ಮುಂದಿನ ದಿನಗಳಲ್ಲಿ ನಿಮ್ಮನ್ನ ನಾನು ಭೇಟಿ ಮಾಡೇ ಮಾಡುತ್ತೇನೆ – ನಟ ದರ್ಶನ್
ಲಿಂಕ್ ನಕಲಿಸಲಾಗಿದೆ ✓
ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಹಳ ದಿನಗಳ ನಂತರ ಸೆಲೆಬ್ರಿಟಿಗಳ ಬಗ್ಗೆ ಮಾತಾಡಿದ್ದಾರೆ. ವಿಡಿಯೋ ಸಂದೇಶ ಹೊರಬಿಟ್ಟಿರುವ ದಾಸ ಬೆಂಬಲ ನೀಡಿದ ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳಿದ್ದಾರೆ.
https://www.facebook.com/watch/?mibextid=wwXIfr&v=1751073738791599&rdid=UOZsKgBeqoPMfvBZ
ನನ್ನ ಬಗ್ಗೆ ವಿಶೇಷ ಕಾಳಜಿ ಹಾಗೂ ಅಭಿಮಾನವನ್ನ ಇಟ್ಟುಕೊಂಡಿದ್ದೀರಾ. ನೀವು ತುಂಬಾ ಆಸೆ ಪಟ್ಟಿದ್ದಿರೀ, ನನಗೂ ಸಹ ತುಂಬಾ ಆಸೆ ಇತ್ತು. ನನ್ನ ಸೆಲೆಬ್ರಿಟಿಗಳನ್ನ ಭೇಟಿ ಮಾಡಿ ಥ್ಯಾಂಕ್ಸ್ ಹೇಳಬೇಕು ಅಂತ ನನಗೂ ಆಸೆ ಇತ್ತು. ಬರ್ತ್‌ಡೇಯನ್ನು ಗ್ರ್ಯಾಂಡ್ ಆಗಿ ಆಚರಿಸಲು ಡಿ ಬಾಸ್ ಅಭಿಮಾನಿಗಳಿಗೆ ಕಾದುಕುಳಿತಿದ್ರು. ಆದರೆ, ನಟ ದರ್ಶನ್ ತಮ್ಮ ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿದ್ಈದಾರೆ. ಬಾರಿ ಆರೋಗ್ಯ ಸಮಸ್ಯೆ ಇದೆ. ನನಗೆ ತುಂಬಾ ಹೊತ್ತು ನಿಲ್ಲಲು ಆಗುವುದಿಲ್ಲ. ಹೀಗಾಗಿ ನಾನು ನಿಮ್ಮ ಭೇಟಿ ಮಾಡಲು ಕಷ್ಟವಾಗಲಿದೆ ಎಂದು ನನ್ನ ಪ್ರೀತಿಯ ಸೆಲೆಬ್ರಿಟಿಗಳಿಗೆ ನನ್ನ ಪ್ರೀತಿಯ ಮನವಿ ಈ ವರ್ಷ ನನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ ಕ್ಷಮೆ ಇರಲಿ ಇಂತಿ ನಿಮ್ಮ ದಾಸ ದರ್ಶನ್ ಎಂದು ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ನಿಮ್ಮನ್ನ ಖಂಡಿತವಾಗಿಯೂ ನಾನು ನಿಮ್ಮನ್ನ ಭೇಟಿ ಮಾಡೇ ಮಾಡುತ್ತೇನೆ. ನನ್ನ ಸೆಲೆಬ್ರಿಟಿಗಳು ಯಾವುದೇ ಕಾರಣಕ್ಕೂ ಮಾತುಗಳಿಗೆ ಕಿವಿಕೊಡ್ಬೇಡಿ ಎಂದು ನಟ ದರ್ಶನ್ ಮನವು ಮಾಡಿಕೊಂಡಿದ್ದಾರೆ.
ರಮೇಶ್ ಹಾಸನ್
Peepal Media · ರಾಜ್ಯ ವಿಭಾಗ