Saturday, June 15, 2024

ಸತ್ಯ | ನ್ಯಾಯ |ಧರ್ಮ

ಕಪಿಲ್ ಸಿಬಲ್ ಬ್ಲಾಗ್: ತಟಸ್ಥ ಸ್ಪೀಕರ್ ಇಂದಿನ ಜರೂರು

ಇತ್ತೀಚೆಗೆ ದೇಶದಲ್ಲಿ ಇತಿಹಾಸವನ್ನು ನಾಶಪಡಿಸುವ ಪ್ರಯತ್ನಗಳು, ಸಾಂಸ್ಕೃತಿಕ ಪ್ರಾಬಲ್ಯವನ್ನು ಪ್ರದರ್ಶಿಸುವ ಸ್ಮಾರಕಗಳನ್ನು ನಿರ್ಮಿಸುವುದು, ವಿಭಜಕ ಕಾರ್ಯಸೂಚಿಯನ್ನು ಉತ್ತೇಜಿಸುವ ಮೂಲಕ ಅಲ್ಪಸಂಖ್ಯಾತರನ್ನು ಗುರಿಯಾಗಿಸುವುದು, ಅನ್ಯಾಯವೆಂದು ಪರಿಗಣಿಸಲಾದ ಸರ್ಕಾರಿ ಕಾರ್ಯಕ್ರಮಗಳಿಗೆ ವಿರೋಧವನ್ನು ನಿಗ್ರಹಿಸಲು ಸಾಂಸ್ಥಿಕ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವುದು ಮತ್ತು ಮೊಕದ್ದಮೆಗಳನ್ನು ದಾಖಲಿಸುವ ಬೆದರಿಕೆಯೊಂದಿಗೆ ಜನರನ್ನು ಸುಮ್ಮನಾಗಿಸುವ ಪ್ರಯತ್ನಗಳು ಎದ್ದು ಕಾಣುತ್ತಿವೆ. ಇದೆಲ್ಲ ಸುಮ್ಮನೆ ನಡೆಯುತ್ತಿಲ್ಲ. ಇವೆಲ್ಲವೂ ಯೋಜಿತ ಉದ್ದೇಶವೊಂದರ ಭಾಗವಾಗಿದೆ. ಇಂತಹ ಒಂದು ಉದ್ದೇಶವನ್ನು ತಥಾಕಥಿತ ಹಿಂದೂ ನಂಬಿಕೆ ಎಂದು ಕರೆಯಲ್ಪಡುವ ಛತ್ರಿಯಡಿಯಲ್ಲಿ ಕಾನೂನುಬದ್ಧಗೊಳಿಸಲು ಪ್ರಯತ್ನಿಸಲಾಗುತ್ತಿದೆ

ಹೊಸದೆಹಲಿ: 2014ರ ಮೇ ತಿಂಗಳಲ್ಲಿ ನರೇಂದ್ರ ಮೋದಿಯವರು ಸೆಂಟ್ರಲ್ ಹಾಲ್ ಪ್ರವೇಶಿಸುವ ಮೊದಲು ಹಳೆಯ ಸಂಸತ್ ಭವನದ ಮೆಟ್ಟಿಲುಗಳ ಮೇಲೆ ಮಂಡಿಯೂರಿ ನಮಸ್ಕರಿಸಿದ್ದರು. ಸ್ವಾತಂತ್ರ್ಯದ ಮುನ್ನಾ ದಿನದಂದು ಸಂಜೆ ಜವಾಹರಲಾಲ್ ನೆಹರು ಭಾರತಕ್ಕೆ ಪ್ರಜಾಪ್ರಭುತ್ವವನ್ನು ಪರಿಚಯಿಸುವ ತಮ್ಮ ಪ್ರಸಿದ್ಧ ಭಾಷಣವನ್ನು ಮಾಡಿದ್ದು ಇಲ್ಲಿಯೇ. ಆದರೆ ಇಂದು ಸಂಸತ್ತಿನ ಭವ್ಯ ಸದನಗಳಲ್ಲಿ ಪ್ರಜಾಪ್ರಭುತ್ವವನ್ನು ಪೋಷಿಸುವ ಬದಲು ಅದನ್ನು ಹತ್ತಿಕ್ಕಲಾಗುತ್ತಿದೆ. ಮೋದಿ ಆಡಳಿತದಲ್ಲಿ ಸಂವಿಧಾನ ಉಸಿರುಗಟ್ಟಿದ ಪರಿಸ್ಥಿತಿಯಲ್ಲಿದೆ.

