Home ಬ್ರೇಕಿಂಗ್ ಸುದ್ದಿ ಅಮೇರಿಕಾ ಎಚ್ಚರಿಕೆಗೆ ಇರಾನ್ ತಿರುಗೇಟು; ಇದೇ ಮುಂದುವರಿದರೆ ಅಮೇರಿಕಾ ದೊಡ್ಡ ಹೊಡೆತ ತಿನ್ನಲಿದೆ ಎಂದು ಪ್ರತಿಕ್ರಿಯೆ

ಅಮೇರಿಕಾ ಎಚ್ಚರಿಕೆಗೆ ಇರಾನ್ ತಿರುಗೇಟು; ಇದೇ ಮುಂದುವರಿದರೆ ಅಮೇರಿಕಾ ದೊಡ್ಡ ಹೊಡೆತ ತಿನ್ನಲಿದೆ ಎಂದು ಪ್ರತಿಕ್ರಿಯೆ

0

ಪಶ್ಚಿಮ ಏಷ್ಯಾ ತೀವ್ರತರವಾದ ಯುದ್ಧದ ಬಿಕ್ಕಟ್ಟಿನ ನಡುವೆ ಅಮೆರಿಕ ಮತ್ತು ಇರಾನ್ ನಡುವಿನ ಮಾತಿನ ಸಮರವು ಯುದ್ಧದ ಹಿನ್ನೆಲೆಯಲ್ಲಿ ಗಂಭೀರ ತಿರುವು ಪಡೆದುಕೊಂಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಕಠಿಣ ಎಚ್ಚರಿಕೆ ಹಿನ್ನೆಲೆಯಲ್ಲಿ, ಇರಾನ್ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದೆ.

ಡೊನಾಲ್ಡ್ ಟ್ರಂಪ್ ಅವರು, ಹಾರ್ಮುಜ್ ಜಲಸಂಧಿಯನ್ನು ತೆರೆಯದಿದ್ದರೆ ಅಥವಾ ಒಪ್ಪಂದಕ್ಕೆ ಬರದಿದ್ದರೆ ಇರಾನ್‌ನ ಪ್ರಮುಖ ವಿದ್ಯುತ್ ಸ್ಥಾವರಗಳು ಮತ್ತು ಮೂಲಸೌಕರ್ಯಗಳ ಮೇಲೆ ದಾಳಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಇದಕ್ಕೆ ಪ್ರತಿಯಾಗಿ ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಗಲೀಬ್ ತೀವ್ರವಾಗಿ ಪ್ರತಿಕ್ರಿಯಿಸಿ, ಅಮೆರಿಕದ ಕ್ರಮಗಳು ಇಡೀ ಪಶ್ಚಿಮ ಏಷ್ಯಾ ಪ್ರದೇಶವನ್ನು ಯುದ್ಧದ ಅಗ್ನಿಗೆ ತಳ್ಳಬಹುದು ಎಂದು ಎಚ್ಚರಿಸಿದ್ದಾರೆ. ಅಮೆರಿಕ ಕೈಗೊಳ್ಳುವ ಯಾವುದೇ ಆಕ್ರಮಣಕಾರಿ ನಿರ್ಧಾರವು ಅದರದೇ ಜನರಿಗೆ ಭಾರೀ ಪರಿಣಾಮ ಉಂಟುಮಾಡಬಹುದು ಎಂದು ಹೇಳಿದ್ದಾರೆ.

ಇನ್ನೊಂದೆಡೆ, ಇರಾನ್ ಸೈನಿಕ ವಲಯ ಅಮೆರಿಕದ ಮೇಲೆ ಆರೋಪಗಳನ್ನು ಮುಂದುವರೆಸಿ, ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೇತಾನ್ಯಹು ಅವರ ಪ್ರಭಾವದಲ್ಲಿ ಅಮೆರಿಕ ನಡೆದುಕೊಳ್ಳುತ್ತಿದೆ ಎಂದು ಟೀಕಿಸಿದೆ. ಇಂತಹ ಕ್ರಮಗಳು ಅಮೆರಿಕಕ್ಕೆ ದುಬಾರಿ ಪರಿಣಾಮ ತರಬಹುದು ಎಂದು ಎಚ್ಚರಿಸಲಾಗಿದೆ.

ಪ್ರಸ್ತುತ ಪರಿಸ್ಥಿತಿಯಲ್ಲಿ ಹಾರ್ಮುಜ್ ಜಲಸಂಧಿಯ ಸುತ್ತ ಭದ್ರತಾ ಚಟುವಟಿಕೆಗಳು ಹೆಚ್ಚಾಗಿದ್ದು, ಅಂತರಾಷ್ಟ್ರೀಯ ಸಮುದಾಯದ ಗಮನ ಈ ಪ್ರದೇಶದ ಮೇಲೆ ನೆಟ್ಟಿದೆ. ಯಾವುದೇ ಸೈನಿಕ ಕ್ರಮವು ಜಾಗತಿಕ ಮಟ್ಟದಲ್ಲಿ ದೊಡ್ಡ ಪರಿಣಾಮ ಉಂಟುಮಾಡುವ ಸಾಧ್ಯತೆ ಇದೆ.

You cannot copy content of this page

Exit mobile version