Friday, February 20, 2026

ಸತ್ಯ | ನ್ಯಾಯ |ಧರ್ಮ

ಜಮ್ಮು-ಕಾಶ್ಮೀರ| ದೇಶವಿರೋಧಿ ಘೋಷಣೆ: ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯ

ಜಮ್ಮು :  ಏಷ್ಯಾಕಪ್‌ ಟಿ20 ಟೂರ್ನಿಯಲ್ಲಿ ಪಾಕಿಸ್ತಾನ ಮತ್ತು ಅಪ್ಘಾನಿಸ್ತಾನದ ಪಂದ್ಯ ಮುಗಿದ ನಂತರ ಜಮ್ಮುವಿನ ಮೌಲಾನಾ ಆಜಾದ್ ಸ್ಮಾರಕ (ಎಂಎಎಂ) ಕಾಲೇಜಿನಲ್ಲಿ ದೇಶವಿರೋಧಿ ಘೋಷಣೆಗಳು ಕೇಳಿಬಂದಿದ್ದು, ಘೋಷಣೆ ಕೂಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಬುಧವಾರ ನಡೆದ ಏಷ್ಯಾ ಕಪ್ ಟಿ20 ಕ್ರಿಕೆಟ್‌ ಟೂರ್ನಿಯ ಸೂಪರ್‌-4 ಹಂತದಲ್ಲಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ತಂಡಗಳು ಸೆಣಸಾಡಿದ್ದು, ಪಂದ್ಯದಲ್ಲಿ ಪಾಕಿಸ್ತಾನ ತಂಡವು ಜಯಗಳಿಸಿತು.ನಂತರ ಕ್ರೀಡಾಂಗಣದಲ್ಲೇ ಅಪ್ಘಾನಿಸ್ತಾನದ ಅಭಿಮಾನಿಗಳು ಪಾಕೀಸ್ತಾನ ತಂಡದ ಅಭಿಮಾನಿಗಳ ಮೇಲೆ ದುರ್ವರ್ತನೆ ತೋರಿದ್ದರು,

ಎಂಎಎಂ ಕಾಲೇಜು ಪ್ರಾಂಶುಪಾಲ ಪ್ರೊ.(ಡಾ.) ಗುರು ದೇವ್ ಸಿಂಗ್ ರಕ್ವಾಲ್

ಈ ಹಿನ್ನಲೆ ಹಾಸ್ಟೆಲ್‌ನಲ್ಲಿ ದೇಶವಿರೋಧಿ ಘೋಷಣೆಗಳನ್ನು ಕೂಗಿದವರ ಮೇಲೆ ದೂರುಗಳನ್ನು ಸ್ವೀಕರಿಸಿದ್ದು, ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಎಂಎಎಂ ಕಾಲೇಜು ಪ್ರಾಂಶುಪಾಲ, ಜಿ.ಎಸ್.ರಕ್ವಾಲ್ ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page