ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ಶ್ರೀರಂಗಪಟ್ಟಣದಲ್ಲಿ ಟಿಪ್ಪು ಜಯಂತಿಗೆ ನಿಷೇಧಾಜ್ಞೆ: ಸೆಕ್ಷನ್‌ 144 ಜಾರಿಗೊಳಿಸಿದ ಸರ್ಕಾರ

PPeepal Media Desk

Peepal Media Desk ರಾಜ್ಯ

• 1 ನಿಮಿಷದ ಓದು

ಶ್ರೀರಂಗಪಟ್ಟಣದಲ್ಲಿ ಟಿಪ್ಪು ಜಯಂತಿಗೆ ನಿಷೇಧಾಜ್ಞೆ: ಸೆಕ್ಷನ್‌ 144 ಜಾರಿಗೊಳಿಸಿದ ಸರ್ಕಾರ

ಮೈಸೂರು: ದಿನಾಂಕ 10-09-2023ರಂದು ಶ್ರೀರಂಗಪಟ್ಟಣದಲ್ಲಿ ಟಿಪ್ಪು ವಕ್ಫ್‌ ಎಸ್ಟೇಟ್‌ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಖಾಸಗಿ ಟಿಪ್ಪು ಜಯಂತಿ ಕಾರ್ಯಕ್ರಮದ ಸಂದರ್ಭದಲ್ಲಿ ರಾಜ್ಯ ಸರ್ಕಾರವು ನಿಷೇದಾಜ್ಞೆ ವಿಧಿಸಿ ದಿನಾಂಕ 09-11-2023ರಂದು ಆದೇಶ ಹೊರಡಿಸಿದೆ. ಶ್ರೀರಂಗಪಟ್ಟಣ ತಾಲ್ಲೂಕು ಕಾರ್ಯನಿರ್ವಾಹಕ ದಂಡಾದಿಕಾರಿ ಮತ್ತು ತಹಶಿಲ್ದಾರರಾದ ಪರಶುರಾಮ  ಸತ್ತಿಗೇರಿಯವರು ಹೊರಡಿಸಿರುವ ಆದೇಶದಂತೆ ಶುಕ್ರವಾರ CRPC ಕಲಂ 144 ಅನ್ವಯ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಶ್ರೀರಂಗಪಟ್ಟಣ ಟೌನ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಐದು ಅಥವಾ ಐದಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ, ಯಾವುದೇ ರೀತಿಯ ಸಭೆ, ಸಮಾರಂಭ ಮತ್ತು ಮೆರವಣಿಗೆ ನಡೆಸುವಂತಿಲ್ಲ; ಪ್ರತಿಭಟನೆ, ಮೆರವಣಿಗೆ, ಬ್ಯಾನರ್‌, ಬಂಟಿಂಗ್ಸ್‌, ಮೈಕ್‌, ಪಟಾಕಿ ಯಾವುದಕ್ಕೂ ಅವಕಾಶವಿಲ್ಲ, ಡಿಜೆ ಹಾಕುವಂತಿಲ್ಲ, ರಸ್ತೆ ರಡೆ ನಡೆಸುವಂತಿಲ್ಲ ಎಂದು ಆದೇಶ ಹೊರಡಿಸಲಾಗಿದೆ.

