Home ದೇಶ ಜಮ್ಮು: ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡ ಭಾರತೀಯ ಸೇನೆ

ಜಮ್ಮು: ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡ ಭಾರತೀಯ ಸೇನೆ

0

ಜಮ್ಮುವಿನ ಅಖ್ನೂರ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಮೂವರು ಉಗ್ರರನ್ನು ಹತ್ಯೆಗೈದಿವೆ. ಈ ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆಗಳು ಭಯೋತ್ಪಾದಕರಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡಿವೆ.

ಇಂತಹ ಬೃಹತ್ ಶಸ್ತ್ರಾಸ್ತ್ರಗಳು ಮತ್ತು ಸಾಮಗ್ರಿಗಳ ಲಭ್ಯತೆಯನ್ನು ನೋಡಿದರೆ, ಈ ಭಯೋತ್ಪಾದಕರು ದೀರ್ಘಾವಧಿಯ ಯುದ್ಧವನ್ನು ನಡೆಸುವ ಉದ್ದೇಶದಿಂದ ದೊಡ್ಡ ಪಿತೂರಿ ನಡೆಸಿರುವುದು ಸ್ಪಷ್ಟವಾಗಿದೆ. ವಶಪಡಿಸಿಕೊಂಡ ವಸ್ತುಗಳ ಪೈಕಿ M4 ಕಾರ್ಬೈನ್, AK-47 ರೈಫಲ್ ಮತ್ತು ಇತರ ಉಪಕರಣಗಳಂತಹ ಸುಧಾರಿತ ಶಸ್ತ್ರಾಸ್ತ್ರಗಳಿದ್ದವು. ಅಕ್ಟೋಬರ್ 28ರಂದು ಅಖ್ನೂರ್‌ನ ಜೋಗ್ವಾನ್ ಪ್ರದೇಶದಲ್ಲಿ ಸೇನಾ ಆಂಬುಲೆನ್ಸ್ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ವಾಹನದ ಮೇಲೆ ಹಲವು ಗುಂಡಿನ ಗುರುತುಗಳು ಪತ್ತೆಯಾಗಿದ್ದವು. ಈ ದಾಳಿಯ ನಂತರ, ಪ್ರದೇಶದಲ್ಲಿ ದೊಡ್ಡ ಪ್ರಮಾಣದ ಶೋಧ ಕಾರ್ಯಾಚರಣೆ ನಡೆಸಲಾಯಿತು. ಸೇನೆಯ ಯೋಧರು ಪೊಲೀಸರೊಂದಿಗೆ ಗ್ರಾಮ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಸುತ್ತುವರೆದರು ಮತ್ತು ಭಯೋತ್ಪಾದಕರ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಸಿದರು.

ಮತ್ತೊಂದೆಡೆ, ಅಖ್ನೂರ್ ಸೆಕ್ಟರ್‌ನ ಕ್ಯಾರಿ ಬಟಾಲ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿದೆ. ಮೊದಲಿಗೆ ಭದ್ರತಾ ಪಡೆಗಳು ಮತ್ತೊಂದು ವಿಜಯವನ್ನು ಸಾಧಿಸಿವೆ ಮತ್ತು ಸೇನೆಯು ಭಯೋತ್ಪಾದಕನನ್ನು ಕೊಂದಿದೆ ಎಂದು ವರದಿಗಳು ಬಂದವು.

ಇದಾದ ಬಳಿಕ ಮತ್ತಿಬ್ಬರು ಉಗ್ರರನ್ನು ಹತ್ಯೆಗೈಯಲಾಗಿತ್ತು. ಭಯೋತ್ಪಾದಕರು ಭಾರೀ ದಾಳಿಗೆ ಸನ್ನದ್ಧರಾಗಿದ್ದರು ಎಂದು 10ನೇ ಪದಾತಿ ದಳದ ಜನರಲ್ ಆಫೀಸರ್ ಕಮಾಂಡಿಂಗ್ ಮೇಜರ್ ಜನರಲ್ ಸಮೀರ್ ಶ್ರೀವಾಸ್ತವ ಹೇಳಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ವಿಶೇಷ ಪಡೆಗಳು, NSG ಕಮಾಂಡೋಗಳು ಮತ್ತು BMP-2 ಪದಾತಿ ದಳದ ಹೋರಾಟದ ವಾಹನಗಳನ್ನು ಬಳಸಲಾಯಿತು. ಭಯೋತ್ಪಾದಕರು ಅಡಗಿರುವ ಪ್ರದೇಶವು 30 ಡಿಗ್ರಿ ಇಳಿಜಾರು ಮತ್ತು ದಟ್ಟವಾದ ಕಾಡುಗಳನ್ನು ಹೊಂದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

You cannot copy content of this page

Exit mobile version