Saturday, June 15, 2024

ಸತ್ಯ | ನ್ಯಾಯ |ಧರ್ಮ

‘ಜನ್ನತ್ ಕಿ ಹೈ ತಸ್ವೀರ್ ಯೇ’ ಹಾಡನ್ನು ಕಾಂಗ್ರೇಸ್ ಭಾರತದಲ್ಲಿ ಬ್ಯಾನ್‌ ಮಾಡಿತ್ತಾ? ಸುಳ್ಳುಸುದ್ದಿ!

ಬೆಂಗಳೂರು: ಮೊಹಮ್ಮದ್ ರಫಿಯವರ ‘ಜನ್ನತ್ ಕಿ ಹೈ ತಸ್ವೀರ್ ಯೇ’ ಭಾರತದಲ್ಲಿ ಬ್ಯಾನ್‌ ಆಗಿತ್ತಾ?  ಹೀಗೊಂದು ಪೋಸ್ಟ್‌ ಎಲ್ಲೆಲ್ಲೂ ಹರಿದಾಡುತ್ತಾ ಇದೆ.

“ಮಹಮದ್ ರಫಿ ಬರೆದಿದ್ದ ಕಾಶ್ಮಿರವನ್ನ‌ ನಾವು ಬಿಟ್ಟು ಕೊಡಲಾರೆವು ಎಂಬ ಈ ಹಾಡನ್ನು ಭಾರತದಲ್ಲಿ ನಿಷೇಧಿಸಲಾಗಿತ್ತು ಕಾರಣ ಪಾಕಿಸ್ಥಾನ ಈ ಹಾಡನ್ನ ಬ್ಯಾನ್ ಮಾಡಿ ಭಾರತದಲ್ಲಿ ಎಂದು ಅಂದಿನ ಪ್ರಧಾನಿಗೆ ಮನವಿ ಮಾಡಿದ ಕಾರಣ ನಿಲ್ಲಿಸಲಾಗಿತ್ತು….ಅದೆಂತ ಪ್ರೀತಿ ಪಾಕಿಸ್ಥಾನದ ಮೇಲೆ ಅಂದಿನ ಪ್ರಧಾನಿಗೆ….? ಎಂದು ಯತ್ನಾಳ್‌ ವಾರಿಯರ್ಸ್‌ ಎಂಬ ಫೇಸ್ಬುಕ್‌ ಪೇಜಿನಲ್ಲಿ ಫೋಸ್ಟ್‌ ಮಾಡಲಾಗಿದೆ. ಇದನ್ನು  ಮೂರು ಲಕ್ಷ ಜನರು ವೀಕ್ಷಿಸಿದ್ದು, ಹನ್ನೆರಡು ಸಾವಿರಕ್ಕೂ ಅಧಿಕ ಜನ ಲೈಕ್‌ ಮಾಡಿದ್ದಾರೆ.

ಈ ಹಾಡಿನಲ್ಲಿ ʼಕಾಶ್ಮೀರ ಭಾರತಕ್ಕೆ ಸೇರಿದ್ದು, ಕಾಶ್ಮೀರವನ್ನು ಬಿಟ್ಟು ಕೊಡುವುದಿಲ್ಲʼ ಎಂದಿದ್ದು, 1966 ರಲ್ಲಿ ಪಾಕಿಸ್ತಾನಿ ಸರ್ಕಾರವು ಹಾಡನ್ನು ನಿಷೇಧಿಸುವಂತೆ ಭಾರತ ಸರ್ಕಾರಕ್ಕೆ ಕೇಳಿಕೊಂಡಿತ್ತು. ಹಾಗಾಗಿ ಭಾರತ ಸರ್ಕಾರ ಆ ಹಾಡನ್ನು ಬ್ಯಾನ್‌ ಮಾಡಿತ್ತು ಎಂದು ಸುಳ್ಳು ಹರಡಲಾಗಿದೆ

