Saturday, April 27, 2024

ಸತ್ಯ | ನ್ಯಾಯ |ಧರ್ಮ

ಕಲ್ಯಾಣ ಕರ್ನಾಟಕಕ್ಕೆ ಆರ್ಟಿಕಲ್ 371ಜೆ ಸಿಕ್ಕಿರುವುದು ಸೋನಿಯಾ ಗಾಂಧಿಯಿಂದ : ಮಲ್ಲಿಕಾರ್ಜುನ ಖರ್ಗೆ

ಈ ಕಲ್ಯಾಣ ಕರ್ನಾಟಕ ಭಾಗಕ್ಕೆ ಆರ್ಟಿಕಲ್ 371ಜೆ ಸಿಕ್ಕಿರುವುದು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಂದ. ನಿಮ್ಮ ಮಕ್ಕಳಿಗೆ ವೈದ್ಯಕೀಯ, ಇಂಜಿನಿಯರ್ ಸೀಟು, ಉದ್ಯೋಗ ಹೆಚ್ಚಾಗಿ ಸಿಗುತ್ತಿರಲಿಲ್ಲ ಎಂದು  ರಾಜ್ಯಸಭೆ ಮಾಜಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಭಾರತ ಜೋಡೋ ಯಾತ್ರೆ ಭಾಗವಾಗಿ ಬಳ್ಳಾರಿಯಲ್ಲಿ ಶನಿವಾರ ನಡೆದ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿ,  ಭಾರತ ಜೋಡೋ ಯಾತ್ರೆ ಕೇವಲ ಚುನಾವಣೆ ಅಥವಾ ಬೇರೆ ಲಾಭದ ಉದ್ದೇಶದಿಂದ ನಡೆಯುತ್ತಿರುವ ಯಾತ್ರೆ ಅಲ್ಲ. ನಮ್ಮ ದೇಶದಲ್ಲಿ ಕೋಮು ಸಾಮರಸ್ಯ ಕೊರತೆ, ಧರ್ಮದ ಹೆಸರಲ್ಲಿನ ಜಗಳ ಹಚ್ಚುವ ಕೆಲಸ ಬಿಜೆಪಿ ಆರ್ ಎಸ್ಎಸ್ ಮಾಡುತ್ತಿದೆ. ಇದರ ವಿರುದ್ಧ ಹಾಗೂ ನಿರುದ್ಯೋಗ, ಬೆಲೆ ಏರಿಕೆ, ಹದಗೆಡುತ್ತಿರುವ ಆರ್ಥಿಕ ವ್ಯವಸ್ಥೆ ವಿರೋಧಿಸಿ ಈ ಯಾತ್ರೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಈ ಕಲ್ಯಾಣ ಕರ್ನಾಟಕ ಭಾಗಕ್ಕೆ ಆರ್ಟಿಕಲ್ 371ಜೆ ಸಿಕ್ಕಿರುವುದು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಂದ. ನಿಮ್ಮ ಮಕ್ಕಳಿಗೆ ವೈದ್ಯಕೀಯ, ಇಂಜಿನಿಯರ್ ಸೀಟು, ಉದ್ಯೋಗ ಹೆಚ್ಚಾಗಿ ಸಿಗುತ್ತಿರಲಿಲ್ಲ. ಈ ವಿಶೇಷ ಸ್ಥಾನಮಾನದಿಂದ ಈ ಎಲ್ಲ ಕ್ಷೇತ್ರದಲ್ಲಿ ಸಾವಿರಾರು ಮಂದಿಗೆ ಅವಕಾಶ ಸಿಗುತ್ತಿದೆ. ಇಂದು ಭಾರತ ಜೋಡೋ ಯಾತ್ರೆ ಈಗಾಗಲೇ 1 ಸಾವಿರ ಕಿ.ಮೀ ಯಾತ್ರೆ ಸಾಗಿದೆ. ಇನ್ನು 2700 ಕಿ.ಮೀ ದೂರ ಸಾಗಲಿದ್ದಾರೆ. ಅವರ ಹೋರಾಟಕ್ಕೆ ನಮ್ಮೆಲ್ಲರ ಬೆಂಬಲ ಇದೆ. ನಾವೆಲ್ಲರೂ ಒಂದಾಗಿ ಕೆಲಸ ಮಾಡಬೇಕು. ಆಗ ನಮ್ಮ ಪಕ್ಷ ಹಾಗೂ ದೆಶ ಕಟ್ಟಲು ಶಕ್ತಿ ಸಿಗುತ್ತದೆ. ಬಿಜೆಪಿ ಆರ್ ಎಸ್ಎಸ್ ವಿರುದ್ಧ ಹೋರಾಡಲು ಶಕ್ತಿ ಸಿಗುತ್ತದೆ. ರಾಜ್ಯದಲ್ಲಿ ಮತ್ತೆ ಸರ್ಕಾರ ಬರುವಂತೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಈ ಬಿಜೆಪಿ ಕೆಟ್ಟ ಸರ್ಕಾರ, ಕಮಿಷನ್ ಸರ್ಕಾರವನ್ನು ತೆಗೆದುಹಾಕಲು ನಿವೆಲ್ಲರೂ ಒಗ್ಗಟ್ಟಾಗಿ ನಮಗೆ ಬೆಂಬಲಿಸಬೇಕು. ಎಲ್ಲರೂ ಒಟ್ಟಾಗಿ ಕೆಲಸ ಮಾಡಿ. ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರಿಗೆ ದೊಡ್ಡ ಕೊಡುಗೆ ಕೊಟ್ಟಂತೆ ಆಗಲಿದೆ ಎಂದಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು