಾಗಿ ನಿಂದಿಸುವ ಟೀಕೆಗಳನ್ನು ಚಿತ್ರ ಒಳಗೊಂಡಿದೆ ಎಂದು ಅರ್ಜಿದಾರರು ಕೋರ್ಟ್‌ನಲ್ಲಿ ವಾದಿಸಿದ್ದರು.

Related Articles

ಇತ್ತೀಚಿನ ಸುದ್ದಿಗಳು