Friday, April 26, 2024

ಸತ್ಯ | ನ್ಯಾಯ |ಧರ್ಮ

ಪೀನಟ್‌ ಬಟರ್ ಆರೋಗ್ಯಕ್ಕೆ ಒಳ್ಳೆಯದೇ? ಅದರಲ್ಲಿ ಏನಿದೆ?

ಅನೇಕ ಜನರು ಪೀನಟ್‌ ಬಟರ್ ಇಷ್ಟಪಡುತ್ತಾರೆ. ಪ್ರೋಟೀನ್‌ನ ಉತ್ತಮ ಮೂಲವಾಗಿರುವ ಈ ಪೀನಟ್‌ ಬಟರ್‌ ಸೇವನೆ ಆರೋಗ್ಯಕರವೇ?

ಪೌಷ್ಟಿಕತಜ್ಞರು ಏನು ಹೇಳುತ್ತಾರೆ?

ಪೀನಟ್‌ ಬಟರ್ ಯಾವ ಪದಾರ್ಥಗಳನ್ನು ಹೊಂದಿದೆ?

ಇದು ಹೃದ್ರೋಗವನ್ನು ತಡೆಯುತ್ತದೆ ಎಂಬುದು ನಿಜವೇ?

ಎಷ್ಟು ತಿನ್ನಬೇಕು.. ಯಾರಾದರೂ ತಿನ್ನಬಹುದೇ?

Peanut butter: ಪೀನಟ್‌ ಬಟರ್‌ ಎಂದರೇನು? ಅದನ್ನು ಹೇಗೆ ತಯಾರಿಸಲಾಗುತ್ತದೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಮುಂದಕ್ಕೆ ಓದಿ.

ಪೀನಟ್‌ ಬಟರ್‌ ಎನ್ನುವುದು ನೆಲಗಡಲೆಯಿಂದ ತಯಾರಿಸಿದ ವಸ್ತುವಾಗಿದೆ.

ಪೀನಟ್‌ ಬಟರ್‌ ತಯಾರಿಕೆಯಲ್ಲಿ ನೆಲಗಡಲೆಯನ್ನು ಮೊದಲು ಹುರಿದು ನಂತರ ಬೇಯಿಸಿ ಅದರ ಸಿಪ್ಪೆ ತೆಗೆಯಲಾಗುತ್ತದೆ. ಸಿಪ್ಪೆ ತೆಗೆದ ನಂತರ, ಕಡಲೆಕಾಯಿಯನ್ನು ಪೇಸ್ಟ್ ಆಗಿ ತಯಾರಿಸಲಾಗುತ್ತದೆ.

ಈ ಪೇಸ್ಟಿಗೆ ರುಚಿ ಮತ್ತು ಸುವಾಸನೆ ಬರಲು ಬೆಣ್ಣೆ, ಸಕ್ಕರೆ, ಉಪ್ಪು ಮತ್ತು ಇತರ ಪದಾರ್ಥಗಳನ್ನು ಸೇರಿಸಲಾಗುತ್ತದೆ.

ಕಡಲೆಕಾಯಿ ಪೇಸ್ಟ್‌ಗೆ ಸೇರಿಸಲಾದ ಎಲ್ಲಾ ಇತರ ಪದಾರ್ಥಗಳ ಅಳತೆ ಮತ್ತು ಪ್ರಮಾಣವನ್ನು ಅವಲಂಬಿಸಿ ರುಚಿ ಮತ್ತು ಸ್ಥಿರತೆ ಬದಲಾಗುತ್ತದೆ.

ಇದು ಮಾರುಕಟ್ಟೆಯಲ್ಲಿ ಸ್ಮೂತ್, ಕ್ರಂಚಿ ಮೊದಲಾದ ಅವತಾರಗಳಲ್ಲಿ ಮಾರುಕಟ್ಟೆಯಲ್ಲಿ ಸಿಗುತ್ತದೆ.

ಒಂದು ಚಮಚ ಪೀನಟ್‌ ಬಟರ್‌ (16 ಗ್ರಾಂ) ಹೊಂದಿರುವ ಪೋಷಕಾಂಶಗಳು ಈ ಕೆಳಗಿನಂತಿರುತ್ತವೆ.

