ಚಂಡೀಗಢ, ಅಕ್ಟೋಬರ್ 8: ಹರಿಯಾಣ ಚುನಾವಣೆಯಲ್ಲಿ ಜನರನ್ನು ಸೆಳೆಯಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ‘ಜಿಲೇಬಿ’ ಮೂಲಕ ನಡೆಸಿದ ಪ್ರಯತ್ನ ವಿಫಲವಾಗಿದೆ.
ಅವರು ಸಿಹಿ ಜಿಲೇಬಿಯನ್ನು ಚುನಾವಣಾ ಪ್ರಚಾರ ಅಸ್ತ್ರವನ್ನಾಗಿ ಮಾಡಿಕೊಂಡರೂ, ಫಲಿತಾಂಶ ಫಲಿತಾಂಶ ಅವರ ಪಾಲಿಗೆ ಕಹಿಯಾಗಿತ್ತು. ಹರಿಯಾಣದಲ್ಲಿ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ನಾಯಕರು ಗೊಹಾನಾದಲ್ಲಿರುವ ಲಾಲಾ ಮಥುರಾಮ್ ಹಲ್ವಾಯಿ ಎಂಬ ಪ್ರಸಿದ್ಧ ಸ್ವೀಟ್ ಅಂಗಡಿಯಿಂದ ಜಿಲೇಬಿ ತಂದು ರಾಹುಲ್ ಗಾಂಧಿಗೆ ನೀಡಿದ್ದರು. ಇದರ ರುಚಿ ನೋಡಿದ ರಾಹುಲ್, ನಾನು ಜೀವನದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ಅದ್ಭುತವಾದ ಜಿಲೇಬಿಯನ್ನು ತಿಂದಿದ್ದು ಎಂದು ಹೇಳಿದ್ದರು.
ಹರಿಯಾಣ ಜಿಲೇಬಿ ಜಾಗತಿಕವಾಗಬೇಕು ಮತ್ತು ಜಿಲೇಬಿ ಉತ್ಪಾದನಾ ಕೈಗಾರಿಕೆಗಳನ್ನು ಸ್ಥಾಪಿಸಬೇಕು ಎಂದು ಅವರು ತಮ್ಮ ಪ್ರಚಾರ ಭಾಷಣದಲ್ಲಿ ಸಾರಿದ್ದರು. ಹರ್ಯಾಣ ಜನತೆಯ ನೆಚ್ಚಿನ ತಿಂಡಿಯನ್ನು ಹೊಗಳಿ ಅವರನ್ನು ಮೆಚ್ಚಿಸಲು ಯತ್ನಿಸಿದರಾದರೂ ಮತಗಳು ಹರಿದು ಬರಲಿಲ್ಲ.
ನಿನ್ನೆಯ ಮತ ಎಣಿಕೆಯ ಆರಂಭದಲ್ಲಿ ಕಾಂಗ್ರೆಸ್ ಮುನ್ನಡೆಯಲ್ಲಿತ್ತು. ಇದರೊಂದಿಗೆ ಆ ಪಕ್ಷದ ಮುಖಂಡರು ಜಿಲೇಬಿ ಹಂಚಿದರು. ಆದರೆ ಆ ನಂತರ ಬಿಜೆಪಿಗೆ ಗೆಲ್ಲತೊಡಗಿತು. ಇದರಿಂದ ಕಾಂಗ್ರೆಸ್ ಗೆ ಕೌಂಟರ್ ಎಂಬಂತೆ ಕಮಲ ಪಕ್ಷದ ನಾಯಕರೂ ಜಿಲೇಬಿ ಆರ್ಡರ್ ಮಾಡಿ ಕೈ ಪಕ್ಷಕ್ಕೆ ಕಳುಹಿಸಿ ಕೊಟ್ಟಿದ್ದಾರೆ.