ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ಸೋನಿಯಾ ಗಾಂಧಿಯವರ ದೇಹದಲ್ಲಿ ಹರಿಯುತ್ತಿರುವುದು ಇಟಲಿ ರಕ್ತ – HD ಕುಮಾರಸ್ವಾಮಿ

ರರಮೇಶ್‌ ಹಾಸನ್‌

ರಮೇಶ್‌ ಹಾಸನ್‌ ರಾಜ್ಯ

• 1 ನಿಮಿಷದ ಓದು

ಸೋನಿಯಾ ಗಾಂಧಿಯವರ ದೇಹದಲ್ಲಿ ಹರಿಯುತ್ತಿರುವುದು ಇಟಲಿ ರಕ್ತ – HD ಕುಮಾರಸ್ವಾಮಿ

ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ದಿನ ಸೋನಿಯಾ ಗಾಂಧಿಯವರು ವಂದೇ ಮಾತರಂ ಗೀತೆಯನ್ನು ಅರ್ಧಕ್ಕೆ ನಿಲ್ಲಿಸಲು ಹೇಳಿದರು ಎಂಬ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಷ್ಟ್ರೀಯ ಗೀತೆಯ ಬಗ್ಗೆ ಸೋನಿಯಾ ಗಾಂಧಿಯವರ ಬದ್ಧತೆಯನ್ನು ಪ್ರಶ್ನಿಸಿದ ಕುಮಾರಸ್ವಾಮಿ, ಸೋನಿಯಾ ಗಾಂಧಿ ಅವರ ಇಟಲಿ ಮೂಲದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ ಅವರು ರಚಿಸಿರುವ ‘ವಂದೇ ಮಾತರಂ’ ಗೀತೆಯನ್ನು ಪ್ರತಿಯೊಬ್ಬರೂ ಗೌರವಿಸಬೇಕು. ರಾಷ್ಟ್ರ ಗೀತೆಗೆ ಕಾಂಗ್ರೆಸ್ ಅನಗತ್ಯವಾಗಿ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ಅವರು ಆರೋಪಿಸಿದರು. ವಂದೇ ಮಾತರಂ ಗೀತೆಗೆ ಸ್ವಾತಂತ್ರ್ಯ ಹೋರಾಟದೊಂದಿಗೆ ಐತಿಹಾಸಿಕ ನಂಟಿದೆ ಎಂದು ಹೇಳಿದ ಅವರು, ಮಹಾತ್ಮ ಗಾಂಧೀಜಿ ಅವರು ವಂದೇ ಮಾತರಂ ಹಾಡುತ್ತಿದ್ದ ಕಾಂಗ್ರೆಸ್ ಅಧಿವೇಶನಗಳಲ್ಲಿ ಭಾಗವಹಿಸಿದ್ದರು. ರವೀಂದ್ರನಾಥ ಟ್ಯಾಗೋರ್ ಕೂಡ ವಂದೇ ಮಾತರಂ ಹಾಡಿದ್ದರು. ಅಂತಹ ಇತಿಹಾಸ ಹೊಂದಿರುವ ಕಾಂಗ್ರೆಸ್ ವಂದೇ ಮಾತರಂ ವಿಚಾರದಲ್ಲಿ ಈಗ ಇಂತಹ ಸಂಕುಚಿತ ಮನೋಭಾವ ಪ್ರದರ್ಶಿಸಬಾರದು ಎಂದು ಹೇಳಿದರು.

ವಂದೇ ಮಾತರಂ ಹಾಡುವುದಕ್ಕೆ ಸೋನಿಯಾ ಗಾಂಧಿ ಆಕ್ಷೇಪ ವ್ಯಕ್ತಪಡಿಸಿದ್ದರು ಎಂಬ ಆರೋಪಗಳ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಸೋನಿಯಾ ಗಾಂಧಿಯಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಸೋನಿಯಾ ಗಾಂಧಿ ನಮ್ಮ ದೇಶದವರೇ? ಮದುವೆಯ ನಂತರ ಅವರು ಭಾರತಕ್ಕೆ ಬಂದವರು. ಅವರ ನರಗಳಲ್ಲಿ ಹರಿಯುತ್ತಿರುವುದು ಭಾರತೀಯ ರಕ್ತವಲ್ಲ, ಇಟಲಿ ರಕ್ತ ಅಲ್ಲವೇ?” ಎಂದು ಪ್ರಶ್ನಿಸಿದರು. ಈ ಬೆಳವಣಿಗೆಗಳನ್ನು ಜನರು ಗಮನಿಸುತ್ತಿದ್ದಾರೆ. ಪ್ರಜಾಪ್ರಭುತ್ವದ ಪ್ರಕ್ರಿಯೆಯ ಮೂಲಕ ಜನರು ಸೂಕ್ತ ಉತ್ತರ ನೀಡಲಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಂದೇ ಮಾತರಂ ಗೀತೆಗೆ ಕಾಂಗ್ರೆಸ್ ಅಗೌರವ ತೋರುತ್ತಿದೆ ಎಂದೂ ಅವರು ಆರೋಪಿಸಿದರು.

ವಿಷಯಗಳು: #karnataka #news
ರರಮೇಶ್‌ ಹಾಸನ್‌

ರಮೇಶ್‌ ಹಾಸನ್‌

Peepal Media · ರಾಜ್ಯ ವಿಭಾಗ

ಸಂಬಂಧಿತ ಸುದ್ದಿಗಳು