ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ಶಕ್ತಿ ಯೋಜನೆ ಟಿಕೆಟ್ ಸಂ‍ಖ್ಯೆ ವ್ಯತ್ಯಾಸ: ಸಿಬ್ಬಂದಿಗೆ ಬಿಗಿಯಾದ ದಂಡ ನಿಯಮ ಜಾರಿಗೊಳಿಸಿ ಆದೇಶ ಹೊರಡಿಸಿದ ಕೆಎಸ್‌ಆರ್‌ಟಿಸಿ

PPeepal Media

Peepal Media ರಾಜ್ಯ

• 1 ನಿಮಿಷದ ಓದು

ಶಕ್ತಿ ಯೋಜನೆ ಟಿಕೆಟ್ ಸಂ‍ಖ್ಯೆ ವ್ಯತ್ಯಾಸ: ಸಿಬ್ಬಂದಿಗೆ ಬಿಗಿಯಾದ ದಂಡ ನಿಯಮ ಜಾರಿಗೊಳಿಸಿ ಆದೇಶ ಹೊರಡಿಸಿದ ಕೆಎಸ್‌ಆರ್‌ಟಿಸಿ

ಬೆಂಗಳೂರು: ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ‘ಶಕ್ತಿ ಯೋಜನೆ’ಯಡಿ ಮಹಿಳಾ ಪ್ರಯಾಣಿಕರಿಗೆ ಶೂನ್ಯ ಮುಖಬೆಲೆಯ (Zero Fare) ಟಿಕೆಟ್ ವಿತರಿಸುವಾಗ ನಿರ್ವಾಹಕರಿಂದ (Conductors) ಉಂಟಾಗುವ ವ್ಯತ್ಯಾಸ ಹಾಗೂ ನಿರ್ಲಕ್ಷ್ಯವನ್ನು ತಡೆಯಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಹೊಸ ಮಾರ್ಗದರ್ಶಿ ಸೂಚಿಗಳನ್ನು ಒಳಗೊಂಡ ಸುತ್ತೋಲೆ ಹೊರಡಿಸಿದೆ.

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ (MD) ಕೆ.ಬಿ. ಶಿವಕುಮಾರ್ (ಐಎಎಸ್) ಅವರ ಸಹಿಯೊಂದಿಗೆ ಹೊರಡಿಸಲಾದ ಈ ಆದೇಶವು ಜುಲೈ 2026 ರಿಂದ ಜಾರಿಗೆ ಬಂದಿದ್ದು, ಆಗಸ್ಟ್ 1, 2026 ರಿಂದ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ಬಂದಿದೆ. ಸಂಸ್ಥೆಯ ಆದೇಶ ಸಂಖ್ಯೆ 818/2023 ಕ್ಕೆ ತಿದ್ದುಪಡಿ ತಂದು ಶಕ್ತಿ ಯೋಜನೆಯಡಿಯ ಪ್ರಕರಣಗಳನ್ನು ಮೂರು ಹಂತಗಳಲ್ಲಿ ವರ್ಗೀಕರಿಸಲಾಗಿದೆ:

ವರ್ಗೀಕರಣ ಮತ್ತು ತನಿಖಾ ಕ್ರಮಗಳು:

1. ವಾಸ್ತವ ಸಂಖ್ಯೆಗಿಂತ ಹೆಚ್ಚುವರಿ ಟಿಕೆಟ್ ವಿತರಣೆ: ಬಸ್‌ನಲ್ಲಿ ಪ್ರಯಾಣಿಸುತ್ತಿರುವ ಮಹಿಳಾ ಪ್ರಯಾಣಿಕರ ನಿಜವಾದ ಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯ ಶೂನ್ಯ ಮುಖಬೆಲೆಯ ಟಿಕೆಟ್‌ಗಳನ್ನು ವಿತರಿಸುವುದು ಕಂಡುಬಂದಲ್ಲಿ:

  • 3 ಟಿಕೆಟ್‌ಗಳವರೆಗೆ: ‘ಸಾಮಾನ್ಯ ಪ್ರಕರಣ’ (Ordinary Case).
  • 4 ರಿಂದ 5 ಟಿಕೆಟ್‌ಗಳು: ‘ಕೆಂಪು ಗುರುತಿನ ಪ್ರಕರಣ’ (Red Mark Case – RMC).
  • 6 ಅಥವಾ ಅದಕ್ಕಿಂತ ಹೆಚ್ಚು ಟಿಕೆಟ್‌ಗಳು: ‘ಅಸಾಧಾರಣ ಕೆಂಪು ಗುರುತಿನ ಪ್ರಕರಣ’ (Dreaded Red Mark Case – DRMC).

