Thursday, June 20, 2024

ಸತ್ಯ | ನ್ಯಾಯ |ಧರ್ಮ

ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ : 50 ಕ್ಕೂ ಹೆಚ್ಚು ಸಾ*ವು

ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ದಿನದಿಂದ ದಿನಕ್ಕೆ ಭೀಕರ ರೂಪ ಪಡೆದುಕೊಳ್ಳುತ್ತಿದೆ. ಗಾಜಾದಲ್ಲಿ ಸಾವಿರಾರು ಮಂದಿ ತಂಗಿದ್ದ ಪ್ಯಾಲೆಸ್ತೇನ್ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ಸೇನೆ ವೈಮಾನಿಕ ದಾಳಿ ನಡೆಸಿದೆ. ಇದರ ಪರಿಣಾಮ 50 ಕ್ಕೂ ಹೆಚ್ಚು ಮಂದಿ ಸ್ಥಳದಲ್ಲೇ ಮೃತಪಟ್ಟು, 200 ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ.

ಇಸ್ರೇಲ್ ವೈಮಾನಿಕ ದಾಳಿಯಲ್ಲಿ 50 ಕ್ಕೂ ಹೆಚ್ಚು ಫೆಲೆಸ್ತೀನೀಯರು ಸಾವನ್ನಪ್ಪಿದ್ದಾರೆ ಎಂದು ಗಾಝಾ ಆಸ್ಪತ್ರೆಯ ನಿರ್ದೇಶಕರನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.

ದೊಡ್ಡ ನಿರಾಶ್ರಿತರ ಶಿಬಿರವನ್ನು ನಿರ್ಮಿಸಿದ ಸ್ಥಳದಲ್ಲಿ ಈ ವಾಯು ದಾಳಿ ನಡೆದಿದೆ ಎಂದು ಹೇಳಲಾಗಿದೆ. ಈ ಶಿಬಿರದ ನಾಶದ ಚಿತ್ರಗಳು ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಆದರೆ ಈವರೆಗಿನ ಮಾಹಿತಿಯಂತೆ ಘಟನೆಯ ಬಗ್ಗೆ ಇಸ್ರೇಲ್ ಸರ್ಕಾರ ಇನ್ನೂ ಪ್ರತಿಕ್ರಿಯಿಸಿಲ್ಲ.

ಆದರೆ ಗಾಝಾದಲ್ಲಿನ ಭಯೋತ್ಪಾದಕರ ವಿಶಾಲ ಸುರಂಗ ಜಾಲದೊಳಗೆ ಹಮಾಸ್ ಬಂದೂಕುಧಾರಿಗಳೊಂದಿಗೆ ತನ್ನ ವಿಶೇಷ ಮಿಲಿಟರಿ ನೇರ ಹೋರಾಟವನ್ನು ಪ್ರಾರಂಭಿಸಿದೆ ಎಂದು ಇಸ್ರೇಲ್ ಈ ಹಿಂದೆ ಹೇಳಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಈ ವೈಮಾನಿಕ ದಾಳಿ ನಡೆದಿರಬಹುದು ಎಂದು ಅಂದಾಜಿಸಲಾಗಿದೆ.

ಇಸ್ರೇಲ್ ಸೇನೆ ಈ ಹಿಂದೆ ಗಾಜಾದ ಆಸ್ಪತ್ರೆಯ ಮೇಲೆ ನಡೆದ ದಾಳಿಯನ್ನು ನೆನಪಿಸಿದೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ಹೇಳಿಕೊಂಡಿವೆ. ಇಸ್ರೇಲಿ ಸೈನ್ಯವು ಬಾಂಬ್ ದಾಳಿಯ ಜೊತೆಗೆ ನೆಲದ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ ಎಂಬ ವರದಿಗಳಿವೆ. ಈಗಾಗಲೇ ಗಾಝಾ ಪಟ್ಟಿಯ ಒಳಭಾಗವನ್ನು ಇಸ್ರೇಲಿ ಪಡೆಗಳು ತಲುಪಿವೆ.

ಸಧ್ಯ ಇಸ್ರೇಲ್ ಯಾವ ಜಾಗವನ್ನೂ ಬಿಡದಂತೆ ತನ್ನ ದಾಳಿಯನ್ನು ಮುಂದುವರೆಸಿದೆ. ಈಗಾಗಲೇ ವಿಶ್ವಸಂಸ್ಥೆಯ ಎಚ್ಚರಿಕೆಯನ್ನೂ ಧಿಕ್ಕರಿಸಿ ಇಸ್ರೇಲ್ ಆಸ್ಪತ್ರೆಗಳ ಮೇಲೂ ಸಹ ತನ್ನ ದಾಳಿ ನಡೆಸಿದೆ. ಆದರೆ ತನ್ನ ದಾಳಿಯ ಬಗ್ಗೆ ಇಸ್ರೇಲ್ ತನ್ನದೇ ಆದ ಸಮರ್ಥನೆ ಕೊಡುವುದನ್ನು ಮುಂದುವರೆಸಿದೆ.

Related Articles

ಇತ್ತೀಚಿನ ಸುದ್ದಿಗಳು