ಜೋಹರ್ ಇನ್ ಕಾಶ್ಮೀರ ಎಂಬ 1966 ರ ಚಲನಚಿತ್ರದ‌ ಈ ಹಾಡನ್ನು ನಿಷೇಧಿಸಲಾಗಿಲ್ಲ. ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ಚಿತ್ರದಲ್ಲಿ ಕೆಲವು ಕಟ್ ಮತ್ತು ಎಡಿಟ್‌ ಮಾಡಲು ಸೂಚಿಸಿತ್ತು. ಈ ಹಾಡಿನಲ್ಲಿ ‘ಹಾಜಿ ಪಿರ್’ ಪದವನ್ನು ಬದಲಾಯಿಸಲು ತಿಳಿಸಲಾಗಿತ್ತು.

ಕರ್ನಾಟಕದಲ್ಲಿ ಮಾತ್ರವಲ್ಲ, ಈ ಹಾಡನ್ನು ಇಲ್ಲೆಲ್ಲಾಇಲ್ಲಿ..ಇಲ್ಲಿ..ಇಲ್ಲಿ ಫೋಸ್ಟ್‌ ಮಾಡಲಾಗಿದೆ. ಆದರೆ, ಎಲ್ಲಾ ಸುಳ್ಳುಗಳ ನರೆಟೀವ್‌ ಒಂದೇ ಆಗಿದೆ.

ಈ ಹಾಡು ಭಾರತದಲ್ಲಿ ಬ್ಯಾನ್‌ ಆಗಿರುವ ಬಗ್ಗೆ ಯಾವುದೇ ವರದಿಗಳಾಗಿಲ್ಲ. ಈ ಹಾಡಿನ್ನು ಫೂರ್ತಿಯಾಗಿ ಇಲ್ಲಿ ನೋಡಬಹುದು.

ಡಿಸೆಂಬರ್  17, 1966 ರ ಗೆಜೆಟ್ ಆಫ್ ಇಂಡಿಯಾದಲ್ಲಿ (ಪುಟ-5)ದಲ್ಲಿ ಈ ಸಿನೇಮಾದ ಹಾಡಿನಲ್ಲಿ ಯಾವ ಬದಲಾವಣೆಗಳನ್ನು ಮಾಡಬೇಕು ಎಂದು ಹೇಳಲಾಗಿದೆ.  ಇದರಲ್ಲಿ “ಹಾಜಿ ಪಿರ್” ಪದವನ್ನು ಹಾಡಿನಿಂದ ತೆಗೆದುಹಾಕಬೇಕೆಂದು ಡಾಕ್ಯುಮೆಂಟ್ ಹೇಳಿದೆ. ಹಾಡಿನಿಂದ ಎರಡು ಪದಗಳನ್ನು ತೆಗೆದುಹಾಕಲು ಸೂಚಿಸಲಾಗಿದೆ.

ಗಾನಾ (Gaana)ದಲ್ಲಿ ನೀವು ಕೇಳಬಹುದಾದ ಈ ಹಾಡಿನಲ್ಲಿ ಈ ಪದಗಳನ್ನು ಬಳಸಿಲ್ಲ. ಇಂಟರ್‌ನೆಟ್‌ನಲ್ಲಿ ಲಭ್ಯವಿರುವ ಹಾಡಿನ ಸಾಹಿತ್ಯದಲ್ಲೂ CBFC ಡಿಲಿಟ್‌ ಮಾಡಲು ಸೂಚಿಸಿದ ಪದಗಳನ್ನು ಬಳಿಸಿಲ್ಲ.

ಹಾಗಾಗಿ, ಈಗಲೂ ಲಭ್ಯ ಇರುವ ಈ ಹಾಡು ಭಾರತದಲ್ಲಿ ಬ್ಯಾನ್‌ ಆಗಿಲ್ಲ. ಅದೊಂದು ಅಪ್ಪಟ ಸುಳ್ಳು!

Related Articles

ಇತ್ತೀಚಿನ ಸುದ್ದಿಗಳು