ಚಂದ್ರನ ದಕ್ಷಿಣ ಧ್ರುವದ ಬಳಿ ಚಂದ್ರಯಾನ-3 ಇಳಿಸಿದ ಇಸ್ರೋ (Indian Space Research Organisation – ISRO) ಈಗ ಸೂರ್ಯನ ಕಡೆಗೆ ಪಯಣ ಆರಂಭಿಸಿದೆ. ಮೊದಲ ಬಾರಿಗೆ ಸೌರ ಮಿಷನ್ ಆದಿತ್ಯ L1 (solar mission Aditya L1) ಅನ್ನು ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರದಿಂದ ಸೆಪ್ಟೆಂಬರ್ 2 ರಂದು 11:50 ಕ್ಕೆ ಪಿಎಸ್‌ಎಲ್‌ವಿ-ಸಿ 57 ರಾಕೆಟ್ ಬಳಸಿ ಉಡಾವಣೆ ಮಾಡಿದೆ..
ಆದಿತ್ಯ L1 ಭೂಮಿಯಿಂದ ಸೂರ್ಯನಿಂದ ಸುಮಾರು 1.5 ಮಿಲಿಯನ್ ಕಿಲೋಮೀಟರ್ ದೂರದಲ್ಲಿರುವ ಸೂರ್ಯ-ಭೂಮಿಯ ಲಗ್ರೇಂಜ್ ಪಾಯಿಂಟ್ L1 ನಿಂದ ಸೌರ ಕರೋನಾವನ್ನು (Solar Corona) ವೀಕ್ಷಿಸಲಿದೆ. ಅಲ್ಲಿಂದಲೇ ಮಾಹಿತಿಗಳನ್ನು ಮತ್ತು ದಿನಕ್ಕೆ 1,440 ಚಿತ್ರಗಳನ್ನು ಭೂಮಿಗೆ ಕಳುಹಿಸಲಿದೆ
ಸೌರ ಮಿಷನ್‌ನಿಂದ ಸಂಗ್ರಹಿಸಲಾಗುವ ಡೇಟಾವನ್ನು ವಿಶ್ಲೇಷಿಸಿ ಸೂರ್ಯ ಭೂತ-ಭವಿಷ್ಯ-ವರ್ತಮಾನದ ಬಗ್ಗೆ ಮಾಹಿತಿಯನ್ನು ಪಡೆಯಲು ವಿಜ್ಞಾನಿಗಳು ಸಿದ್ದವಾಗಿದ್ದಾರೆ.
ಏನೀ ಲಾಗ್ರೇಂಜ್ ಪಾಯಿಂಟ್ 1?
ಲಗ್ರೇಂಜಿಯನ್ ಬಿಂದುಗಳೆಂದರೆ (Lagrangian points ) ಎರಡು ವಸ್ತುಗಳ ನಡುವೆ ಸಮತೋಲನ ಕಾಯ್ದುಕೊಳ್ಳುವ ಗುರುತ್ವಾಕರ್ಷಣೆಯ ಶಕ್ತಿಯ ಇರುವ ಪಾಯಿಂಟ್. ಇಲ್ಲಿ ಬಾಹ್ಯಾಕಾಶ ನೌಕೆಯು ದೀರ್ಘಾವಧಿಯವರೆಗೆ ಸಮತೋಲನದಲ್ಲಿ ಸುಳಿದಾಡುಲು ಸಾಧ್ಯ.
ಗಣಿತಶಾಸ್ತ್ರಜ್ಞ ಜೋಸೆಫ್ ಲೂಯಿಸ್ ಲಾಗ್ರೇಂಜ್ (Joseph Louis Lagrange) ಕಂಡುಹಿಡಿದಿರುವ ಈ ಲಾಗ್ರಾಂಜಿಯನ್ ಬಿಂದು ಸೂರ್ಯನ ಬಗ್ಗೆ ಅಧ್ಯಯನ ನಡೆಸಲು ಮಹತ್ವದ್ದಾಗಿದೆ.
“ಎಲ್1 ಬಿಂದುವಿನ ಸುತ್ತ ಹಾಲೋ ಕಕ್ಷೆಯಲ್ಲಿ ಇರಿಸಲಾಗಿರುವ ಉಪಗ್ರಹವು ಯಾವುದೇ ನಿಗೂಢತೆ/ಗ್ರಹಣಗಳು ( occultation/eclipses) ಇಲ್ಲದೇ ಸೂರ್ಯನನ್ನು ನಿರಂತರವಾಗಿ ಗಮನಿಸಲಿದೆ. ಇದು ಸೂರ್ಯನಲ್ಲಿ ನಡೆಯುವ ಕ್ರಿಯೆಗಳು ಹಾಗೂ ಬಾಹ್ಯಾಕಾಶ ಹವಾಮಾನದ ಮೇಲೆ ಅವುಗಳ ಪರಿಣಾಮವನ್ನು ತಿಳಿಯಲು ಸಹಾಯ ಮಾಡಲಿದೆ.