Monday, June 24, 2024

ಸತ್ಯ | ನ್ಯಾಯ |ಧರ್ಮ

ಸೋಷಿಯಲ್‌ ಮೀಡಿಯಾ| ಕಣ್ತಪ್ಪಿನಿಂದ ಫಾರ್ವರ್ಡ್‌ ಮಾಡುವುದು ಕೂಡಾ ತಪ್ಪು: ಸುಪ್ರೀಂ ಕೋರ್ಟ್

ಹೊಸದಿಲ್ಲಿ: ಓದದೆ ಅಥವಾ ಯೋಚಿಸದೆ ಸಾಮಾಜಿಕ ಮಾಧ್ಯಮದಲ್ಲಿ (Social media) ಅಶ್ಲೀಲ ಮತ್ತು ಅವಮಾನಕರ ಪೋಸ್ಟ್‌ಗಳನ್ನು ಯಾಂತ್ರಿಕವಾಗಿ ಫಾರ್ವರ್ಡ್ ಮಾಡುವುದು ಸಹ ತಪ್ಪು ಮತ್ತು ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ನಟ ಹಾಗೂ ಮಾಜಿ ಶಾಸಕ ಎಸ್.ವಿ.ಶೇಖರ್ ಅವರ ಪ್ರಕರಣದಲ್ಲಿ ನ್ಯಾಯಮೂರ್ತಿ ಬಿ.ಆರ್.ಗವಾರ್ ಮತ್ತು ನ್ಯಾಯಮೂರ್ತಿ ಪಿ.ಕೆ.ಮಿಶ್ರಾ ಅವರನ್ನೊಳಗೊಂಡ ಪೀಠವು ಹೀಗೆ ಹೇಳಿದೆ.

ಮಹಿಳಾ ಪತ್ರಕರ್ತರ ಕುರಿತು ಅಶ್ಲೀಲ ಪೋಸ್ಟ್‌ಗಳನ್ನು ಫಾರ್ವರ್ಡ್ ಮಾಡಿದ ಆರೋಪ ಶೇಖರ್ ಮೇಲಿದೆ. ಅವರು ತಾನು ಅದನ್ನು ಫಾರ್ವರ್ಡ್‌ ಮಾಡಿದಾಗ ಕಣ್ಣಿಗೆ ಡ್ರಾಪ್‌ ಹಾಕಿಕೊಂಡಿದ್ದೆ. ಆಕಸ್ಮಾತ್ ಬೆರಳು ಸೆಂಡ್‌ ಬಟನ್‌ ಒತ್ತಿದ ಕಾರಣ ಹೀಗಾಯಿತು ಎಂದು ಕೋರ್ಟಿನೆದುರು ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಕೋರ್ಟ್‌ ಕಣ್ಣಿನ ಹನಿ ಜಾಕಿಕೊಂಡಿರುವಾಗಲೂ ಸೋಷಿಯಲ್‌ ಮೀಡಿಯಾ ಏಕೆ ಬಳಸಬೇಕಿತ್ತು ಎಂದು ಕೇಳಿದೆ.

ಸೋಷಿಯಲ್‌ ಮೀಡಿಯಾ ಬಳಸುವಾಗ ಅದರ ಪರಿಣಾಮಗಳ ಕುರಿತು ಎಷ್ಟು ಎಚ್ಚರಿಕೆಯಿಂದಿದ್ದರೂ ಸಾಕಾಗುವುದಿಲ್ಲ. ಸೋಷಿಯಲ್‌ ಮೀಡಿಯಾ ಎನ್ನವುದು ಅಭಿವ್ಯಕ್ತಿ ಸ್ವಾತಂತ್ರ್ಯದ ವೇದಿಕೆಯೆನ್ನುವುದು ಎಷ್ಟು ನಿಜವೋ, ಸೋಷಿಯಲ್‌ ಮೀಡಿಯಾ ಬಳಸುವವರಿಗೆ ಸ್ವಯಂ ನಿಯಂತ್ರಣವೂ ಅಷ್ಟೇ ಅಗತ್ಯ ಎನ್ನುವುದು ಕೂಡಾ ನಿಜ.

ಇತ್ತೀಚೆಗೆ ನಟ ಉಪೇಂದ್ರ ಕೂಡಾ ಸೋಷಿಯಲ್‌ ಮೀಡಿಯಾ ವಿಡಿಯೋ ಒಂದರಲ್ಲಿ ತನ್ನ ನಾಲಗೆ ಹರಿಬಿಟ್ಟು ನೀಚ ಗಾದೆಯ ಮೂಲಕ ಪೇಚಿಗೆ ಸಿಲುಕಿ ತಲೆ ಮರೆಸಿಕೊಂಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ಶೇಖರ್‌ ಅವರ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ಮದ್ರಾಸ್ ಹೈಕೋರ್ಟ್ ನಿರಾಕರಿಸಿತ್ತು. ಶೇಖರ್ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸಲು ಪೀಠ ಅವಕಾಶ ನೀಡಿರಡಲಿಲ್ಲ.

Related Articles

ಇತ್ತೀಚಿನ ಸುದ್ದಿಗಳು