ಇತ್ತೀಚೆಗೆ ದೇಶದಲ್ಲಿ ಇತಿಹಾಸವನ್ನು ನಾಶಪಡಿಸುವ ಪ್ರಯತ್ನಗಳು, ಸಾಂಸ್ಕೃತಿಕ ಪ್ರಾಬಲ್ಯವನ್ನು ಪ್ರದರ್ಶಿಸುವ ಸ್ಮಾರಕಗಳನ್ನು ನಿರ್ಮಿಸುವುದು, ವಿಭಜಕ ಕಾರ್ಯಸೂಚಿಯನ್ನು ಉತ್ತೇಜಿಸುವ ಮೂಲಕ ಅಲ್ಪಸಂಖ್ಯಾತರನ್ನು ಗುರಿಯಾಗಿಸುವುದು, ಅನ್ಯಾಯವೆಂದು ಪರಿಗಣಿಸಲಾದ ಸರ್ಕಾರಿ ಕಾರ್ಯಕ್ರಮಗಳಿಗೆ ವಿರೋಧವನ್ನು ನಿಗ್ರಹಿಸಲು ಸಾಂಸ್ಥಿಕ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವುದು ಮತ್ತು ಮೊಕದ್ದಮೆಗಳನ್ನು ದಾಖಲಿಸುವ ಬೆದರಿಕೆಯೊಂದಿಗೆ ಜನರನ್ನು ಸುಮ್ಮನಾಗಿಸುವ ಪ್ರಯತ್ನಗಳು ಎದ್ದು ಕಾಣುತ್ತಿವೆ. ಇದೆಲ್ಲ ಸುಮ್ಮನೆ ನಡೆಯುತ್ತಿಲ್ಲ. ಇವೆಲ್ಲವೂ ಯೋಜಿತ ಉದ್ದೇಶವೊಂದರ ಭಾಗವಾಗಿದೆ. ಇಂತಹ ಒಂದು ಉದ್ದೇಶವನ್ನು ತಥಾಕಥಿತ ಹಿಂದೂ ನಂಬಿಕೆ ಎಂದು ಕರೆಯಲ್ಪಡುವ ಛತ್ರಿಯಡಿಯಲ್ಲಿ ಕಾನೂನುಬದ್ಧಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಸರ್ಕಾರ ಮತ್ತು ಬಿಜೆಪಿಯ ಎಲ್ಲಾ ಉಪಕ್ರಮಗಳಿಗೆ ಧಾರ್ಮಿಕ ಬಣ್ಣವನ್ನು ನೀಡುವುದು ನಮ್ಮ ಸಾಂವಿಧಾನಿಕ ಮೌಲ್ಯಗಳಿಗೆ ಸಂಪೂರ್ಣವಾಗಿ ಅಸಮಂಜಸವಾದ ರೀತಿಯಲ್ಲಿ ಕಾರ್ಯನಿರ್ವಹಿಸಲು ಪ್ರಯತ್ನಿಸುವ ಸರ್ಕಾರವನ್ನು ಸೃಷ್ಟಿಸುತ್ತದೆ, ಅದು ಈ ಆಡಳಿತದ ಏಕೈಕ ಧರ್ಮವಾಗಿದೆ.

