Sunday, June 16, 2024

ಸತ್ಯ | ನ್ಯಾಯ |ಧರ್ಮ

ಇಸ್ರೇಲ್‌ನಿಂದ ಚರ್ಚ್‌ ಮೇಲೆ ದಾಳಿ: 150 ಕ್ಕೂ ಮಿಕ್ಕಿ ಸಾವಿನ ಅಂದಾಜು

ಬೆಂಗಳೂರು,ಅಕ್ಟೋಬರ್.‌20: ನಿರಾಶ್ರಿತರಾಗಿದ್ದ ಸುಮಾರು 500 ಪ್ಯಾಲೆಸ್ತೀನಿಯರು ವಾಸಿವಿದ್ದ ಗಾಜಾದ ಸಾಂಪ್ರದಾಯಿಕ ಗ್ರೀಕ್ ಚರ್ಚ್‌ ಮೇಲೆ ಇಸ್ರೇಲಿ ವೈಮಾನಿಕ ದಾಳಿ ನಡೆಸಿದೆ ಎಂದು ಹಮಾಸ್ ನಿಯಂತ್ರಿತ ಆಂತರಿಕ ಸಚಿವಾಲಯ ತಿಳಿಸಿದೆ. ಚರ್ಚ್‌ನ ಅಧಿಕಾರಿಗಳೂ ಈ ದಾಳಿಯ ಹೊಣೆಯನ್ನು ಇಸ್ರೇಲ್‌ನ ಮೇಲೆ ಹೊರಿಸಿದ್ದಾರೆ.

ಕನಿಷ್ಠ ಎಂಟು ಜನರು ಈ ದಾಳಿಯಿಂದ ಸಾವನ್ನಪ್ಪಿದ್ದಾರೆ ಎಂದು ಅಲ್ ಜಜೀರಾ ವರದಿ ಮಾಡಿತ್ತು. ಆದರೆ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ.

ಗ್ರೀಕ್ ಆರ್ಥೊಡಾಕ್ಸ್ ಸೇಂಟ್ ಪೋರ್ಫಿರಿಯಸ್ ಚರ್ಚ್ ಗಾಜಾದ ಅತ್ಯಂತ ಹಳೆಯ ಚರ್ಚ್ ಆಗಿದ್ದು, ಅಲ್ ಜಜೀರಾ ವರದಿಯ ಪ್ರಕಾರ, “ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಅಲ್ಲಿ ಆಶ್ರಯ ಪಡೆದಿರುವುದರಿಂದ ಈ ದಾಳಿ ನಡೆಸಲಾಗಿದ್ದು, ಇದು ಧರ್ಮ ಮಾತ್ರವಲ್ಲ ಮಾನವೀಯತೆಯ ಮೇಲಿನ ದಾಳಿ,” ಎಂದು ಫಾದರ್ ಎಲಿಯಾಸ್ ಹೇಳಿದ್ದರು.

ದಿ ವಾಷಿಂಗ್ಟನ್ ಪೋಸ್ಟ್ ದಾಳಿಯಾದ ಕಟ್ಟಡವನ್ನು ಜಿಯೋಲೊಕೇಟ್ ಮಾಡಿದ್ದು, ನಾಶವಾದ ಕಟ್ಟಡದ ಅವಶೇಷಗಳ ನಡುವೆ ಜನರನ್ನು ಹುಡುಕುತ್ತಿರುವ ವೀಡಿಯೊವನ್ನು ಆಧರಿಸಿ ಇದು ಚರ್ಚ್‌ ಎಂದು ದೃಢಪಡಿಸಿದೆ”.

ಚರ್ಚ್‌ನ ಅಧಿಕೃತ ಆದೇಶವಾದ ʼಆರ್ಡರ್ ಆಫ್ ಸೇಂಟ್ ಜಾರ್ಜ್ʼ: “ಆರ್ಚ್‌ಬಿಷಪ್ ಅಲೆಕ್ಸಿಯೊಸ್  ಜೀವಂತವಾಗಿದ್ದಾರೆ, ಆದರೆ ಅವರು ಗಾಯಗೊಂಡಿದ್ದಾರೆಯೇ ಎಂದು ನಮಗೆ ತಿಳಿದಿಲ್ಲ. ನಮಗೆ ಮಾಹಿತಿ ನೀಡುವ ವ್ಯಕ್ತಿ ಸೇರಿದಂತೆ ಚರ್ಚ್ ಮತ್ತು ಚರ್ಚ್‌ ಒಳಗೆ ನೆಲೆಸಿರುವ 500 ಕ್ಕೂ ಹೆಚ್ಚು ಜನರ ಸ್ಥಿತಿ ಹೇಗಿದೆ ಎಂಬುದು ತಿಳಿದಿಲ್ಲ ಎಂದು ಹೇಳಿಕೆಯನ್ನು ಪ್ರಕಟಿಸಿದೆ.

“ಮಕ್ಕಳು ಮತ್ತು ಹಸುಳೆಗಳು ಸೇರಿದಂತೆ ನಿರಾಶ್ರಿತರು ಮಲಗಿದ್ದ ಎರಡು ಚರ್ಚ್ ಹಾಲ್‌ಗಳಿಗೆ ಬಾಂಬ್‌ಗಳು ಅಪ್ಪಳಿಸಿದವು. ಪ್ರಸ್ತುತ, ಬದುಕುಳಿದವರು ಇತರರನ್ನು ಅವಶೇಷಗಳ ನಡುವೆ ಹುಡುಕುತ್ತಿದ್ದಾರೆ. ಘಟನಾ ಸ್ಥಳದಲ್ಲಿರುವ ನಮ್ಮವರು150-200 ಜನರು ಸತ್ತಿದ್ದಾರೆ ಎಂದು ಅಂದಾಜಿಸಿದ್ದಾರೆ ಮತ್ತು ಅವಶೇಷಗಳ ನಡುವೆ ಹೆಚ್ಚಿನ ಜನರು ಕಂಡುಬರುವುದರಿಂದ ಆ ಸಂಖ್ಯೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ, ” ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಗಾಜಾದ ಆರೋಗ್ಯ ಸಚಿವಾಲಯದ ಪ್ರಕಾರ, ಅಕ್ಟೋಬರ್ 7 ರಿಂದ 3,000 ಜನರು ಸಾವನ್ನಪ್ಪಿದ್ದಾರೆ ಮತ್ತು 12,500 ಜನರು ಗಾಯಗೊಂಡಿದ್ದಾರೆ. ಇಸ್ರೇಲ್‌ನಲ್ಲಿ, ಅಕ್ಟೋಬರ್ 7 ರಂದು ಹಮಾಸ್‌ನ ಹಠಾತ್ ದಾಳಿ ಮತ್ತು ಅದರ ನಂತರ 1,400 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು.

Related Articles

ಇತ್ತೀಚಿನ ಸುದ್ದಿಗಳು