ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
●ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮ●ಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?●ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್●ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರ●ಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆ●ಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರ●ರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈ●ಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌●ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿ●ಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕ●ಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶ●ಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್●ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆ●ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪ●ಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹ●ದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟ●ಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯ●ನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌●300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿ●ತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ಮೆಟ್ರೋ ದರ ವಿವಾದ ತಾರಕಕ್ಕೆ ಬೆಲೆ ಹೆಚ್ಚಳಕ್ಕೆ – ಪ್ರಯಾಣಿಕರ ಆಕ್ರೋಶ

ರರಮೇಶ್‌ ಹಾಸನ್‌

ರಮೇಶ್‌ ಹಾಸನ್‌ • ರಾಜ್ಯ

• 1 ನಿಮಿಷದ ಓದು

ಮೆಟ್ರೋ ದರ ವಿವಾದ ತಾರಕಕ್ಕೆ ಬೆಲೆ ಹೆಚ್ಚಳಕ್ಕೆ – ಪ್ರಯಾಣಿಕರ ಆಕ್ರೋಶ

ಬೆಂಗಳೂರು : ನಮ್ಮ ಮೆಟ್ರೋ(Namma Metro) ಪ್ರಯಾಣಿಕರಿಂದ ಈಗಾಗಲೇ ಗರಿಷ್ಠ ₹90 ಪ್ರಯಾಣ ದರ ವಸೂಲಿ ಮಾಡುತ್ತಿರುವ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು (BMRCL), ತನ್ನದೇ ಸ್ವಂತ ದಾಖಲೆಗಳಲ್ಲಿ 2031ರ ವೇಳೆಗೆ ಗರಿಷ್ಠ ದರ ₹75 ಇರಲಿದೆ ಎಂದು ಉಲ್ಲೇಖಿಸಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ. BMRCLನ ಈ ವೈರುಧ್ಯದ ಲೆಕ್ಕಾಚಾರಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ತಕ್ಷಣವೇ ಟಿಕೆಟ್ ದರವನ್ನು ಪರಿಷ್ಕರಿಸುವಂತೆ ಪ್ರಯಾಣಿಕರು ಆಗ್ರಹಿಸಿದ್ದಾರೆ.

DPRನಲ್ಲಿ ಒಂದು ಲೆಕ್ಕ, ವಾಸ್ತವದಲ್ಲಿ ಮತ್ತೊಂದು!
ಜೂನ್ 2024ರಲ್ಲಿ ಸಿದ್ಧಗೊಂಡ ಮೆಟ್ರೋ ಹಂತ-3ಎ (ರೆಡ್ ಲೈನ್: ಹೆಬ್ಬಾಳ–ಸರ್ಜಾಪುರ) ಯೋಜನೆಯ ವಿವರವಾದ ಯೋಜನಾ ವರದಿ (DPR) ಹಾಗೂ 2026ರಲ್ಲಿ ಪರಿಷ್ಕರಿಸಲಾದ ವರದಿಯಲ್ಲಿ, ಪ್ರತಿ ಮೂರು ವರ್ಷಕ್ಕೊಮ್ಮೆ 12% ದರ ಹೆಚ್ಚಳವಾಗಲಿದೆ ಎಂದು ಅಂದಾಜಿಸಲಾಗಿತ್ತು. ಈ ಸೂತ್ರದ ಪ್ರಕಾರ 2031ರ ವೇಳೆಗೆ ಗರಿಷ್ಠ ಪ್ರಯಾಣ ದರ ₹75 ಆಗಬೇಕಿತ್ತು.

ಆದರೆ, ಪ್ರಯಾಣ ದರ ನಿಗದಿ ಸಮಿತಿ (FFC) ಶಿಫಾರಸಿನಂತೆ ವಾರ್ಷಿಕ 5% ದರ ಹೆಚ್ಚಳದ ನಿಯಮದಡಿ 2025ರ ಫೆಬ್ರವರಿಯಿಂದಲೇ ಬಿಎಂಆರ್‌ಸಿಎಲ್ ಗರಿಷ್ಠ ₹90 ದರವನ್ನು ಜಾರಿಗೆ ತಂದಿದೆ. ನಿಯಮಾವಳಿ ಮತ್ತು ಡಿಪಿಆರ್ ಲೆಕ್ಕಾಚಾರಗಳ ನಡುವಿನ ಈ ಬೃಹತ್ ವ್ಯತ್ಯಾಸದ ಬಗ್ಗೆ ಬಿಎಂಆರ್‌ಸಿಎಲ್ ಹಲವು ತಿಂಗಳುಗಳಿಂದ ಯಾವುದೇ ಸ್ಪಷ್ಟನೆ ನೀಡದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ದರ ಏರಿಕೆ ಆರೋಪ
ಮೆಟ್ರೋ ದರ ನಿಗದಿಪಡಿಸುವ ಸೂತ್ರವನ್ನು ಬಿಎಂಆರ್‌ಸಿಎಲ್ ತಪ್ಪಾಗಿ ಅನ್ವಯಿಸಿದೆ ಎಂಬ ಆರೋಪಗಳು ಬಲವಾಗಿ ಕೇಳಿಬರುತ್ತಿವೆ. ಆರಂಭದಲ್ಲಿ 105% ನಷ್ಟು ದರ ಹೆಚ್ಚಳ ಮಾಡಿ, ನಂತರ ಅದನ್ನು 71% ಗೆ ಇಳಿಸಲಾಗಿತ್ತು. ಪರಿಣಾಮವಾಗಿ, ಬಿಎಂಆರ್‌ಸಿಎಲ್ ತನ್ನದೇ ಯೋಜನಾ ವರದಿಯಲ್ಲಿ ಅಂದಾಜಿಸಿದ್ದಕ್ಕಿಂತಲೂ ಹೆಚ್ಚಿನ ಮೊತ್ತವನ್ನು ಪ್ರಯಾಣಿಕರು ಪ್ರತಿದಿನ ಪಾವತಿಸುವಂತಾಗಿದೆ.

