ಇರಾನ್-ಇಸ್ರೇಲ್ ಯುದ್ದದ ಪರಿಣಾಮ 4335 ವಿಮಾನಗಳ – ಹಾರಾಟ ರದ್ದು

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಯುದ್ದ  ಶುರುವಾದಾಗಿನಿಂದ ಇಲ್ಲಿಯವರೆಗೂ  4335 ವಿಮಾನಗಳ ಹಾರಾಟ ರದ್ದಾಗಿದೆ ಎಂದು ಕೇಂದ್ರ ನಾಗರೀಕ ವಿಮಾನಯಾನ ಸಚಿವ ರಾಮ್  ಮೋಹನ್ ನಾಯ್ಡು ತಿಳಿಸಿದ್ದಾರೆ.

ಲೋಕಸಭೆಯಲ್ಲಿ ಇಂದು ಈ ಕುರಿತು ಮಾತನಾಡಿದ ಕೇಂದ್ರ ನಾಗರೀಕ ವಿಮಾನಯಾನ ಸಚಿವ ರಾಮ್  ಮೋಹನ್ ನಾಯ್ಡು ಅವರು, ಇರಾನ್ –ಇಸ್ರೇಲ್ ಯುದ್ದ ಶುರುವಾಗಿನಿಂದ ಈವರೆಗೆ   4335 ವಿಮಾನಗಳ ಹಾರಾಟ ರದ್ದುಗೊಂಡಿದೆ.  ವಿದೇಶಿ ವಿಮಾನಯಾನ ಸಂಸ್ಥೆಯ  1187 ವಿಮಾನಗಳ ಹಾರಾಟ ರದ್ದಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಪ್ರಯಾಣಿಕರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ. ಮಧ್ಯಪ್ರಾಚ್ಯದಲ್ಲಿ ವಿಮಾನ ಕಾರ್ಯಾಚರಣೆ ನಡೆಸುವ ಅಗತ್ಯವಲ್ಲ. ವಿಮಾನಯಾನ ರದ್ದತಿಯಿಂದಾಗಿ ಟಿಕೆಟ್ ದರ ಏರಿಕೆಯಾಗದಂತೆ ಕ್ರಮ ವಹಿಸಲಾಗಿದೆ.  ಟಿಕೆಟ ದರಗಳು ಅಸಹಜವಾಗಿ ಏರಿಕಯಾಗದಂತೆ ಕ್ರಮ ವಹಿಸಿದ್ದೇವೆ ಎಂದು  ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು