Home ದೇಶ ಎಲೆಕ್ಟರೋಲ್‌ ಬಾಂಡ್‌ ಹಗರಣ: ಈ ಬಾರಿಯ ಚುನಾವಣೆಯಲ್ಲಿ ಇಡೀ ದೇಶವೇ ಮೋದಿಯ ಎದುರಾಳಿ – ಪರಕಾಲ...

ಎಲೆಕ್ಟರೋಲ್‌ ಬಾಂಡ್‌ ಹಗರಣ: ಈ ಬಾರಿಯ ಚುನಾವಣೆಯಲ್ಲಿ ಇಡೀ ದೇಶವೇ ಮೋದಿಯ ಎದುರಾಳಿ – ಪರಕಾಲ ಪ್ರಭಾಕರ್

0

ದೇಶದಲ್ಲಿ ಲೋಕಸಭಾ ಚುನಾವಣೆಯ ಕಾವು ಏರುತ್ತಿರುವ ಸಂದರ್ಭದಲ್ಲೇ ಹೊರಬಿದ್ದಿರುವ ಎಲೆಕ್ಟರೋಲ್‌ ಬಾಂಡ್‌ ಹಗರಣವು ದಿನದಿಂದ ದಿನಕ್ಕೆ ಬಿಜೆಪಿಯ ಕೊರಳಿಗೆ ಬಿಗಿಯಾಗಿ ಸುತ್ತಿಕೊಳ್ಳುತ್ತಿದ್ದು ಇಡೀ ಭಾರತವೇ ಮೋದಿಯ ವಿರುದ್ಧ ತಿರುಗಿ ಬೀಳಲಿದೆ ಎಂದು ರಾಜಕೀಯ ಆರ್ಥಿಕ ತಜ್ಞ ಪರಕಾಲ ಪ್ರಭಾಕರ್‌ ತಿಳಿಸಿದ್ದಾರೆ.

ಈ ಕುರಿತು ರಿಪೋರ್ಟರ್‌ ಎನ್ನುವ ಮಲಯಾಳಂ ಚಾನಲ್‌ ಜೊತೆ ಮಾತನಾಡಿರುವ ಅವರು, “ನನಗೆ ಅನ್ನಿಸುವಂತೆ ಈ ಬಾರಿ ಎಲೆಕ್ಟರೋಲ್‌ ಬಾಂಡ್‌ ವಿಷಯವು ಚುನಾವಣೆಯಲ್ಲಿ ಚರ್ಚೆಯ ವಿಷಯವಾಗಿ ಹೊರ ಹೊಮ್ಮಲಿದೆ. ಮತ್ತು ಈ ಬಾರಿಯ ಚುನಾವಣಾ ಹೋರಾಟವು ಮೋದಿ ಮತ್ತು ಭಾರತದ ಉಳಿದ ಜನರ ನಡುವೆ ನಡೆಯಲಿದೆ” ಎಂದು ಅವರು ಹೇಳಿದ್ದಾರೆ.

“ಎಲೆಕ್ಟರೋಲ್‌ ಬಾಂಡ್‌ ವಿಷಯವು ಈಗಾಗಲೇ ಬಿಜೆಪಿ ನಿಯಂತ್ರಣದಿಂದ ಹೊರಬಂದಿದ್ದು ದೇಶಾದ್ಯಂತ ಅದರ ಕುರಿತು ಚರ್ಚೆ ನಡೆಯುತ್ತಿದೆ. ಹೀಗಾಗಿ ಈ ಬಾರಿಯ ಚುನಾವಣೆಯ ಸ್ಪರ್ಧೆ ಬಿಜೆಪಿ v/s ಕಾಂಗ್ರೆಸ್‌ ಅಥವಾ ಇತರ ಯಾವುದೇ ವಿರೋಧ ಪಕ್ಷದ ನಡುವೆ ಇರುವುದಿಲ್ಲ. ಈ ಬಾರಿಯ ಸ್ಪರ್ಧೆ ನೇರ ಭಾರತದ ಜನರು ಮತ್ತು ಮೋದಿಯ ನಡುವೆ ನಡೆಯಲಿದೆ” ಎಂದು ಭಾರತ ಸರಕಾರದ ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಪತಿಯೂ ಆಗಿರುವ ಪರಕಾಲ ಪ್ರಭಾಕರ್‌ ತಿಳಿಸಿದ್ದಾರೆ.

ಎಲೆಕ್ಟರೋಲ್‌ ಬಾಂಡ್‌ ಹಗರಣವು ಬಹಳ ದೊಡ್ಡ ಮೊತ್ತದ ಹಗರಣವಾಗಿದ್ದು ಇದು ದೇಶದಲ್ಲಷ್ಟೇ ಅಲ್ಲದೇ ಜಗತ್ತಿನಲ್ಲೇ ಅತಿ ದೊಡ್ಡ ಹಗರಣವಿದು ಎಂದು ಅವರು ಬಣ್ಣಿಸಿದ್ದಾರೆ. ನಿಧಾನವಾಗಿ ವಿಷಯ ಜನಸಾಮಾನ್ಯರನ್ನು ತಲುಪುತ್ತಿದ್ದರು ಅವರಿಗೂ ಈ ಹಗರಣದ ಆಳ ಅಗಲ ಅರ್ಥವಾಗುತ್ತಿದೆ. ಹೀಗಾಗಿ ಈ ಬಾರಿಯ ಚುನಾವಣೆ ಜನಸಾಮಾನ್ಯ V/S ಮೋದಿ ಆಗಿರಲಿದೆ ಎಂದು ಅವರು ಹೇಳಿದ್ದಾರೆ.

ಜೊತೆಗೆ ಬಿಜೆಪಿ ಸರ್ಕಾರವು ಆರ್ಥಿಕ ತಾರತಮ್ಯವನ್ನು ಆಚರಿಸುತ್ತಿದ್ದು, ಹಣ ನೀಡಲು ಕುಂಟು ನೆಪಗಳನ್ನು ಹೇಳುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಬಿಜೆಪಿ ಆಡಳಿತದಲ್ಲಿಲ್ಲದ ರಾಜ್ಯಗಳಿಗೆ ಅದು ಆರ್ಥಿಕ ಅನ್ಯಾಯವನ್ನು ಎಸಗುತ್ತಿದೆ. ಈ ಸರ್ಕಾರವು ಬಹಳ ದೊಡ್ಡ ಮೊತ್ತದ ಹಣವನ್ನು ಸೆಸ್‌ ಮತ್ತು ಸರ್ಚಾರ್ಜ್‌ ಮೊತ್ತವನ್ನು ಸಂಗ್ರಹಿಸುತ್ತಿದ್ದು ಅದನ್ನು ಅದು ರಾಜ್ಯಗಳಿಗೆ ಮರಳಿಸುತ್ತಿಲ್ಲ. ಸುಮಾರು 40 ಲಕ್ಷ ಕೋಟಿಗಳಷ್ಟು ಹಣವನ್ನು ಸಂಗ್ರಹಿಸುತ್ತಿರುವ ಮೋದಿ ಸರ್ಕಾರ ಅದನ್ನು ರಾಜ್ಯಗಳಿಗೆ ಮರಳಿಸದೆ ಫೈನಾನ್ಸ್‌ ಕಮಿಷನ್ ನೆಪ ಹೇಳಿ ತಪ್ಪಿಸಿಕೊಳ್ಳುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಕೇರಳ, ತಮಿಳುನಾಡು ಮತ್ತು ಕರ್ನಾಟಕ ಸರ್ಕಾರಗಳು ಇತ್ತೀಚೆಗೆ ಕೇಂದ್ರದಿಂದ ಬರಬೇಕಿರುವ ಹಣದ ವಿಚಾರದಲ್ಲಿ ಕೋರ್ಟ್‌ ಮೆಟ್ಟಿಲು ಹತ್ತಿರುವುದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

You cannot copy content of this page

Exit mobile version