ಸಂಸತ್ತಿನಲ್ಲಿ ನಡೆದ ಇತ್ತೀಚಿನ ಘಟನೆಗಳು ಮತ್ತು ಅವುಗಳ ಪರಿಣಾಮಗಳು ಮೋದಿಯವರ ಭಾರತವು ಈ ಧರ್ಮವನ್ನು ಉಲ್ಲಂಘಿಸಿದೆ ಮತ್ತು ಸರ್ಕಾರದ ಕ್ರಮಗಳು ನಮ್ಮ ಸಾಂವಿಧಾನಿಕ ಮೌಲ್ಯಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ ಎಂದು ತೋರಿಸುತ್ತದೆ. ನಮ್ಮ ಸಾರ್ವಭೌಮತ್ವದ ಪ್ರತೀಕವಾದ ಸಂಸತ್ತಿಗೆ ಕಿಡಿಗೇಡಿಗಳು ನುಗ್ಗಿದ್ದಾರೆ. ಭದ್ರತೆಯ ಗಂಭೀರ ಉಲ್ಲಂಘನೆಯು ಭಾರಿ ಅನಾಹುತಕ್ಕೆ ಕಾರಣವಾಗಬಹುದು ಮತ್ತು ನಮ್ಮ ಸಾರ್ವಜನಿಕ ಪ್ರತಿನಿಧಿಗಳ ಜೀವಕ್ಕೆ ಅಪಾಯವನ್ನುಂಟುಮಾಡಬಲ್ಲದು. ಇಂತಹ ಸಂದರ್ಭದಲ್ಲಿ ಸಂಸತ್ತಿನ ಉಭಯ ಸದನಗಳ ಸದಸ್ಯರು ಉಭಯ ಸದನಗಳಲ್ಲಿ ಪ್ರಧಾನಿ ಅಥವಾ ಗೃಹ ಸಚಿವರು ಈ ಕುರಿತು ಹೇಳಿಕೆ ನೀಡುತ್ತಾರೆ ಎಂದು ನಿರೀಕ್ಷಿಸುವುದು ಸಹಜವಾಗಿತ್ತು. ಸಂಸತ್ತು ಸಂಸದರಿಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಲು ಅವಕಾಶ ನೀಡುವುದು ಮಾತ್ರವಲ್ಲದೆ ಸಂಸದರಿಗೆ ಒಂದು ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಭರವಸೆ ನೀಡಬೇಕಿತ್ತು. ಅಂತಹ ಭದ್ರತೆಯ ಉಲ್ಲಂಘನೆಯು ಮತ್ತೆ ಸಂಭವಿಸದಂತೆ ನೋಡಿಕೊಳ್ಳುವುದಾಗಿ ಅಭಯ ನೀಡಬೇಕಿತ್ತು. ಆದರೆ ನ್ಯಾಯಸಮ್ಮತವಾಗಿದ್ದರೂ ಇಂತಹ ಹೇಳಿಕೆ ನೀಡುವಂತೆ ಆಗ್ರಹಿಸಿದ ಪ್ರತಿಪಕ್ಷಗಳ ಬೇಡಿಕೆಯನ್ನು ಸಂಸತ್ತಿನಲ್ಲಿ ತಿರಸ್ಕರಿಸಲಾಯಿತು.

ಸರ್ಕಾರ ವಿಪಕ್ಷಗಳ ಈ ಸರಳ ಬೇಡಿಕೆಗೆ ಕವಡೆ ಕಿಮ್ಮತ್ತನ್ನೂ ನೀಡಲಿಲ್ಲ. ಇದರೊಂದಿಗೆ ಪ್ರತಿಪಕ್ಷಗಳೂ ತಮ್ಮ ಹಠವನ್ನು ಮುಂದುವರೆಸಿದವು. ಇದು ಉಭಯ ಸದನಗಳ ಕಾರ್ಯಚಟುವಟಿಕೆಗಳ ಮೇಲೆ ಪರಿಣಾಮ ಬೀರಿತು. ಇದರ ಪರಿಣಾಮವಾಗಿ 146 ಮಂದಿಯನ್ನು ಅಮಾನತುಗೊಳಿಸಲಾಯಿತು, ಎಂದರೆ ಲೋಕಸಭೆಯಿಂದ 100 ಮತ್ತು ರಾಜ್ಯಸಭೆಯಿಂದ 46 ಮಂದಿಯನ್ನು ಅಮಾನತುಗೊಳಿಸಲಾಯಿತು. ಇದರ ಜೊತೆಗೆ ಇನ್ನೊಂದು ಘಟನೆಯೂ ನಡೆಯಿತು. ರಾಜ್ಯಸಭಾ ಅಧ್ಯಕ್ಷರು ಕಲಾಪಗಳನ್ನು ನಡೆಸುತ್ತಿರುವ ವಿಧಾನದ ಬಗ್ಗೆ ಲೋಕಸಭೆಯ ಸದಸ್ಯರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು. ಅಧ್ಯಕ್ಷರು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂದು ನನ್ನ ಕಾರ್ಯಶೈಲಿಯ ಅನುಕರಣೆ ಮಾಡಿದ್ದು ನನ್ನ ಜಾತಿಯನ್ನು ಅವಮಾನಿಸಿದೆ ಎಂದರು. ಆದರೆ ಅದು ಅವರ ಜಾತಿಯನ್ನು ಅಣಕಿಸುವ ಉದ್ದೇಶವನ್ನು ಹೊಂದಿದ್ದ ಅನುಕರಣೆಯಾಗಿರಲಿಲ್ಲ.