ಈ ಹಿಂದೆ ನವೆಂಬರ್‌ 11ರಂದು ರಾಜ್ಯ ಸರ್ಕಾರವೇ ಟಿಪ್ಪು ಜಯಂತಿ ಆಚರಿಸುತ್ತಿತ್ತು. ಆದರೆ ಕಳೆದ ಎರಡು ವರ್ಷಗಳಲ್ಲಿ ಬಿಜೆಪಿ ಆಡಳಿತದ ಅವಧಿಯಲ್ಲಿ ಟಿಪ್ಪು ಜಯಂತಿ ಆಚರಣೆಯನ್ನು ನಿಲ್ಲಿಸಲಾಗಿತ್ತು. ಈ ನಡುವೆ ಟಿಪ್ಪು ಹುಟ್ಟಿದ ದಿನಾಂಕವು ಡಿಸೆಂಬರ್‌ 1 ಎಂದು ಸಂಶೋಧಕರು ಪತ್ತೆ ಮಾಡಿದ್ದ ಹಿನ್ನೆಲೆಯಲ್ಲಿ ಟಿಪ್ಪು ಜಯಂತಿಯ ದಿನವೂ ಬದಲಾಗಿದೆ. ಆದರೆ ಈ ಸಲ ಸರ್ಕಾರವು ಟಿಪ್ಪು ಜಯಂತಿ ಆಚರಿಸುವ ಸೂಚನೆ ಇಲ್ಲ. ಕೆಲವು ಖಾಸಗಿ ಸಂಘ ಸಂಸ್ಥೆಗಳು ಹಲವಾರು ವರ್ಷಗಳಿಂದ ಟಿಪ್ಪು ಜಯಂತಿ ಮತ್ತು ಟಿಪ್ಪು ಹುತಾತ್ಮ ದಿನಾಚರಣೆ ನಡೆಸುತ್ತಾ ಬಂದಿದ್ದಾರೆ. ಕೆಲವರು ನವೆಂವರ್‌ 10ಕ್ಕೆ ಆಚರಿಸುತ್ತಾರೆ. ಈ ಸಲ ಮಂಡ್ಯ-ಮೈಸೂರು ಸಮಾನ ಮನಸ್ಕರ ವೇದಿಕೆ ವತಿಯಿಂದ ಡಿಸೆಂಬರ್‌ 1 ರಂದು ಶ್ರೀರಂಗಪಟ್ಟಣದಲ್ಲಿ ದೊಡ್ಡ ಮಟ್ಟದಲ್ಲಿ ಟಿಪ್ಪು ಜಯಂತಿ ಹಮ್ಮಿಕೊಂಡಿದೆ. ಆದರೆ ಆಡಳಿತದಲ್ಲಿರುವ ಕಾಂಗ್ರೆಸ್‌ ಸರ್ಕಾರ ಇಂತಹ ಖಾಸಗಿ ಟಿಪ್ಪು ಜಯಂತಿ ಆಚರಣೆಗೂ ತಡೆಯೊಡ್ಡುತ್ತಿರುವುದು ಅಚ್ಚರಿಯ ಸಂಗತಿಯಾಗಿದೆ. ಬ್ರಿಟಿಷರ ವಿರುದ್ಧ ಕೆಚ್ಚೆದ ಹೋರಾಟ ಮಾಡಿ, ಬ್ರಿಟಿಷರ ಎದೆ ನಡುಗಿಸಿದ್ದ ಮೈಸೂರಿನ ಆಡಳಿತಗಾರ ಟಿಪ್ಪು ಸುಲ್ತಾನ್‌ ಅವರ ಹಿರಿಮೆ ಲೋಕಕ್ಕೇ ತಿಳಿದ ಸಂಗತಿ. ಇಂತಹ ಮಹಾನ್‌ ಪರಾಕ್ರಮಿ ಟಿಪ್ಪು ಸುಲ್ತಾನ್ ಜಯಂತಿಯನ್ನು ಯಾರೇ ಆಚರಿಸಿದರೂ ಸೂಕ್ತ ರಕ್ಷಣೆ ನೀಡಬೇಕಾಗಿರುವ ಸರ್ಕಾರವೇ ಟಿಪ್ಪು ಜಯಂತಿಯ ಮೇಲೆ ನಿಷೇಧ ಹೇರಿರುವುದು ಎಷ್ಟು ಸರಿ ಎಂಬ ಚರ್ಚೆಗೆ ಈ ಆದೇಶ ಕಾರಣವಾಗಿದೆ.

ಇದನ್ನೂ ಓದಿ:

PPeepal Media Desk

Peepal Media Desk

Peepal Media · ರಾಜ್ಯ ವಿಭಾಗ

ಸಂಬಂಧಿತ ಸುದ್ದಿಗಳು