Monday, April 29, 2024

ಸತ್ಯ | ನ್ಯಾಯ |ಧರ್ಮ

ಇದು ಚುನಾವಣಾ ಆಯೋಗವೋ, ಬಿಜೆಪಿಯ ರಕ್ಷಣಾ ವಿಭಾಗವೋ?

ಹೊಸದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ದೂರುಗಳಿದ್ದರೂ, ಚುನಾವಣಾ ಆಯೋಗ (ಇಸಿಐ) ಇದುವರೆಗೆ ಯಾವುದೇ ದೂರುಗಳ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. 2019ರ ಚುನಾವಣೆಯ ನಂತರ, ಪ್ರತಿಪಕ್ಷಗಳು ಇಲ್ಲಿಯವರೆಗೆ ಪ್ರಧಾನಿ ವಿರುದ್ಧ ಕನಿಷ್ಠ 27 ದೂರುಗಳನ್ನು ಸಲ್ಲಿಸಿವೆ. ಆದಾಗ್ಯೂ, ಚುನಾವಣಾ ಆಯೋಗವು ಇಲ್ಲಿಯವರೆಗೆ ಇವುಗಳ ಬಗ್ಗೆ ಯಾವುದೇ ನಿರ್ದಿಷ್ಟ ಕ್ರಮ ಕೈಗೊಂಡಿಲ್ಲ. ದ್ವೇಷ ಭಾಷಣಗಳು, ಮತಗಳಿಗಾಗಿ ಸಶಸ್ತ್ರ ಪಡೆಗಳನ್ನು ಬಳಸುವುದು, ಧರ್ಮದ ಹೆಸರಿನಲ್ಲಿ ಮತಗಳನ್ನು ಕೇಳುವುದು ಮತ್ತು ರ್ಯಾಲಿಗಳಲ್ಲಿ ಪ್ರಧಾನಿಯವರ ಭಾಷಣಗಳನ್ನು ಸಿದ್ಧಪಡಿಸಲು ಸಚಿವಾಲಯಗಳನ್ನು ಬಳಸುವುದು ಇವುಗಳಲ್ಲಿ ಸೇರಿವೆ.

ಮೇ 25ರಂದು ಪ್ರಧಾನಿ ವಿರುದ್ಧದ ದೂರುಗಳಿಗೆ ಚುನಾವಣಾ ಆಯೋಗ ಮೊದಲ ಬಾರಿಗೆ ಸ್ಪಂದಿಸಿತ್ತು. “ನಿಮ್ಮ ಸ್ಟಾರ್ ಪ್ರಚಾರಕರ ಭಾಷಣಗಳಲ್ಲಿ ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿರಬಹುದು” ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ನೀಡಲಾದ ನೋಟಿಸಿನಲ್ಲಿ ತಿಳಿಸಲಾಗಿದೆ. ಕಾಂಗ್ರೆಸ್, ಸಿಪಿಐ (ಎಂ) ಮತ್ತು ಸಿಪಿಐ (ಎಂಎಲ್) ಲಿಬರೇಶನ್ ಪಕ್ಷಗಳ ದೂರುಗಳ ಆಧಾರದ ಮೇಲೆ ನೀಡಲಾದ ಈ ನೋಟಿಸಿನಲ್ಲಿ ಎಲ್ಲಿಯೂ ಪ್ರಧಾನಿಯ ಹೆಸರನ್ನು ಉಲ್ಲೇಖಿಸಲಾಗಿಲ್ಲ. 

ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ ಹಿಂದೂಗಳ ಆಸ್ತಿ ಮತ್ತು ಮಹಿಳೆಯರ ಮಂಗಳಸೂತ್ರಗಳನ್ನು ಕಸಿದುಕೊಳ್ಳುತ್ತದೆ ಮತ್ತು ನುಸುಳುಕೋರರು, ಮುಸ್ಲಿಮರಿಗೆ ಅದನ್ನು ಕೊಡುತ್ತದೆ ಎಂದು ರಾಜಸ್ಥಾನದ ಬನ್ಸ್ವಾರಾದಲ್ಲಿ ನಡೆದ ರ್ಯಾಲಿಯಲ್ಲಿ ಪ್ರಧಾನಿ ನೀಡಿದ ಹೇಳಿಕೆಗೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಅವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಸೋಮವಾರದೊಳಗೆ ತನ್ನ ನೋಟಿಸ್ಗೆ ಉತ್ತರಿಸುವಂತೆ ಚುನಾವಣಾ ಆಯೋಗ ಬಿಜೆಪಿಯನ್ನು ಕೇಳಿದೆ.