97 kcal ಶಕ್ತಿ

3.6 ಗ್ರಾಂ ಪ್ರೋಟೀನ್

8.3 ಗ್ರಾಂ ಕೊಬ್ಬು

2 ಗ್ರಾಂ ಸ್ಯಾಚುರೇಟೆಡ್ ಕೊಬ್ಬು

2.1 ಗ್ರಾಂ ಪಿಷ್ಟ

1.1 ಗ್ರಾಂ ಸಕ್ಕರೆ

1.1 ಗ್ರಾಂ ಫೈಬರ್

ಕೆಲವು ಬ್ರ್ಯಾಂಡ್‌ಗಳು ಪೀನಟ್‌ ಬಟರ್‌ ತಯಾರಿಸುವಾಗ ಎಣ್ಣೆ, ಸಕ್ಕರೆ ಅಥವಾ ಕ್ಸಿಲಿಟಾಲ್ ಮತ್ತು ಉಪ್ಪಿನಂತಹ ಪದಾರ್ಥಗಳನ್ನು ಸೇರಿಸುತ್ತವೆ. ಈ ಪದಾರ್ಥಗಳನ್ನು ಅವಲಂಬಿಸಿ, ಕಡಲೆಕಾಯಿ ಬೆಣ್ಣೆಯ ಪೌಷ್ಟಿಕಾಂಶದ ವಿವರ ಸ್ವಲ್ಪಮಟ್ಟಿಗೆ ಬದಲಾಗುತ್ತದೆ.

ಕೆಲವದರಲ್ಲಿ ಸಕ್ಕರೆ ಹೆಚ್ಚಿದ್ದರೆ, ಇನ್ನು ಕೆಲವು ಕಡಿಮೆ ಕೊಬ್ಬು ಹೊಂದಿರುತ್ತವೆ. ಸಾಧ್ಯವಾದಷ್ಟು ಹೆಚ್ಚು ಕಡಲೆಕಾಯಿ ಪ್ರಮಾಣವನ್ನು ಹೊಂದಿರುವ ಪೀನಟ್‌ ಬಟರ್ ಖರೀದಿಸಲು ಮರೆಯದಿರಿ.

ಪೀನಟ್‌ ಬಟರ್ ಸೇವನೆಯಿಂದ ಸಿಗುವ ಆರೋಗ್ಯ ಪ್ರಯೋಜನಗಳು ಇವು.

ಪೋಷಕಾಂಶಗಳಿಂದ ಸಮೃದ್ಧ: ನೆಲಗಡಲೆಯಲ್ಲಿ ಪೋಷಕಾಂಶಗಳು ಸಮೃದ್ಧವಾಗಿವೆ. ಇದು ಮೆಗ್ನೀಸಿಯಮ್, ಸತು, ಕಬ್ಬಿಣ ಮತ್ತು ತಾಮ್ರದಂತಹ ಖನಿಜಗಳನ್ನು ಸಹ ಒಳಗೊಂಡಿದೆ. ಇ ಮತ್ತು ಬಿ ಗುಂಪಿನ ಜೀವಸತ್ವಗಳನ್ನು ಹೊಂದಿರುತ್ತದೆ.

ಸಮತೋಲಿತ ಶಕ್ತಿಯ ಮೂಲ: ಕಡಲೆಕಾಯಿ ಪ್ರೋಟೀನ್, ಕಾರ್ಬೋಹೈಡ್ರೇಟ್ಗಳು ಮತ್ತು ಕೊಬ್ಬನ್ನು ಹೊಂದಿರುತ್ತದೆ. ಇದರಿಂದ ಹೆಚ್ಚಿನ ಕ್ಯಾಲೋರಿಕ್ ಶಕ್ತಿಯನ್ನು ಪಡೆಬಹುದು.

ಆರೋಗ್ಯಕರ ಕೊಬ್ಬುಗಳು: ಪೀನಟ್‌ ಬಟರ್ ಒಲೀಕ್ ಆಮ್ಲದಂತಹ ಮೊನೊಸಾಚುರೇಟೆಡ್ ಕೊಬ್ಬು ಸೇರಿದಂತೆ ಆರೋಗ್ಯಕರ ಕೊಬ್ಬುಗಳನ್ನು ಹೊಂದಿರುತ್ತದೆ. ಆಲಿವ್ ಎಣ್ಣೆಯಲ್ಲಿಯೂ ಒಲೀಕ್ ಆಮ್ಲವಿದೆ. ಒಲೀಕ್ ಆಮ್ಲವು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂದು ವೈದ್ಯರು ಹೇಳುತ್ತಾರೆ. ಒಂದು ಚಮಚ ಪೀನಟ್‌ ಬಟರ್ ವಯಸ್ಕರ ದೈನಂದಿನ ಸೇವನೆಯ 10 ಪ್ರತಿಶತದಷ್ಟು ಕೊಬ್ಬನ್ನು ಒದಗಿಸುತ್ತದೆ.

