Home ದೆಹಲಿ ಭಾರತಕ್ಕೆ ಸ್ವಂತ ಆಪರೇಟಿಂಗ್ ಸಿಸ್ಟಮ್ ಇಲ್ಲದಿರುವುದು ನಾಚಿಕೆಗೇಡು: ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ

ಭಾರತಕ್ಕೆ ಸ್ವಂತ ಆಪರೇಟಿಂಗ್ ಸಿಸ್ಟಮ್ ಇಲ್ಲದಿರುವುದು ನಾಚಿಕೆಗೇಡು: ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ

0

ಸುಮಾರು 150 ಕೋಟಿ ಜನಸಂಖ್ಯೆ ಹೊಂದಿರುವ ಭಾರತಕ್ಕೆ ಸ್ವಂತ ಆಪರೇಟಿಂಗ್ ಸಿಸ್ಟಮ್ ಇಲ್ಲದಿರುವುದು ನಾಚಿಕೆಗೇಡಿನ ಸಂಗತಿ ಎಂದು ಖ್ಯಾತ ಟೆಲಿಕಾಂ ಇಂಜಿನಿಯರ್ ಮತ್ತು ಕಾಂಗ್ರೆಸ್ ಪಕ್ಷದ ಓವರ್‌ಸೀಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭಾರತೀಯರ ನೈಪುಣ್ಯತೆಗಳು ಇತರ ದೇಶಗಳಿಗೆ ಸೇವೆ ಸಲ್ಲಿಸಲು ಮಾತ್ರ ಬಳಕೆಯಾಗುತ್ತಿವೆ ಎಂದು ಅವರು ಟೀಕಿಸಿದ್ದಾರೆ. ದೆಹಲಿಯಲ್ಲಿ ನಡೆದ ಎಐ ಸಮ್ಮೇಳನದ ಹಿನ್ನೆಲೆಯಲ್ಲಿ ಯೂಟ್ಯೂಬ್ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪಿತ್ರೋಡಾ ಈ ಕಾಮೆಂಟ್ ಮಾಡಿದ್ದಾರೆ.

“ಭಾರತೀಯ ಯುವಕರಲ್ಲಿ ಅಪಾರ ಪ್ರತಿಭೆಯಿದೆ. ಆದರೆ ಅವರ ನೈಪುಣ್ಯತೆಯನ್ನು ಬಳಸಿಕೊಳ್ಳುವಲ್ಲಿ ಭಾರತ ವಿಫಲವಾಗಿದೆ. ನಮ್ಮ ಯುವಕರನ್ನು ಇತರ ದೇಶಗಳು ವ್ಯಾಪಕವಾಗಿ ಬಳಸಿಕೊಳ್ಳುತ್ತಿವೆ. ಪ್ರೋಗ್ರಾಮಿಂಗ್, ಬ್ಯಾಂಕಿಂಗ್, ನ್ಯಾಯಶಾಸ್ತ್ರ, ಕೈಗಾರಿಕೆ.. ಹೀಗೆ ಹಲವು ಕ್ಷೇತ್ರಗಳ ಆವಿಷ್ಕಾರಗಳಲ್ಲಿ ನಮ್ಮ ಯುವಕರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಸುಮಾರು 150 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ಮೈಕ್ರೋಸಾಫ್ಟ್‌ನಂತಹ ಕಂಪನಿ ಇಲ್ಲ. ನಮ್ಮ ಪ್ರತಿಭೆಯಿಂದ ಕನಿಷ್ಠ ಫೋನ್‌ಗೆ ಸಂಬಂಧಿಸಿದ ಆಪರೇಟಿಂಗ್ ಸಿಸ್ಟಮ್ ಅನ್ನು ಸಹ ತಯಾರಿಸಲು ಸಾಧ್ಯವಾಗಿಲ್ಲ” ಎಂದು ಪಿತ್ರೋಡಾ ಅಭಿಪ್ರಾಯಪಟ್ಟಿದ್ದಾರೆ.

ಆದರೆ ಅವರ ಈ ಹೇಳಿಕೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಪಿತ್ರೋಡಾ ಅವರು ಸುಳ್ಳುಗಳ ಮೂಲಕ ಭಾರತವನ್ನು ಅಪಹಾಸ್ಯ ಮಾಡುತ್ತಿದ್ದಾರೆ ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಹೇಳಿದ್ದಾರೆ.


You cannot copy content of this page

Exit mobile version