Home ರಾಜ್ಯ ದಾವಣಗೆರೆ ಉಚಿತ ಅಕ್ಕಿ ತಿಂದು, ಬಸ್‌ನಲ್ಲಿ ಓಡಾಡಿದರೆ ಸಾಕಾ, ಕೆಲಸ ಬೇಡ್ವ?: ಯುವಕರ ಉದ್ಯೋಗದ ಕುರಿತು ಯತ್ನಾಳ್...

ಉಚಿತ ಅಕ್ಕಿ ತಿಂದು, ಬಸ್‌ನಲ್ಲಿ ಓಡಾಡಿದರೆ ಸಾಕಾ, ಕೆಲಸ ಬೇಡ್ವ?: ಯುವಕರ ಉದ್ಯೋಗದ ಕುರಿತು ಯತ್ನಾಳ್ ಪ್ರಶ್ನೆ

0

ದಾವಣಗೆರೆ: ರಾಜ್ಯದಲ್ಲಿ ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ ಮತ್ತು ಯಾವುದೇ ನೇಮಕಾತಿಗಳು ನಡೆಯುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ರಾಜ್ಯದಲ್ಲಿ ನೇಪಾಳದಲ್ಲಿ ಆದ ಸ್ಥಿತಿ ಬರಲಿದೆ ಎಂದು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಎಚ್ಚರಿಕೆ ನೀಡಿದ್ದಾರೆ.

ದಾವಣಗೆರೆಯಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು:

ನೇಮಕಾತಿಗಳ ವಿಳಂಬ: ಪೊಲೀಸ್ ನೇಮಕಾತಿಯಲ್ಲಿ ವಿಳಂಬವಾಗುತ್ತಿದೆ. ಇಂದು ಧಾರವಾಡದಲ್ಲಿ ಪೊಲೀಸ್ ನೇಮಕಾತಿಗಾಗಿ 16 ಸಾವಿರಕ್ಕೂ ಹೆಚ್ಚು ಯುವಕರು ಸೇರಿದ್ದಾರೆ.

ವಯಸ್ಸಿನ ಮಿತಿ ಸಡಿಲಿಕೆ ಆಗ್ರಹ: “ನಾನು ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಿದ್ದೇನೆ, ಸದನದಲ್ಲಿಯೂ ಕೇಳಿಕೊಂಡಿದ್ದೇನೆ. ಪೊಲೀಸ್ ನೇಮಕಾತಿಯಲ್ಲಿ ವಯಸ್ಸಿನ ಮಿತಿಯನ್ನು ಸ್ವಲ್ಪ ಸಡಿಲಗೊಳಿಸಿ. ಈಗಾಗಲೇ ನೇಮಕಾತಿಗಾಗಿ ಕಾದು ಕಾದು ಹಲವರ ವಯಸ್ಸಿನ ಮಿತಿ ಕಳೆದಿದೆ. ಅವರು ಏನು ಮಾಡಬೇಕು? ಸರ್ಕಾರದ ತಪ್ಪಿಗೆ ಅಭ್ಯರ್ಥಿಗಳಿಗೆ ಶಿಕ್ಷೆಯಾಗುತ್ತಿದೆ” ಎಂದು ಯತ್ನಾಳ್ ಹೇಳಿದರು.

ಉದ್ಯೋಗದ ಕೊರತೆ: ಯಾವುದೇ ಒಂದು ಇಲಾಖೆಯ ನೇಮಕಾತಿಯನ್ನು ಸರ್ಕಾರ ಮಾಡುತ್ತಿಲ್ಲ. ಉದ್ಯೋಗಕ್ಕಾಗಿ ಅಲೆದು ಅಲೆದು ಯುವಕರು ರೋಸಿಹೋಗುತ್ತಿದ್ದಾರೆ ಎಂದು ಅವರು ಟೀಕಿಸಿದರು.

‘ಉಚಿತ ಸೌಲಭ್ಯಗಳಿಂದ ತೃಪ್ತರಾಗಬೇಕೇ?’:

ಮುಂದುವರಿದು ಮಾತನಾಡಿದ ಯತ್ನಾಳ್, ಸರ್ಕಾರವು ನೀಡುತ್ತಿರುವ ಉಚಿತ ಸೌಲಭ್ಯಗಳ ಕುರಿತು ಪ್ರಶ್ನಿಸಿದರು:

“ಉಚಿತ ಅಕ್ಕಿ ಅನ್ನ ತಿಂದು, ಬಸ್‌ನಲ್ಲಿ ಓಡಾಡಿಕೊಂಡು ಇರಬೇಕಾ? ಕೆಲಸಕ್ಕಾಗಿ ಹೀಗೆ ಅಡ್ಡಾಡುತ್ತಾ ಇದ್ದರೆ ಸಾಕೇ? ಈ ರೀತಿ ಇದ್ದರೆ ರಾಜ್ಯದಲ್ಲಿ ನೇಪಾಳದಲ್ಲಿ ಆದ ಸ್ಥಿತಿ ಬರುತ್ತದೆ. ಇದೇ ರೀತಿ ಆಗುವ ಮೊದಲು ಸರ್ಕಾರ ಎಚ್ಚರ ವಹಿಸಲಿ” ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

You cannot copy content of this page

Exit mobile version