ದೂರುಗಳ ರಾಶಿ

ಪ್ರಧಾನಿ ವಿರುದ್ಧ ವಿರೋಧ ಪಕ್ಷಗಳು ಸಲ್ಲಿಸಿದ 27 ದೂರುಗಳನ್ನು ಕ್ವಿಂಟ್ ಪೋರ್ಟಲ್ ವಿಶ್ಲೇಷಿಸಿದೆ, ಅದರಲ್ಲಿ 12 ಧಾರ್ಮಿಕ ಭಾಷಣಗಳಿಗೆ ಸಂಬಂಧಿಸಿದವು, 8 ದೂರುಗಳು ಸಶಸ್ತ್ರ ಪಡೆಗಳ  ಹೆಸರಿನಲ್ಲಿ ಮತಯಾಚಿಸಿದ್ದಕ್ಕಾಗಿ ದಾಖಲಾಗಿವೆ. ಸರ್ಕಾರದ ಯೋಜನೆಗಳನ್ನು ರಾಜಕೀಯ ಹೇಳಿಕೆಯಲ್ಲಿ ಬಳಸಲಾಗಿದೆ ಎಂದು ದೂರು ದಾಖಲಿಸಲಾಗಿದೆ. ಧರ್ಮದ ಆಧಾರದ ಮೇಲೆ ಮತಗಳನ್ನು ಕೇಳಲಾಯಿತು. ಸರ್ಕಾರಿ ಸಚಿವಾಲಯಗಳನ್ನು ಚುನಾವಣಾ ಭಾಷಣಗಳಿಗೆ ಬಳಸಲಾಗುತ್ತಿದೆ ಎಂದು ತಲಾ ಒಂದು ದೂರು ದಾಖಲಾಗಿತ್ತು. ಪ್ರಚಾರದ ಸಮಯದಲ್ಲಿ, ಪ್ರಧಾನಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ನಲ್ಲಿ ಅನುಮಾನಾಸ್ಪದ ಕಪ್ಪು ಪೆಟ್ಟಿಗೆ ಇದೆ ಎಂದು ಆರೋಪಿಸಿ ಎರಡು ದೂರುಗಳು ದಾಖಲಾಗಿದ್ದವು. ಅಪ್ರಾಪ್ತ ವಯಸ್ಕರನ್ನು ಪ್ರಚಾರದಲ್ಲಿ ಬಳಸಿಕೊಳ್ಳಲಾಗಿದೆ ಮತ್ತು ಗಡುವಿನ ಅವಧಿ ಮುಗಿದ ನಂತರ ಪ್ರಚಾರ ಮಾಡಲಾಗಿದೆ ಎಂದು ಆರೋಪಿಸಿ ಪ್ರತಿ ದೂರನ್ನು ಚುನಾವಣಾ ಆಯೋಗಕ್ಕೆ ಹಸ್ತಾಂತರಿಸಲಾಯಿತು. ಹಲವು ದೂರುಗಳ ಹೊರತಾಗಿಯೂ ಚುನಾವಣಾ ಆಯೋಗವು ಒಂದರ ಬಗ್ಗೆಯೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಪಕ್ಷಗಳು ಆರೋಪಿಸಿವೆ.

ಅವರಿಗೆ ಏಕೆ ನೋಟಿಸ್ ನೀಡಿಲ್ಲ?

ಪಕ್ಷದ ಹೊಸ ಗೀತೆಯಿಂದ ‘ಜೈ ಭವಾನಿ’ ಮತ್ತು ‘ಹಿಂದೂ’ ಪದಗಳನ್ನು ತೆಗೆದುಹಾಕುವಂತೆ ಸೂಚಿಸಿ  ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಶಿವಸೇನೆ (ಠಾಕ್ರೆ) ಮುಖಂಡ ಉದ್ಧವ್ ಠಾಕ್ರೆ  ಅವರಿಗೆ ಚುನಾವಣಾ ಆಯೋಗ ಮೇ 21ರಂದು ನೋಟಿಸ್ ಕಳುಹಿಸಿತ್ತು. ಉದ್ಧವ್ ನಿರಾಕರಿಸಿದರು. ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ  ‘ಜೈ ಭಜರಂಗ ಬಲಿ’  ಎಂದು ಜಪಿಸಿ ನಂತರ ಮತ ಚಲಾಯಿಸುವಂತೆ ಪ್ರಧಾನಿ ಮೋದಿ ಮತದಾರರಿಗೆ ಕರೆ ನೀಡಿದ್ದರು. ಅಯೋಧ್ಯೆಯಲ್ಲಿ ಭಗವಾನ್ ಬಲರಾಮನ ಉಚಿತ ದರ್ಶನ ಪಡೆಯಲು ಬಿಜೆಪಿಗೆ ಮತ ಚಲಾಯಿಸುವಂತೆ ಗೃಹ ಸಚಿವ ಅಮಿತ್ ಶಾ ಜನರಿಗೆ ಹೇಳಿದ್ದಾರೆ ಮತ್ತು ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಕಳೆದ ವರ್ಷ ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ಹನುಮಾನ್ ಅವರ ಹೆಸರನ್ನು ಉಲ್ಲೇಖಿಸಲಾಗಿದೆ ಎಂದು ಕಾಂಗ್ರೆಸ್ ಪಕ್ಷ ದೂರು ನೀಡಿತ್ತು. ಚುನಾವಣಾ ಆಯೋಗ ಕೂಡ ಇವುಗಳ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ.

ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ಇಸಿ

ನರೇಂದ್ರ ಮೋದಿ ಸರ್ಕಾರವು ಉದ್ದೇಶಪೂರ್ವಕವಾಗಿ ಚುನಾವಣಾ ಆಯೋಗದ ಸ್ವಾತಂತ್ರ್ಯವನ್ನು ದುರ್ಬಲಗೊಳಿಸುತ್ತಿದೆ. ಚುನಾವಣಾ ಆಯುಕ್ತರ ಆಯ್ಕೆ ಪ್ರಕ್ರಿಯೆಯಲ್ಲಿ ಸರ್ಕಾರದ ಉದ್ದೇಶ ಸ್ಪಷ್ಟವಾಗಿದೆ. ಭಾರತದ ಮುಖ್ಯ ನ್ಯಾಯಮೂರ್ತಿಯನ್ನು ಆಯ್ಕೆ ಸಮಿತಿಯಿಂದ ತೆಗೆದುಹಾಕುವ ಮೂಲಕ ಮತ್ತು ಅವರ ಸ್ಥಾನಕ್ಕೆ ಕೇಂದ್ರ ಸಚಿವರನ್ನು ನೇಮಿಸುವ ಮೂಲಕ ಕಾಯ್ದೆಗೆ ತಿದ್ದುಪಡಿಗಳನ್ನು ಮಾಡಲಾಗಿದೆ. ವಿರೋಧ ಪಕ್ಷದ ನಾಯಕರನ್ನು ಸಮಿತಿಯಲ್ಲಿ ಸೇರಿಸಲಾಗಿದ್ದರೂ, ಅವರ ಮಾತಿಗೆ ಅಲ್ಲಿ ಬೆಲೆಯಿಲ್ಲ. ಪ್ರಧಾನಿ ಇಷ್ಟಪಡುವವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಿಸುವ ಮೂಲಕ ಆಡಳಿತ ಪಕ್ಷವು ಆಟವನ್ನು ಆಡಿದೆ. ಅದು ಅರ್ಥಹೀನ ಕಾರಣಗಳಿಗಾಗಿ ವಿರೋಧ ಪಕ್ಷದ ನಾಯಕರಿಗೆ ನೋಟಿಸ್ ನೀಡಲು ಪ್ರಾರಂಭಿಸಿದೆ. ಆಡಳಿತ ಪಕ್ಷದ ಜನರು ಎಷ್ಟೇ ಹೇಳಿದರೂ ತಲೆಕೆಡಿಸಿಕೊಳ್ಳುವವರು ಯಾರೂ ಇಲ್ಲ.