ಸ್ಪೀಕರ್, ರಾಜಕೀಯ ಪಕ್ಷಕ್ಕೆ ಸೇರಿದವರಾಗಿದ್ದರೂ, ಸದನವನ್ನು ಪ್ರತಿನಿಧಿಸುತ್ತಾರೆಯೇ ಹೊರತು ಅಧಿಕಾರದಲ್ಲಿರುವ ಬಹುಮತದ ಪಕ್ಷವನ್ನಲ್ಲ. ಇದು ರಾಜ್ಯಸಭೆಯ ಅಧ್ಯಕ್ಷರಿಗೂ ಅನ್ವಯಿಸುತ್ತದೆ. ತಮ್ಮ ತಮ್ಮ ಸಾಮರ್ಥ್ಯಗಳಲ್ಲಿ, ಅವರು ಆಯಾ ಸದನಗಳ ಇಚ್ಛೆಯನ್ನು ಪ್ರತಿನಿಧಿಸುತ್ತಾರೆ ಮತ್ತು ಅವರು ಪಕ್ಷಪಾತದಿಂದ ಕಾರ್ಯನಿರ್ವಹಿಸುವುದನ್ನು ಸಹಿಸಲಾಗುವುದಿಲ್ಲ. ಈ ಸಾಂವಿಧಾನಿಕ ಸ್ಥಾನವನ್ನು ಮನಸಾರೆ ಒಪ್ಪಿಕೊಳ್ಳದಿದ್ದರೆ, ಈ ಸ್ಥಾನಗಳನ್ನು ಅಲಂಕರಿಸುವ ಜನರು ಆಡಳಿತ ಪಕ್ಷದ ಕಡೆಗೆ ಪಕ್ಷಪಾತಿಯಾಗಿ ತೋರಲು ಪ್ರಾರಂಭಿಸುತ್ತಾರೆ. ಇದು ತೀವ್ರ ಕಳವಳಕಾರಿ ವಿಷಯವಾಗಿದೆ. ಮೊದಲನೆಯದಾಗಿ, ಇದು ಸದನದ ಕಾರ್ಯಕಲಾಪಗಳನ್ನು ಹಾಳುಮಾಡುತ್ತದೆ ಮತ್ತು ಕಲಾಪಗಳಿಗೆ ರಾಜಕೀಯ ಬಣ್ಣವನ್ನು ನೀಡುತ್ತದೆ. ಎರಡನೆಯದಾಗಿ, ಆದರ್ಶ ಪ್ರಜಾಪ್ರಭುತ್ವದಲ್ಲಿ, ರಾಜ್ಯಸಭೆಯ ಅಧ್ಯಕ್ಷರು ಅಥವಾ ಲೋಕಸಭೆಯ ಸ್ಪೀಕರ್ ವಿರುದ್ಧ ಮಾಡಬಾರದ ಆರೋಪಗಳಿಗೆ ಇದು ದಾರಿ ಮಾಡಿಕೊಡುತ್ತದೆ. ಪ್ರತಿಪಕ್ಷಗಳ ಮೇಲೆ ಒತ್ತಡ ಹೇರುವ ಮತ್ತು ಅದರ ಧ್ವನಿಯನ್ನು ಹತ್ತಿಕ್ಕುವ ರೀತಿಯಲ್ಲಿ ಸದನದ ಕಾರ್ಯಕಲಾಪಗಳು ಎಂದಿಗೂ ನಡೆಯಬಾರದು. ಪ್ರತಿಪಕ್ಷಗಳ ಪ್ರತಿಭಟನೆಗಳು ಸಾರ್ವಜನಿಕರಿಗೆ ವ್ಯಾಪಕವಾಗಿ ಪ್ರಸಾರವಾಗದಂತೆ ತಡೆಯುವ ಆಸನದ ಪುನರಾವರ್ತಿತ ನಿರ್ದೇಶನಗಳು, ವಿರೋಧ ಪಕ್ಷದ ಸದಸ್ಯರು ಪ್ರತಿಭಟಿಸುವಾಗ ಅವರ ಮೈಕ್ರೊಫೋನನ್ನು ಪದೇ ಪದೇ ಆಫ್ ಮಾಡುವುದು, ಸದಸ್ಯರ ವರ್ತನೆಗಾಗಿ ಅವರನ್ನು ಖಂಡಿಸುವುದು – ಇವು ಸದನವನ್ನು ಘನತೆಯಿಂದ ನಡೆಸಲಾಗುತ್ತಿಲ್ಲ ಎನ್ನುವುದಕ್ಕೆ ನಿದರ್ಶನವಾಗಿವೆ. ಇದು ಅಧ್ಯಕ್ಷರು, ಸ್ಪೀಕರ್‌ ಪಕ್ಷಪಾತಿಯಾಗಿರುವುದನ್ನು ಎತ್ತಿ ತೋರಿಸುತ್ತದೆ.

