ಹಾಸನ : ಜ್ಯೂನಿಯರ್ ಇಂಜಿನಿಯರ್ ಶ್ರೀಧರ್ ಎಂಬುವವರು ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಜೆಇ ಶ್ರೀಧರ್ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಬದಲಾವಣೆ ಮಾಡಿಕೊಡಲು ಆರು ಸಾವಿರ ಲಂಚ ಕೇಳಿದ್ದರು.ಬಸವಾಪಟ್ಟಣ ಜೆಇ ಶ್ರೀಧರ್ ಜಿಲ್ಲೆಯ ಅರಕಲಗೂಡು ತಾಲೂಕಿನ, ಬೆಟ್ಟಸೋಗೆ ಗ್ರಾಮದ ಬಿ.ಪಿ.ಗಿರೀಶ್ ಅವರಿಂದ ಲಂಚ ಕೇಳಿದ್ದರು.ಜ.9ರಂದು 3,500 ಫೋನ್ ಪೇ ಮಾಡಿಸಿಕೊಂಡಿದ್ದರು. ಇಂದು ಉಳಿದ 2,500 ಫೋನ್ ಪೇ ಮಾಡಿಸಿಕೊಂಡಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಲೋಕಾಯುಕ್ತ ಪೊಲೀಸರು, ಜ್ಯೂನಿಯರ್ ಇಂಜಿನಿಯರ್ ಶ್ರೀಧರ್ ಹಾಗೂ ಫೋನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.ಇನ್ನೂ ಲೋಕಾಯುಕ್ತ ಇನ್ಸ್‌ಪೆಕ್ಟರ್‌ಗಳಾದ ಶಿಲ್ಪಾ, ಚಂದ್ರಶೇಖರ್ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.