ಫೈಬರ್ ಸಮೃದ್ಧ: ಪೀನಟ್‌ ಬಟರ್ ಸಾಕಷ್ಟು ಫೈಬರ್‌ ಅಂಶದಿಂದ ಸಮೃದ್ಧವಾಗಿದೆ. ಪೀನಟ್‌ ಬಟರ್ ತಯಾರಿಸುವಾಗ ಸಿಪ್ಪೆ ತೆಗೆಯದೆ ಬಳಸಿದರೆ ನಾರಿನ ಅಂಶ ಇನ್ನೂ ಹೆಚ್ಚಾಗಿರುತ್ತದೆ. ಒಂದು ಚಮಚ ಸಿಪ್ಪೆ ತೆಗೆಯದ ಪೀನಟ್‌ ಬಟರ್ 1.3 ಗ್ರಾಂ ಫೈಬರ್ ಅನ್ನು ಹೊಂದಿರುತ್ತದೆ. ಅದೇ ಸಿಪ್ಪೆ ರಹಿತ ಪೀನಟ್‌ ಬಟರ್ ಬಳಸಿದರೆ, ಅದು ಒಂದು ಚಮಚವು 0.98 ಗ್ರಾಂನಿಂದ 1.1 ಗ್ರಾಂ ಫೈಬರ್ ಹೊಂದಿರುತ್ತದೆ.

ಕೋಎಂಜೈಮ್ Q10: ನೆಲಗಡಲೆ ಮತ್ತು ಅದರ ಹೊಟ್ಟು ಆಂಟಿಆಕ್ಸಿಡೆಂಟ್ ಕೋಎಂಜೈಮ್ Q10 ಅನ್ನು ಹೊಂದಿರುತ್ತವೆ. ಇದು ಚರ್ಮ, ಮೆದುಳು, ಶ್ವಾಸಕೋಶ ಮತ್ತು ಹೃದಯಕ್ಕೆ ಒಳ್ಳೆಯದು. ಪರಿಧಮನಿಯ ಕಾಯಿಲೆಗಳಿರುವ ಜನರಲ್ಲಿ ಆಮ್ಲಜನಕದ ಮಟ್ಟವು ಕಡಿಮೆಯಾದ ಪರಿಸ್ಥಿತಿಗಳಲ್ಲಿ ಸಹಕಿಣ್ವ Q10 ನಿರ್ಣಾಯಕವಾಗಿದೆ.

ಪ್ಲಾಂಟ್ ಸ್ಟಾನಾಲ್ಸ್, ಸ್ಟೆರಾಲ್ಸ್: ನೆಲಗಡಲೆ ಮತ್ತು ಪೀನಟ್‌ ಬಟರ್ ಸಪ್ಲಾಂಟ್ ಸ್ಟಾನಾಲ್ಸ್ ಮತ್ತು ಸ್ಟೆರಾಲ್ಸ್ ಅಂಶವನ್ನು ಹೊಂದಿರುತ್ತದೆ. ಅವು ಕೊಲೆಸ್ಟ್ರಾಲ್ ಪರಿಣಾಮವನ್ನು ಕಡಿಮೆ ಮಾಡಿ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತವೆ.

ಯಾರು ಬೇಕಿದ್ದರೂ ಇದನ್ನು ತಿನ್ನಬಹುದೇ? ಎಷ್ಟು ತಿನ್ನಬಹುದು?

ನೆಲಗಡಲೆ ಅಲರ್ಜಿ ಇರುವವರು ಪೀನಟ್‌ ಬಟರ್ ತಿನ್ನಬಾರದು.

ಬೇರೆ ಯಾರು ಬೇಕಿದ್ದರೂ ತಿನ್ನಬಹುದು. ಸಕ್ಕರೆ ಕಾಯಿಲೆ ಇರುವವರು ಮಾರುಕಟ್ಟೆಯಲ್ಲಿ ಸಿಗುವ ಪೀನಟ್‌ ಬಟರ್‌ನಲ್ಲಿರುವ ಸಕ್ಕರೆಯ ಪ್ರಮಾಣವನ್ನು ಪರೀಕ್ಷಿಸಬೇಕು.

ದಿನಕ್ಕೆ ಒಂದು ಅಥವಾ ಎರಡು ಚಮಚ ಪೀನಟ್‌ ಬಟರ್ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು.

Related Articles

ಇತ್ತೀಚಿನ ಸುದ್ದಿಗಳು