ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ಕರ್ನಾಟಕದ ಜನತೆಗೆ ಉತ್ತಮ ರೈಲು ಸಂಪರ್ಕ ಹಾಗೂ ವರ್ಧಿತ ಪ್ರಯಾಣಿಕರ ಸೌಕರ್ಯ – ವಿ.ಸೋಮಣ್ಣ

ರರಮೇಶ್‌ ಹಾಸನ್‌

ರಮೇಶ್‌ ಹಾಸನ್‌ ರಾಜ್ಯ

• 1 ನಿಮಿಷದ ಓದು

ಕರ್ನಾಟಕದ ಜನತೆಗೆ ಉತ್ತಮ ರೈಲು ಸಂಪರ್ಕ ಹಾಗೂ ವರ್ಧಿತ ಪ್ರಯಾಣಿಕರ ಸೌಕರ್ಯ – ವಿ.ಸೋಮಣ್ಣ

ಚಿಕ್ಕಮಗಳೂರಿನಿಂದ (ಟೈನ್ ಸಂಖ್ಯೆ 16239) ಬೆಳಗ್ಗೆ 8 ಗಂಟೆಗೆ ಹೊರಡುವ ರೈಲು, ಯಶವಂತಪುರಕ್ಕೆ ಮಧ್ಯಾಹ್ನ 2.30ಕೆ ಬರಲಿದೆ. ಇದು ಕೂಡ ಕಡೂರು ಜಂಕ್ಷನ್‌ನಲ್ಲಿ 15 ಮತ್ತು ಅರಸೀಕೆರೆಯಲ್ಲಿ 5 ನಿಮಿಷ ನಿಲ್ಲಲಿದೆ ) 

ಬೆಂಗಳೂರು/ಹಾಸನ/ಚಿಕ್ಕಮಗಳೂರು : ಕರ್ನಾಟಕದ ಜನತೆಗೆ ಉತ್ತಮ ರೈಲು ಸಂಪರ್ಕ ಹಾಗೂ ವರ್ಧಿತ ಪ್ರಯಾಣಿಕರ ಸೌಕರ್ಯ ಕೊಡುವ ನಿಟ್ಟಿನಲ್ಲಿ ಜ.4 ರಿಂದ ಹೊಸ ರೈಲಿಗೆ ಕೇಂದ್ರ ರೈಲು ಮತ್ತು ಜಲಶಕ್ತಿ ರಾಜ್ಯ ಸಚಿವರಾದ ವಿ.ಸೋಮಣ್ಣ ಹಸಿರು ನಿಶಾನೆ ತೋರಿದ್ದಾರೆ. 

