Home ಬೆಂಗಳೂರು ರೆಡ್ಡಿ ಮತ್ತೆ ಬಿಜೆಪಿಗೆ ಬರ್ತಿದ್ದಾರಂತೆ ನಿಜಾನ?

ರೆಡ್ಡಿ ಮತ್ತೆ ಬಿಜೆಪಿಗೆ ಬರ್ತಿದ್ದಾರಂತೆ ನಿಜಾನ?

0

ಬೆಂಗಳೂರು: ಬಿಜೆಪಿಯ ರಾಜ್ಯಾಧ್ಯಕ್ಷರ ಆಯ್ಕೆಯೊಂದಿಗೆ ಕರ್ನಾಟಕ ಬಿಜೆಪಿ ರಾಜಕಾರಣ ಒಂದು ಸುತ್ತು ಮುಗಿಸಿ ಮತ್ತೆ ಮೂಲಕ್ಕೆ ಮರಳುತ್ತಿದೆ.

ಹೌದು, ಬಿಜೆಪಿ ಮತ್ತೆ ಯಡಿಯೂರಪ್ಪನವರ ನಿಯಂತ್ರಣಕ್ಕೆ ಬಂದಿದೆ. ಹಾಗೆಯೇ ಹಿಂದುತ್ವದ ಓವರ್ ಡೋಸ್‌ನಿಂದ ಬಳಲುತ್ತಿದ್ದ ರಾಜ್ಯ ಬಿಜೆಪಿ ಈಗ ಮತ್ತೆ ಹಳೆಯ ಹಣದ ರಾಜಕಾರಣಕ್ಕೆ ಮರಳುವಂತೆ ಕಾಣುತ್ತಿದೆ.

ಅದರ ಭಾಗವಾಗಿ ಒಂದು ಕಾಲದಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಕಾರಣವಾಗಿದ್ದ, ಆಪರೇಷನ್ ಕಮಲ ಎನ್ನುವ ಕೆಟ್ಟ ಪರಂಪರೆಗೆ ನಾಂದಿ ಹಾಡಿದವರಲ್ಲಿ ಒಬ್ಬರಾಗಿದ್ದ ಜನಾರ್ಧನ ರೆಡ್ಡಿ ಬಿಜೆಪಿಯತ್ತ ಮುಖ ಮಾಡಿದ್ದಾರೆ.

ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಸಂತೋಷ ಕೂಟ ಟಿಕೆಟ್ ಕೊಡುವ ಸೌಜನ್ಯವನ್ನು ತೋರದ ಕಾರಣ ರೆಡ್ಡಿ ಬಣದ ಹಲವರು ಬಿಜೆಪಿ ತೊರೆದಿದ್ದರು. ಅದೇ ಸಮಯದಲ್ಲಿ ಜನಾ ರೆಡ್ಡಿ ಕೆಆರ್‌ಪಿಪಿ ಎನ್ನುವ ಪಕ್ಷವನ್ನು ಕಟ್ಟಿ ಬಿಜೆಪಿಗೆ ಒಂದು ಮಟ್ಟದ ಹೊಡೆತ ಕೊಟ್ಟಿದ್ದರು.

ಈಗ ಅವರು ಆ ಪಕ್ಷವನ್ನು ವಿಸರ್ಜಿಸಿದ್ದು, ಬಿಜೆಪಿ ಪಕ್ಷದತ್ತ ಹೊರಟಿದ್ದಾರೆ ಎನ್ನಲಾಗಿದೆ. ಯಡಿಯೂರಪ್ಪ ಬಣಕ್ಕೆ ಹತ್ತಿರದವರೂ ಆಗಿರುವುದರಿಂದ ಅವರ ಬಿಜೆಪಿ ಪ್ರವೇಶ ಈಗಾಗಲೇ ಖಚಿತವಾಗಿದೆ ಎಂದು ಬಿಜೆಪಿ ಮೂಲಗಳು ಹೇಳುತ್ತಿವೆ.

ಪ್ರಸ್ತುತ ಗಂಗಾವತಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ರೆಡ್ಡಿ ಚಳಿಗಾಲದ ಅಧಿವೇಶನದ ಹೊತ್ತಿಗೆ ಬಿಜೆಪಿ ಬೆಂಬಲಕ್ಕೆ ನಿಂತು ವಿಧಾನಸೌಧದಲ್ಲಿ ಕಾಂಗ್ರೆಸ್ ಮೇಲೆ ದಾಳಿಯೆಸಗಲು ಸಿದ್ಧರಾಗಲಿದ್ದಾರೆ ಎನ್ನುವ ಸುದ್ದಿಗಳು ಹರಡುತ್ತಿವೆ.

You cannot copy content of this page

Exit mobile version