ಈ ಹಿಂದೆ, ಈಗ ಅಧಿಕಾರದಲ್ಲಿರುವ ರಾಜಕೀಯ ಪಕ್ಷದ ಸಂಸದರು ಲೋಕಸಭೆಯ ಸಂಪೂರ್ಣ ಅಧಿವೇಶನವನ್ನು ಸ್ಥಗಿತಗೊಳ್ಳುವಂತೆ ನೋಡಿಕೊಂಡಿದ್ದರು ಎಂದು ಇತಿಹಾಸ ಹೇಳುತ್ತದೆ. ಪ್ರತಿಪಕ್ಷಗಳ ಧ್ವನಿಯನ್ನು ಹತ್ತಿಕ್ಕಲು ಬಿಜೆಪಿಗೆ ಯಾವುದೇ ನೈತಿಕ ಆಧಾರವಿಲ್ಲ, ವಿಶೇಷವಾಗಿ ಅವುಗಳ ಬೇಡಿಕೆ ನ್ಯಾಯಸಮ್ಮತವಾಗಿರುವಾಗ. ಇದಲ್ಲದೆ, ಇದಲ್ಲದೆ, ಆಡಳಿತ ಪಕ್ಷವು ರಾಷ್ಟ್ರಕ್ಕೆ ಮುಖ್ಯವಾದ ವಿಷಯಗಳನ್ನು ಚರ್ಚಿಸಲು ಪ್ರತಿಪಕ್ಷಗಳಿಗೆ ಸಾಧ್ಯವಾಗುವುದಿಲ್ಲ ಎಂದು ಖಚಿತಪಡಿಸಿದೆ. ರಾಷ್ಟ್ರೀಯ ಹಿತಾಸಕ್ತಿಯ ವಿಷಯಗಳ ಬಗ್ಗೆ ವಿರೋಧ ಪಕ್ಷಗಳಿಗೆ ತನ್ನ ಕಳವಳಗಳನ್ನು ವ್ಯಕ್ತಪಡಿಸುವ ಹಕ್ಕನ್ನು ನಿರಾಕರಿಸಿದರೆ, ಇತ್ತೀಚಿನ ದಿನಗಳಲ್ಲಿ ನಾವು ನೋಡಿದ ರೀತಿಯಲ್ಲಿ ಪ್ರತಿಪಕ್ಷವನ್ನು ಅವಮಾನಿಸಿದರೆ, ವಿರೋಧ ಪಕ್ಷದ ಸದಸ್ಯರನ್ನು ಅಮಾನತುಗೊಳಿಸಿದರೆ, ಹಕ್ಕುಬಾಧ್ಯತಾ ಸಮಿತಿಯನ್ನು ನ್ಯಾಯಯುತ ಮೂಲ ತತ್ವಗಳಿಗೆ ವಿರುದ್ಧವಾದ ರೀತಿಯಲ್ಲಿ ನಡೆಸಿದರೆ, ಆಗ ನಾವು ಇದು ನಮ್ಮ ಪೂರ್ವಜರು ಕನಸು ಕಂಡ ಸಂಸದೀಯ ಪ್ರಜಾಪ್ರಭುತ್ವವೇ ಎಂದು ನಾವು ನಮ್ಮನ್ನು ಕೇಳಿಕೊಳ್ಳಬೇಕು. ಇದಕ್ಕೆ ಸಿಗುವ ಸ್ಪಷ್ಟ ಉತ್ತರವು ದೃಢವಾಗಿ ‘ಇಲ್ಲ’ ಎನ್ನುವುದೇ ಆಗಿದೆ.

ಹಾಗಿದ್ದರೆ ನಾವು ಎತ್ತಲಿಂದ ಎತ್ತ ಹೊರಟಿದ್ದೇವೆ? ಈ ಬಿಜೆಪಿ ಮತ್ತೊಂದು ಅವಧಿಗೆ ಅಧಿಕಾರಕ್ಕೆ ಬಂದರೆ ಅಸಹಿಷ್ಣುತೆ ಇನ್ನಷ್ಟು ಹೆಚ್ಚಾಗುತ್ತದೆ. ಪ್ರಜಾಪ್ರಭುತ್ವ ಕುಸಿಯುತ್ತದೆ ಮತ್ತು ಕೊನೆಗೆ ಜನರ ಕೈಯಲ್ಲಿ ಉಳಿಯುವುದು ಚಿಪ್ಪು ಮಾತ್ರ. ಈ ನಿರೂಪಣೆಯನ್ನು ಬದಲಾಯಿಸುವುದು ಅಥವಾ ಬದಲಾಯಿಸದಿರುವುದು ಈ ದೇಶದ ಜನರಿಗೆ ಬಿಟ್ಟದ್ದು.

Related Articles

ಇತ್ತೀಚಿನ ಸುದ್ದಿಗಳು