Home ಬೆಂಗಳೂರು ಅಕ್ಟೋಬರ್ ಮೊದಲ ವಾರದಿಂದ 4,000 ಅಂಗನವಾಡಿಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳ ಆರಂಭ

ಅಕ್ಟೋಬರ್ ಮೊದಲ ವಾರದಿಂದ 4,000 ಅಂಗನವಾಡಿಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳ ಆರಂಭ

0

ಬೆಂಗಳೂರು: ರಾಜ್ಯ ಸರ್ಕಾರವು ಅಕ್ಟೋಬರ್ ಆರಂಭದಿಂದ ಅಂಗನವಾಡಿಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸಲು ಸಜ್ಜಾಗಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ರಾಜಾಜಿನಗರ ಕ್ಷೇತ್ರದ ಅಂಗನವಾಡಿಗಳಲ್ಲಿ ಪೂರ್ವ ಪ್ರಾಥಮಿಕ ವಿಭಾಗಗಳನ್ನು ಪ್ರಾಯೋಗಿಕ ಆಧಾರದ ಮೇಲೆ ಪ್ರಾರಂಭಿಸಿದೆ.

ಉತ್ತಮ ಪ್ರತಿಕ್ರಿಯೆಯನ್ನು ನೋಡಿದ ಸರ್ರಕಾರ ಇದೀಗ ರಾಜ್ಯಾದ್ಯಂತ 4,000 ಅಂಗನವಾಡಿಗಳಿಗೆ ಕಾರ್ಯಕ್ರಮವನ್ನು ವಿಸ್ತರಿಸಲು ನಿರ್ಧರಿಸಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವೆ ಮಧು ಬಂಗಾರಪ್ಪ ಗುರುವಾರ ಬೆಂಗಳೂರಿನಲ್ಲಿ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಭಾಗವಹಿಸಿದ್ದರು. ಅಂಗನವಾಡಿಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ತೆರೆಯಲು ಅಗತ್ಯವಿರುವ ಕ್ರಮಗಳ ಕುರಿತು ಅವರು ಚರ್ಚಿಸಿದರು.

“ಸಭೆಯು ಶೈಕ್ಷಣಿಕ ಚಟುವಟಿಕೆಗಳು ಮತ್ತು ಮಕ್ಕಳ ಪೋಷಣೆ, ಎತ್ತರ ಮತ್ತು ತೂಕವನ್ನು ಮೇಲ್ವಿಚಾರಣೆ ಮಾಡುವುದನ್ನು ಒಳಗೊಂಡಿತ್ತು” ಎಂದು ಸಭೆಯಲ್ಲಿ ಹಾಜರಿದ್ದ ಅಧಿಕಾರಿಯೊಬ್ಬರು ಹೇಳಿದರು.

“17,000ಕ್ಕೂ ಹೆಚ್ಚು ಪದವೀಧರರು ಅಂಗನವಾಡಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ, ಮತ್ತು ಈ ಮಕ್ಕಳಿಗೆ ಕಲಿಸಲು ನಾವು ಅವರಿಗೆ ತರಬೇತಿ ನೀಡುತ್ತಿದ್ದೇವೆ. ಪ್ರತ್ಯೇಕ ನೇಮಕಾತಿ ಇರುವುದಿಲ್ಲ” ಎಂದು ಮತ್ತೊಬ್ಬ ಅಧಿಕಾರಿ ಹೇಳಿದರು.

ಎಲ್‌ಕೆಜಿ-ಯುಕೆಜಿ ತರಗತಿಗಳನ್ನು ಪ್ರಾರಂಭಿಸಲು ಆಯ್ಕೆ ಮಾಡಲಾದ 4,000 ಅಂಗನವಾಡಿಗಳಲ್ಲಿ 950 ಲಕ್ಷ್ಮಿ ಹೆಬ್ಬಾಳ್ಕರ್ ಅವರ ಹುಟ್ಟೂರು ಬೆಳಗಾವಿ ಜೆಲ್ಲೆಗೆ ಆಯ್ಕೆಯಾಗಿವೆ.

ತರಗತಿಗಳನ್ನು ಪ್ರಾರಂಭಿಸಲು ಇಲಾಖೆಗೆ ಎರಡು ತರಗತಿ ಕೊಠಡಿಗಳು ಬೇಕಾಗುತ್ತವೆ ಮತ್ತು ಸುಮಾರು 10,000 ಅಂಗನವಾಡಿಗಳು ಅಗತ್ಯ ಮೂಲಸೌಕರ್ಯಗಳನ್ನು ಹೊಂದಿವೆ.

ಈ ಅಂಗನವಾಡಿಗಳು ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಎಲ್‌ಕೆಜಿ-ಯುಕೆಜಿಯನ್ನು ನೀಡಲಿದ್ದು, ಪ್ರತಿ ಕೇಂದ್ರಕ್ಕೆ 25 ಮಕ್ಕಳಿಗೆ ಪ್ರವೇಶವನ್ನು ಅನುಮತಿಸಲಾಗುತ್ತದೆ.

You cannot copy content of this page

Exit mobile version