Friday, May 3, 2024

ಸತ್ಯ | ನ್ಯಾಯ |ಧರ್ಮ

ಬೆಂಗಳೂರು : ರಾತ್ರೋರಾತ್ರಿ ಮತ್ತೆ ಅನ್ಯಭಾಷೆ ಬೋರ್ಡ್ ಧ್ವಂಸ

ಇಂಗ್ಲಿಷ್‌ ಫಲಕಗಳ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ಆಕ್ರೋಶ ಮುಂದುವರೆದಿದೆ. ಬೆಂಗಳೂರಿನಲ್ಲಿ ತಡರಾತ್ರಿ ಕನ್ನಡಪರ ಕಾರ್ಯಕರ್ತರು ಇಂಗ್ಲಿಷ್‌ ಫ್ಲೆಕ್ಸ್‌ ಗಳನ್ನು ಹರಿದು ಹಾಕಿ ಆಕ್ರೋಶ ಹೊರಹಾಕಿದ್ದಾರೆ.

ಬೆಂಗಳೂರಿನ ಆರ್‌.ಆರ್‌ ನಗರದ ಗೋಪಾಲನ್‌ ಮಾಲ್‌ ನಲ್ಲಿ ಕರವೇ ಕಾರ್ಯಕರ್ತರು ಇಂಗ್ಲಿಷ್‌ ಫ್ಲೆಕ್ಸ್‌ ಗಳನ್ನು ಹರಿದು ಹಾಕಿದ್ದಾರೆ. ನಾರಾಯಣಗೌಡ್ರು ಅರೆಸ್ಟ್‌ ಆದ್ರೆ ಏನು? ನಾವು ಕಾರ್ಯಕರ್ತರು ಹೊರಗೆ ಇದ್ದೇವೆ ಎಂದು ಹೇಳಿ ಇಂಗ್ಲಿಷ್‌ ಫ್ಲೆಕ್ಸ್‌ ಗಳನ್ನು ಹರಿದು ಹಾಕಿದ್ದಾರೆ.

ಶುಕ್ರವಾರ ಎಲ್ಲಾ ಕನ್ನಡಪರ ಸಂಘಟನೆಗಳು ಒಗ್ಗಟ್ಟು ಪ್ರದರ್ಶಿಸಿದ್ದು, ಕರವೇ ನಾರಾಯಣ ಗೌಡರ ಸಮೇತ ಎಲ್ಲಾ ಕಾರ್ಯಕರ್ತರನ್ನು ಬೇಷರತ್ ಬಿಡುಗಡೆ ಮಾಡಬೇಕು ಮತ್ತು ಅವರ ಮೇಲಿರುವ ಮೊಕದ್ದಮೆ ರದ್ದು ಮಾಡಲು ಸರ್ಕಾರವನ್ನು ಒತ್ತಾಯಿಸಲು ನಿರ್ಧರಿಸಲಾಗಿದೆ. ಇದರ ಜೊತೆಗೆ ಕನ್ನಡ ನಾಮಫಲಕ ಕಡ್ಡಾಯ ಜಾರಿಗೆ ಸರ್ಕಾರಕ್ಕೆ ಗಡುವು ನೀಡಲು ನಿರ್ಧರಿಸಿವೆ.

Related Articles

ಇತ್ತೀಚಿನ ಸುದ್ದಿಗಳು