ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ಪ್ರಧಾನಿ ಮೋದಿ ವಿಶ್ವಗುರು ಅಲ್ಲ, ವಿಷ ಗುರು ಎನ್ನುವ ನನ್ನ ಹೇಳಿಕೆಯನ್ನು ಒಪ್ಪಿಕೊಂಡ‌ ಆರ್ ಅಶೋಕ ಅವರಿಗೆ ಧನ್ಯವಾದ: ಬಿಕೆ ಹರಿಪ್ರಸಾದ್

PPeepal Media

Peepal Media ರಾಜ್ಯ

• 1 ನಿಮಿಷದ ಓದು

ಪ್ರಧಾನಿ ಮೋದಿ ವಿಶ್ವಗುರು ಅಲ್ಲ, ವಿಷ ಗುರು ಎನ್ನುವ ನನ್ನ ಹೇಳಿಕೆಯನ್ನು ಒಪ್ಪಿಕೊಂಡ‌ ಆರ್ ಅಶೋಕ ಅವರಿಗೆ ಧನ್ಯವಾದ: ಬಿಕೆ ಹರಿಪ್ರಸಾದ್

ಬಿಜೆಪಿ ನಾಯಕ ಆರ್‌ ಅಶೋಕ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ವಿಷಕಂಠನಿಗೆ ಹೋಲಿಸಿರುವುದನ್ನು ಕಾಂಗ್ರೆಸ್‌ ನಾಯಕ ಬಿ ಕೆ ಹರಿಪ್ರಸಾದ್ ತೀವ್ರವಾಗಿ ಟೀಕಿಸಿದ್ದು, “ʼಪ್ರಧಾನಿ ನರೇಂದ್ರ ಮೋದಿ ವಿಶ್ವಗುರು ಅಲ್ಲ, ವಿಷ ಗುರುʼ ಎಂಬ ನನ್ನ ಹೇಳಿಕೆಯನ್ನು ಪ್ರತಿಪಕ್ಷ ನಾಯಕ ಆರ್. ಅಶೋಕ್ ನೂರಕ್ಕೆ ನೂರು ಒಪ್ಪಿಕೊಂಡಿದ್ದಕ್ಕೆ ಧನ್ಯವಾದಗಳು” ಎಂದಿದ್ದಾರೆ.

ಪ್ರಧಾನಿ ಹೇಗೆ ವಿಷಗುರು ಎಂಬುದಕ್ಕೆ ನಾನಂತೂ ಸಾವಿರ ಸಮರ್ಥನೆ ಕೊಡಬಲ್ಲೆ. ಆದರೆ, ವಿಶ್ವಗುರು ಹೇಗೆ ಎಂಬ ಬಗ್ಗೆ ವಿವರಣೆ ಕೊಡಲು BJP Karnataka ನಾಯಕರುಗಳಿಗೆ ಸಾಧ್ಯವೇ? ಎಂದೂ ಅವರು ಕೇಳಿದ್ದಾರೆ.

ಆರ್ ಅಶೋಕ್ ಅವರು ಮೋದಿಯನ್ನು ವಿಶಕಂಠನಿಗೆ ಹೋಲಿಸಿದ್ದಾರೆ. ರಾಜಕೀಯ ಚರ್ಚೆಯನ್ನು ಹೇಗೆ ಮಾಡಬೇಕು ಎಂದು ಬಿಜೆಪಿಗರು ಕಲಿತುಕೊಳ್ಳಬೇಕು. ಚುನಾಯಿತ ಪ್ರತಿನಿಧಿಯಾಗಿರುವ ಪ್ರಧಾನಿಯನ್ನು ವ್ಯಕ್ತಿಪೂಜೆ ಅಥವಾ ಪೌರಾಣಿಕ ಹೋಲಿಕೆಗಳ ಮಟ್ಟಕ್ಕೆ ಇಳಿಯುವುದು ಅಸಹ್ಯಕರ. ಅಷ್ಟಕ್ಕೂ ವಿಶಕಂಠನೆಂದರೆ ಶಿವ. ಅರ್ಧಾಂಗಿ ಪರಿಕಲ್ಪನೆಯನ್ನೇ ಜಗತ್ತಿಗೆ ಸಾರಿದ ಶಿವನೆಲ್ಲಿ ? ತನ್ನ ಪತ್ನಿಯನ್ನೇ ಮನೆಗೆ ಸೇರಿಸದ ಮೋದಿಯೆಲ್ಲಿ ? ಇಂತಹ ವೈಯಕ್ತಿಕ ಚರ್ಚೆಗಳನ್ನು ಹುಟ್ಟುಹಾಕುವಂತಹ ಪರಿಸ್ಥಿತಿಯನ್ನು ಆರ್ ಅಶೋಕ್ ರಂತಹ ಬಿಜೆಪಿಯ ನಾಯಕರು ಸೃಷ್ಟಿಸುವುದು ದುರಂತ! ಎಂದು ಅವರು ಹೇಳಿದ್ದಾರೆ

ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ವಿಶ್ವಗುರು’ ಎಂದು ಹೊಗಳುವ ರಾಜಕೀಯವನ್ನು ನಾನು ಎಂದಿಗೂ ಒಪ್ಪುವುದಿಲ್ಲ. ದೇಶದಲ್ಲಿ ನಿರುದ್ಯೋಗ, ಬೆಲೆ ಏರಿಕೆ, ಸಾಮಾಜಿಕ ವಿಭಜನೆ, ಇಡಿ, ಸಿಬಿಐ, ಐಟಿ ಸೇರಿದಂತೆ ಸಂಸ್ಥೆಗಳ ಸ್ವಾಯತ್ತತೆ ಕುಸಿತ, ಆರ್ಥಿಕತೆಯ ಅಧಃಪತನದ ಸಂದರ್ಭದಲ್ಲಿ ‘ವಿಶ್ವಗುರು’ ಎಂಬ ಪದ ಪ್ರಚಾರದ ಘೋಷಣೆಯಷ್ಟೇ ಹೊರತು ವಾಸ್ತವವಲ್ಲ.

‘ವಿಶ್ವಗುರು’ ಎಂಬ ಪದವಿಗೆ ತಕ್ಕಂತೆ ದೇಶದ ಆರ್ಥಿಕತೆ, ಸಾಮಾಜಿಕ ಸೌಹಾರ್ದತೆ, ಸಂವಿಧಾನ ಮೌಲ್ಯಗಳು ಬಲವಾಗಿದೆಯೇ? ಅಂತರರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಮಾನ್ಯತೆ ಹೆಚ್ಚಿದೆಯೇ? ಜನಜೀವನ ಸುಧಾರಿದೆಯೇ? ಈ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಬೇಕು. ಆಡಳಿತದ ಫಲಿತಾಂಶಗಳಿಂದಲೇ ನಾಯಕತ್ವದ ಮೌಲ್ಯ ನಿರ್ಧಾರವಾಗಬೇಕೇ ಹೊರತು, ಬಾಲಂಗೋಚಿ ಹೊಗಳುಭಟ್ಟರಿಂದಲ್ಲ ಎಂದು ಅವರು ತಮ್ಮ ಫೇಸ್‌ಬುಕ್‌ ಪೋಸ್ಟ್‌ ಮೂಲಕ ತಿಳಿಸಿದ್ದಾರೆ.

PPeepal Media

Peepal Media

Peepal Media · ರಾಜ್ಯ ವಿಭಾಗ

ಸಂಬಂಧಿತ ಸುದ್ದಿಗಳು