ಬೆಂಗಳೂರು : ರಾಜ್ಯ ಬಿಜೆಪಿ ಸರ್ಕಾರದಲ್ಲಿ ಬಸವರಾಜ ಬೊಮ್ಮಾಯಿ ಅಧಿಕಾರ ವಹಿಸಿಕೊಂಡು ಒಂದು ವರ್ಷ ಕಳೆದಿದೆ. ಇದರ ಪ್ರಯುಕ್ತ ದೊಡ್ಡಬಳ್ಳಪುರದಲ್ಲಿ ‘ಜನೋತ್ಸವ’ ಸಾಧನ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ ಪಕ್ಷದ ಕಾರ್ಯಕರ್ತ ಪ್ರವೀಣ್ ನೇಟ್ಟಾರು ಹತ್ಯೆಯ ಹಿನ್ನೆಯಲ್ಲಿ ದಿಡೀರನೆ ರಾತ್ರೋ ರಾತ್ರಿ ಈ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ.
ಈ ಕಾರ್ಯಕ್ರಮದ ಕುರಿತು ಪ್ರತಿಕ್ರಿಯೆ ನೀಡಿದ್ದ ಜೆಡಿಎಸ್ ಶಾಸಕಾಂಗ ಪಕ್ಷದ ಅಧ್ಯಕ್ಷ ಎಚ್. ಡಿ. ಕುಮಾರಸ್ವಾಮಿ ಕಾರ್ಯಕ್ರಮವನ್ನು ರದ್ದು ಪಡಿಸುವಂತೆ ಆಗ್ರಹಿಸಿದ್ದರು. ಕಾರ್ಯಕ್ರಮ ರದ್ದಾದ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿ ಸಾವಿನ ಮನೆಯಲ್ಲಿ ಸಂಭ್ರಮ ಬೇಡವೆಂದು ಹೇಳಿದ್ದೆ, ಸರ್ಕಾರಕ್ಕೆ ನಡು ರಾತ್ರಿಯಲ್ಲಿ ಜ್ಞಾನೋದಯವಾಗಿದೆ. ಕೊಲೆಯನ್ನು ತಡೆಯಲಾಗದೆ ಕೊಲೆಯಾದ ಮೇಲೆ ಬಂದು ಸಾಂತ್ವನ ಹೇಳಿದರೆನು ಪ್ರಯೋಜನ ಎಂದು ಹೇಳಿದ್ದಾರೆ.
ತಾಯಂದಿರ ಆರ್ತನಾದ ಸರಕಾರದ ಕಿವಿಗೆ ಇಂಪಾದ ‘ನಾದ’ದಂತೆ ಕೇಳುತ್ತಿವೆಯಾ? ಬಿಜೆಪಿ ‘ಮತಕ್ಕಾಗಿ ಮರಣಮೃದಂಗ’ದ ಆಳ-ಅಗಲ ಜನರಿಗೂ ಅರ್ಥವಾಗುತ್ತಿದೆ. ಬಿಜೆಪಿ ಅಧ್ಯಕ್ಷರು ಸೇರಿ ಸಚಿವರಿಬ್ಬರಿಗೆ ಎದುರಾದ ಪ್ರತಿರೋಧವೇ ಜನರ ತಾಳ್ಮೆ ಕಟ್ಟೆಯೊಡೆದಿದೆ ಎನ್ನುವುದಕ್ಕೆ ಸಾಕ್ಷಿ. – ಎಚ್. ಡಿ. ಕುಮಾರಸ್ವಾಮಿ