2. ಟಿಕೆಟ್ ವಿತರಿಸದೇ ಇರುವುದು (ವಿಶೇಷ ಪರಿಶೀಲನೆ):

  • 50 ಕ್ಕಿಂತ ಹೆಚ್ಚು ಪ್ರಯಾಣಿಕರಿದ್ದಾಗ: 3 ಟಿಕೆಟ್‌ಗಳವರೆಗೆ ವಿತರಿಸದಿದ್ದರೆ ಸಾಮಾನ್ಯ ಪ್ರಕರಣ, 4-5 ಟಿಕೆಟ್‌ಗಳಿಗೆ RMC ಹಾಗೂ 6 ಕ್ಕಿಂತ ಹೆಚ್ಚಿದ್ದರೆ ORMC ಎಂದು ಪರಿಗಣಿಸಲಾಗುವುದು.
  • 50 ಕ್ಕಿಂತ ಕಡಿಮೆ ಪ್ರಯಾಣಿಕರಿದ್ದಾಗ: 1 ಟಿಕೆಟ್ ವಿತರಿಸದಿದ್ದರೆ ಸಾಮಾನ್ಯ ಪ್ರಕರಣ, 2 ಟಿಕೆಟ್‌ಗೆ RMC ಹಾಗೂ 3 ಅಥವಾ ಅದಕ್ಕಿಂತ ಹೆಚ್ಚು ಟಿಕೆಟ್‌ಗಳಿಗೆ ORMC ಎಂದು ಪರಿಗಣಿಸಲಾಗುತ್ತದೆ.

3. ಇತರ ರಾಜ್ಯದ ಹಾಗೂ ಪುರುಷ ಪ್ರಯಾಣಿಕರಿಗೆ ಶಕ್ತಿ ಟಿಕೆಟ್ ನೀಡುವುದು:

  • ನಗರ/ವೇಗದೂತ ರಸ್ತೆ ಸಾರಿಗೆಗಳಲ್ಲಿ ಉಚಿತ/ಪಿಂಕ್ ಟಿಕೆಟ್ ವ್ಯತ್ಯಾಸ ಕಂಡುಬಂದಲ್ಲಿ ನಿರ್ವಾಹಕರಿಂದ ದಂಡ ವಸೂಲಿ ಮಾಡಲಾಗುವುದು.
  • ಪುರುಷ ಪ್ರಯಾಣಿಕರಿಗೆ ಅಥವಾ ಯೋಜನೆಗೆ ಅರ್ಹರಲ್ಲದ ಸಂಸ್ಥೆ/ಇತರ ರಾಜ್ಯದ ಮಹಿಳೆಯರಿಗೆ ಶಕ್ತಿ ಟಿಕೆಟ್ ವಿತರಿಸಿದರೆ, ಸಾರಿಗೆ ಆದಾಯ ಸೋರಿಕೆಯ ಪ್ರಮಾಣವನ್ನು ಆಧರಿಸಿ ಹಾಲಿ ಜಾರಿಯಲ್ಲಿರುವ ನಿಯಮಾವಳಿಗಳಂತೆ ‘ಸಾಮಾನ್ಯ’, ‘RMC’ ಅಥವಾ ‘ORMC’ ಪ್ರಕರಣವೆಂದು ಪರಿಗಣಿಸಿ ಶಿಸ್ತುಕ್ರಮ ಜರುಗಿಸಲಾಗುವುದು.

ಸಂಸ್ಥೆಯ ಆದಾಯ ಸೋರಿಕೆಯನ್ನು ತಡೆಯಲು ಹಾಗೂ ಯೋಜನೆಯು ದುರುಪಯೋಗವಾಗದಂತೆ ನೋಡಿಕೊಳ್ಳಲು ಮೇಲ್ವಿಚಾರಕರು ಹಾಗೂ ತನಿಖಾ ದಳದ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ಸಿಬ್ಬಂದಿಯ ಜವಾಬ್ದಾರಿಯನ್ನು ನಿಗದಿಪಡಿಸಲಾಗಿದೆ.

PPeepal Media

Peepal Media

Peepal Media · ರಾಜ್ಯ ವಿಭಾಗ

ಸಂಬಂಧಿತ ಸುದ್ದಿಗಳು