ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ವಿರುದ್ಧ ಕಾಂಗ್ರೆಸ್ ನಾಯಕ ಕನ್ಹಯ್ಯಾ ಕುಮಾರ್ ನೀಡಿರುವ ಹೇಳಿಕೆ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ.
ಬುಧವಾರ ನಾಗ್ಪುರದಲ್ಲಿ ಮಹಾರಾಷ್ಟ್ರ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಕನ್ಹಯ್ಯ ಮಾತನಾಡಿದರು. ವಿಧಾನಸಭೆ ಚುನಾವಣೆಯಲ್ಲಿ ವೋಟ್ ಜಿಹಾದ್ ನಡೆಯುತ್ತಿದೆ ಎನ್ನುವ ಫಡ್ನವೀಸ್ ಅವರ ಇತ್ತೀಚಿನ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ ಕನಯ್ಯಾ ಈ ಮಾತುಗಳನ್ನು ಹೇಳಿದರು.
‘ಧರ್ಮವನ್ನು ರಕ್ಷಿಸುವ ಜವಾಬ್ದಾರಿ ನಮ್ಮ ಮೇಲೆ ಹೊರಿಸಲಾಗಿದೆ. ಅವರ ಮಕ್ಕಳು ಆಕ್ಸ್‌ಫರ್ಡ್ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯಗಳಲ್ಲಿ ಓದುತ್ತಾರೆ. ಉಪ ಮುಖ್ಯಮಂತ್ರಿ ಪತ್ನಿ ಇನ್‌ಸ್ಟಾಗ್ರಾಮ್ ರೀಲ್ ಮಾಡುತ್ತಾ ಕೂರುತ್ತಾರೆ. ಧರ್ಮವನ್ನು ಉಳಿಸಬೇಕಾದರೆ ನಾವೆಲ್ಲರೂ ಸೇರಿ ಉಳಿಸೋಣ’ ಎಂದರು.
ಈ ಹೇಳಿಕೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ‘ಮಹಾರಾಷ್ಟ್ರದ ಹೆಣ್ಣು ಮಗುವನ್ನು ಅವಮಾನಿಸಲು ನಿಮಗೆ ಎಷ್ಟು ಧೈರ್ಯ? ಈ ಹೇಳಿಕೆಗಳು ಪ್ರತಿಯೊಬ್ಬ ಮರಾಠಿ ಮಹಿಳೆಗೆ ಅವಮಾನ ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಹೇಳಿದ್ದಾರೆ.