ಬೆಂಗಳೂರು ಯಶವಂತಪುರದಿಂದ ಚಿಕ್ಕಮಗಳೂರಿಗೆ ಎಕ್ಸ್ ಪ್ರೆಸ್ ರೈಲು, ಅರಳ ಗುಪ್ಪೆಯಲ್ಲಿ ಹೆಚ್ಚುವರಿ ನಿಲುಗಡೆಯೊಂದಿಗೆ ಕಾರ್ಯಾರಂಭ ಮಾಡಿದೆ ಮಲೆನಾಡು ಮತ್ತು ದಕ್ಷಿಣ ಕರ್ನಾಟಕ ಪ್ರದೇಶದ ಸಾಮಾಜಿಕ, ಆರ್ಥಿಕ ವಹಿವಾಟನ್ನು ಹೆಚ್ಚಿಸಲು ಇದರಿಂದ ಸಹಕಾರಿಯಾಗಲಿದೆ. ಪ್ರಯಾಣಿಕರಿಗೆ ವಿಶೇಷವಾಗಿ ಉದ್ಯಮಿಗಳು, ಸಾಪ್ಟವೇರ್ ವೃತ್ತಿಪರರು, ವಿದ್ಯಾರ್ಥಿಗಳು ಮತ್ತು ರೈತರಿಗೆ ಅರಳಗುಪ್ಪೆ ಪ್ರದೇಶದಿಂದ ಬೆಂಗಳೂರು ಮತ್ತು ಚಿಕ್ಕಮಗಳೂರು ನಗರಗಳಿಗೆ ಪ್ರಯಾಣಿಸಲು ಇದರಿಂದ ಸಹಕಾರಿಯಾಗಲಿದೆ. ಅರಳಗುಪ್ಪೆಯಲ್ಲಿರುವ ಚನ್ನಕೇಶವ ದೇವಾಲಯವು ಪ್ರಾಚೀನ ಧಾರ್ಮಿಕ ತಾಣವಾಗಿದ್ದು, ಪ್ರವಾಸಿಗರಿಗೆ ಆಕರ್ಷಣೀಯ ಅನುಭವವನ್ನು ನೀಡುತ್ತದೆ. ಇದರಿಂದ ಅರಳಗುಪ್ಪೆ ಪಟ್ಟಣವು ಸಾಂಸ್ಕೃತಿಕ ಪ್ರವಾಸೋದ್ಯಮದ ಮಹತ್ವಪೂರ್ಣ ತಾಣವಾಗಿ ಹೊರಹೊಮ್ಮಲಿದೆ ಎಂದು ರೈಲ್ವೆ ಇಲಾಖೆ ಹೇಳಿದೆ. ಟೈನ್ ನಂ 16240 ಮೇಲ್ ಎಕ್ಸ್ ಪ್ರೆಸ್ ಪ್ರತಿ ದಿನ ಸಂಚರಿಸಲಿದ್ದು ಬೆಂಗಳೂರಿನ ಯಶವಂತಪುರ ಜಂಕ್ಷನ್ ನಿಂದ ಮಧ್ಯಾಹ್ನ 3.30ಕ್ಕೆ ಪ್ಲಾಟ್ ಫಾರಂ ಒಂದು ಅಥವಾ ಮೂರನೇ ನಂಬರಿನಿಂದ ಹೊರಡಲಿದೆ. ರಾತ್ರಿ 8.45ಕ್ಕೆ ಚಿಕ್ಕಮಗಳೂರು ನಿಲ್ದಾಣಕ್ಕೆ ತಲುಪಲಿದ್ದು ಒಟ್ಟಾರೆಯಾಗಿ 5.15 ತಾಸಿನ ಪ್ರಯಾಣವಾಗಿದೆ. ಚಿಕ್ಕಬಾಣಾವರದಲ್ಲಿ ಮೊದಲ ಸ್ಟಾಪ್ ಇರಲಿದ್ದು ಒಟ್ಟಿಗೆ 23 ನಿಲ್ದಾಣಗಳಲ್ಲಿ 1 ಅಥವಾ 2 ನಿಮಿಷ ನಿಲುಗಡೆ ಇರಲಿದೆ. ಕಡೂರು ನಿಲ್ದಾಣದಲ್ಲಿ 15 ನಿಮಿಷ ಮತ್ತು ಅರಸೀಕೆರೆ ಜಂಕ್ಷನ್ ನಲ್ಲಿ 5 ನಿಮಿಷ ನಿಲುಗಡೆ ಇರಲಿದೆ. 244 ಕಿಲೋಮೀಟರ್ ಪ್ರಯಾಣ ಇದಾಗಿದೆ. ಚಿಕ್ಕಮಗಳೂರಿನಿಂದ (ಟೈನ್ ಸಂಖ್ಯೆ 16239) ಬೆಳಗ್ಗೆ 8 ಗಂಟೆಗೆ ಹೊರಡುವ ರೈಲು, ಯಶವಂತಪುರಕ್ಕೆ ಮಧ್ಯಾಹ್ನ 2.30ಕೆ ಬರಲಿದೆ. ಇದು ಕೂಡ ಕಡೂರು ಜಂಕ್ಷನ್‌ನಲ್ಲಿ 15 ಮತ್ತು ಅರಸೀಕೆರೆಯಲ್ಲಿ 5 ನಿಮಿಷ ನಿಲ್ಲಲಿದೆ. 

ನಿಲುಗಡೆ ನಿಲ್ದಾಣಗಳು : ಚಿಕ್ಕಬಾಣಾವರ ಜಂಕ್ಷನ್, ಗೊಲ್ಲಹಳ್ಳಿ, ದೊಡ್ಡಬೆಲೆ, ನಿಡ್ವಾಂಡ, ಹಿರೇಹಳ್ಳಿ, ಕ್ಯಾತ್ಸಂದ್ರ, ತುಮಕೂರು, ಗುಬ್ಬಿ, ಅಮ್ಮಸಂದ್ರ, ಕರ್ಡಿ, ತಿಪಟೂರು, ಹೊನ್ನವಳ್ಳಿ ರಸ್ತೆ, ಅರಸೀಕೆರೆ (ಜಂ), ಬಾಣಾವರ, ದೇವನೂರು, ಕಡೂರು (ಜಂ), ಬಿಸಲೇಹಳ್ಳಿ, ಅರಳಗುಪ್ಪೆ, ಸಖರಾಯಪಟ್ಟಣ, ಕನಿವೇಹಳ್ಳಿ, ಚಿಕ್ಕಮಗಳೂರು.

ವಿಷಯಗಳು: #kannada #news
ರರಮೇಶ್‌ ಹಾಸನ್‌

ರಮೇಶ್‌ ಹಾಸನ್‌

Peepal Media · ರಾಜ್ಯ ವಿಭಾಗ

ಸಂಬಂಧಿತ ಸುದ್ದಿಗಳು