‘ಮುಂದಿನ ಏರಿಕೆಗೂ ಮುನ್ನ ಹಿಂದಿನ ಲೋಪ ಸರಿಪಡಿಸಿ’
ಈ ಕುರಿತು ಮಾತನಾಡಿರುವ ಬೆಂಗಳೂರು ಮೆಟ್ರೋ ಪ್ರಯಾಣಿಕರ ಸಂಘದ ಸಹ-ಸಂಯೋಜಕ ರಾಜೇಶ್ ಭಟ್, “ಮತ್ತೊಮ್ಮೆ ದರ ಹೆಚ್ಚಳ ಮಾಡುವ ಮುನ್ನ ಈಗಿನ ದರ ವ್ಯವಸ್ಥೆಯಲ್ಲಿರುವ ಲೋಪಗಳನ್ನು ಸರಿಪಡಿಸಬೇಕು. ಸೂತ್ರದ ತಪ್ಪು ಅನ್ವಯದ ಬಗ್ಗೆ ಸ್ಪಷ್ಟನೆ ನೀಡದೆ ಮುಂದಿನ ದರ ಏರಿಕೆ ಮಾಡಬಾರದು” ಎಂದು ಒತ್ತಾಯಿಸಿದ್ದಾರೆ. ಅಲ್ಲದೆ, ಬಿಎಂಆರ್‌ಸಿಎಲ್ ತನ್ನ ವೆಚ್ಚ, ಆದಾಯ ಮತ್ತು ಲಾಭದ ವಿವರಗಳನ್ನು ಒಳಗೊಂಡ ‘ಶ್ವೇತಪತ್ರ’ (White Paper) ಪ್ರಕಟಿಸಬೇಕು ಹಾಗೂ ದರ ನಿಗದಿ ಪ್ರಕ್ರಿಯೆಯಲ್ಲಿ ಪ್ರಯಾಣಿಕರಿಗೂ ಸೂಕ್ತ ಪ್ರತಿನಿಧಿತ್ವ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಸಾರ್ವಜನಿಕ ಸಾರಿಗೆ ಲಾಭಕ್ಕಲ್ಲ!
“ನಗರದ ಸಂಚಾರ ದಟ್ಟಣೆ ಹಾಗೂ ಮಾಲಿನ್ಯ ಕಡಿಮೆ ಮಾಡಲು ಸಾರ್ವಜನಿಕ ಸಾರಿಗೆಯನ್ನು ಕೈಗೆಟುಕುವ ದರದಲ್ಲಿ ನೀಡಬೇಕು. ಅದನ್ನು ಬಿಟ್ಟು ಲಾಭದ ದೃಷ್ಟಿಯಿಂದ ಮೆಟ್ರೋ ದರ ನಿಗದಿಪಡಿಸುತ್ತಿರುವುದು ದುರದೃಷ್ಟಕರ. ತಪ್ಪಾದ ಲೆಕ್ಕಾಚಾರಗಳಿಂದಾಗಿ ದೇಶದ ಇತರ ನಗರಗಳಿಗೆ ಹೋಲಿಸಿದರೆ ಬೆಂಗಳೂರು ಮೆಟ್ರೋ ದರ ಅತ್ಯಂತ ದುಬಾರಿಯಾಗಿದೆ” ಎಂದು ನಿಯಮಿತ ಮೆಟ್ರೋ ಪ್ರಯಾಣಿಕ ಕೊಚ್ಚು ಶಂಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಷಯಗಳು: #karnataka #news
ರರಮೇಶ್‌ ಹಾಸನ್‌

ರಮೇಶ್‌ ಹಾಸನ್‌

Peepal Media · ರಾಜ್ಯ ವಿಭಾಗ

ಸಂಬಂಧಿತ ಸುದ್ದಿಗಳು