ವಿರೋಧ ಪಕ್ಷಗಳ ಮೇಲಷ್ಟೇ ದಾಳಿ

ಕಳೆದ ವರ್ಷ ನವೆಂಬರ್ 23ರಂದು ಚುನಾವಣಾ ಆಯೋಗವು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ನೋಟಿಸ್ ಕಳುಹಿಸಿತ್ತು. ಪ್ರಧಾನಿ ವಿರುದ್ಧದ ವರ ಹೇಳಿಕೆಯನ್ನು ಉಲ್ಲೇಖಿಸಿ, ರಾಜಕೀಯ ವಿರೋಧಿಗಳ ವಿರುದ್ಧ ನಾಯಕರು ಆರೋಪಗಳನ್ನು ಮಾಡುವುದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ ಎಂದು ಯೋಗ ಹೇಳಿತ್ತು. ಆದರೆ, ಈ ವರ್ಷದ ಆರಂಭದಲ್ಲಿ ಮೋದಿ ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಿಕೊಂಡು ಆರೋಪಗಳನ್ನು ಮಾಡಿದ್ದರು. ಕರ್ನಾಟಕ ಚುನಾವಣೆಗಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು ನಿಷೇಧಿಸುವ ಬಗ್ಗೆ ಉಲ್ಲೇಖಿಸಲಾಗಿದೆ. ಈ ನಿಷೇಧವು ಹನುಮಂತನನ್ನು ಸೆರೆಹಿಡಿಯುವುದಕ್ಕೆ ಸಮನಾಗಿದೆ ಎಂದು ಮೋದಿ ಹೇಳಿದ್ದರು. ಆದರೆ ಅದರ ಬಗ್ಗೆ ಆಯೋಗ ತುಟಿ ಎರಡು ಮಾಡಿಲ್ಲ. ಪ್ರಧಾನಿ ಮೋದಿ ಬಗ್ಗೆ ಹೇಳಿಕೆ ನೀಡಿದ್ದಕ್ಕಾಗಿ ಚುನಾವಣಾ ಆಯೋಗವು ಆಮ್ ಆದ್ಮಿ ಪಕ್ಷಕ್ಕೆ ನೋಟಿಸ್ ಕಳುಹಿಸಿದೆ. 2019ರಲ್ಲಿ ಚುನಾವಣಾ ಆಯೋಗವು ಹಿರಿಯ ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು ಅವರನ್ನು ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ 72 ಗಂಟೆಗಳ ಕಾಲ ಪ್ರಚಾರ ಮಾಡದಂತೆ ನಿಷೇಧಿಸಿತ್ತು.

ಯೆಚೂರಿ ಅವರ ದೂರಿಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ

ಮಾರ್ಚ್ 27, 2019ರಂದು, ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅಂದಿನ ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದು, ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ನಂತರ ಆಲ್ ಇಂಡಿಯಾ ರೇಡಿಯೋ ಮತ್ತು ದೂರದರ್ಶನದಲ್ಲಿ ಪ್ರಧಾನಿಯವರು ರಾಷ್ಟ್ರವನ್ನುದ್ದೇಶಿಸಿ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ. ಡಿಆರ್‌ಡಿಒ ವಿಜ್ಞಾನಿಗಳು ಉಪಗ್ರಹ ವಿರೋಧಿ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದ್ದಾರೆ ಎಂದು ಪ್ರಧಾನಿ ಘೋಷಿಸಿದರು. ಸಾಮಾನ್ಯವಾಗಿ ಇಂತಹ ಹೇಳಿಕೆಗಳನ್ನು ಡಿಆರ್ ಡಿಒದಂತಹ ಸಂಬಂಧಿತ ಸಂಸ್ಥೆಗಳು ನೀಡುತ್ತವೆ. ಇದಕ್ಕೆ ವಿರುದ್ಧವಾಗಿ, ಪ್ರಧಾನಿಯವರು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಈ ಘೋಷಣೆ ಮಾಡಿದ್ದಾರೆ ಎಂದು ಯೆಚೂರಿ ತಮ್ಮ ಪತ್ರದಲ್ಲಿ ದೂರಿದ್ದಾರೆ. ಚುನಾವಣಾ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಪ್ರಧಾನಿ ಚುನಾವಣಾ ಪ್ರಚಾರದ ಸಮಯದಲ್ಲಿ ಈ ಘೋಷಣೆ ಮಾಡಿದ್ದಾರೆ ಮತ್ತು ಹಾಗೆ ಮಾಡುವುದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ ಎಂದು ಅವರು ಹೇಳಿದರು. ಆದಾಗ್ಯೂ, ದೂರಿನ ಮೇರೆಗೆ ಚುನಾವಣಾ ಆಯೋಗ ರಚಿಸಿದ ಸಮಿತಿಯು ಪ್ರಧಾನಿಯ ಹೇಳಿಕೆಯು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗುವುದಿಲ್ಲ ಎಂದು ತೀರ್ಮಾನಿಸಿತು. ಅವರ ದೂರು ಕೇವಲ “ಅಧಿಕೃತ ಮಾಧ್ಯಮದ ದುರುಪಯೋಗ” ಎನ್ನಲಾಗಿದೆ. ಇದನ್ನು ಈ ವಿಷಯಕ್ಕೆ ಸೀಮಿತಗೊಳಿಸುವುದಕ್ಕೆ ಯೆಚೂರಿ ಆಕ್ಷೇಪ ವ್ಯಕ್ತಪಡಿಸಿದರು. ಈ ಸಂಬಂಧ ಅವರು ಚುನಾವಣಾ ಆಯೋಗಕ್ಕೂ ಪತ್ರ ಬರೆದಿದ್ದಾರೆ. ಆದರೆ, ಚುನಾವಣಾ ಆಯೋಗ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Related Articles

ಇತ್ತೀಚಿನ ಸುದ್ದಿಗಳು