ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ರೈಲ್ವೆ ಪೊಲೀಸ್ರ ಕಿರುಕುಳದಿಂದ ರಕ್ಷಿಸುವಂತೆ ಚಿಂದಿ ಆಯುವವರಿಂದ ಡಿಸಿ ಕಛೇರಿ ಮುಂದೆ ಪ್ರತಿಭಟನೆ

ರರಮೇಶ್‌ ಹಾಸನ್‌

ರಮೇಶ್‌ ಹಾಸನ್‌ ರಾಜ್ಯ

• 1 ನಿಮಿಷದ ಓದು

ರೈಲ್ವೆ ಪೊಲೀಸ್ರ ಕಿರುಕುಳದಿಂದ ರಕ್ಷಿಸುವಂತೆ ಚಿಂದಿ ಆಯುವವರಿಂದ ಡಿಸಿ ಕಛೇರಿ ಮುಂದೆ ಪ್ರತಿಭಟನೆ

ಹಾಸನ: ಕರ್ನಾಟಕದ ಯಶವಂತಪುರದ ರೈಲ್ವೆ ಪೊಲೀಸ್ ಮತ್ತು ಹಾಸನದ ರೈಲ್ವೆ ಪೊಲೀಸರು ಪರಿಶಿಷ್ಟ ಪಂಗಡದವರಾದ ನಮ್ಮಗಳ ಮೇಲೆ ಕಿರುಕುಳ ದೌರ್ಜನ್ಯ ನಡೆಸುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಗುಜರಿ ವ್ಯಾಪಾರಸ್ತರು ಹಾಗೂ ರಸ್ತೆ, ಪುಟ್ಬಾತ್ ನಲ್ಲಿ ಪ್ಲಾಸ್ಟಿಕ್, ಚಿಂದಿ ಮತ್ತು ಇತರೆ ವಸ್ತು ಸಂಗ್ರಹಿಸಿ ಗುಜರಿ ಅಂಗಡಿಗೆ ವ್ಯಾಪಾರ ಮಾಡುವವರು ಬುಧವಾರದಂದು ಡಿಸಿ ಕಛೇರಿ ಆವರಣದಲ್ಲಿ ಪ್ರತಿಭಟಿಸಿ ಎರಡನೇ ಬಾರಿಗೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.


ಇದೆ ವೇಳೆ ಇತರರು ಮಾಧ್ಯಮದೊಂದಿಗೆ ಸಯ್ಯಾದ್ ರೆಮನ್ ಮಾತನಾಡಿ, ನಾನು ಮತ್ತು ನಮ್ಮ ಗ್ರಾಮದ ಕಾಳ ಮತ್ತು ಇತರರು ನಮ್ಮ ವೃತ್ತಿಯಿಂದ ಗುಜರಿ ವ್ಯಾಪಾರವನ್ನು ಸುಮಾರು 10 ವರ್ಷದಿಂದ ಮಾಡುತ್ತಿದ್ದು, ಇದೇ ವೃತ್ತಿಯಿಂದ ನಮ್ಮ ಕುಟುಂಬದ ನಿರ್ವಹಣೆ ಮತ್ತು ಮಕ್ಕಳ ವಿದ್ಯಾಭ್ಯಾಸವನ್ನು ಮಾಡುತ್ತಿರುತ್ತೇವೆ. ನಮ್ಮ ಗ್ರಾಮದಲ್ಲಿ ವಾಸ ಮಾಡುತ್ತಿರುವ ನಾವುಗಳು ಪರಿಶಿಷ್ಟ ಪಂಗಡಕ್ಕೆ ಸೇರಿದ ಜನಾಂಗವಾಗಿದ್ದು, ಆರ್ಥಿಕವಾಗಿ ಹಿಂದುಳಿದಿರುತ್ತೇವೆ. ಹೀಗೆ ವೃತ್ತಿಯನ್ನು ಕಷ್ಟುಪಟ್ಟು ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಕರ್ನಾಟಕದ ಯಶವಂತಪುರ ಹಾಗೂ ಹಾಸನದ ರೈಲ್ವೆ ಪೊಲೀಸರು ರೈಲಿಗೆ ಸಂಬAಧಿಸಿದ ಉಪಕರಣಗಳನ್ನು ಖರೀದಿ ಮಾಡಿರುತ್ತೀರಾ ಎಂದು ಪದೇ ಪದೇ ಕಿರುಕುಳ ನೀಡಿ ನಮ್ಮಿಂದ ಹಣ ಪಡೆಯುತ್ತಿರುತ್ತಾರೆ. ಇದೇ ರೀತಿ ಇಲ್ಲಿನ ಪೊಲೀಸರು ಹಣ ವಸೂಲಿ ಮಾಡುತ್ತಿದ್ದು, ನಾವು ದುಡಿದಂತಹ ಹಣವನ್ನೆಲ್ಲಾ ಈ ಮೇಲ್ಕಂಡ ಪೊಲೀಸರಿಗೆ ಕೊಡುತ್ತಿದ್ದು, ಬಡ್ಡಿ ಸಾಲ ಮಾಡಿ ಹಣ ನೀಡಿರುತ್ತೇವೆ ಎಂದರು. ಹೀಗಿರುವಲ್ಲಿ ಕಳೆದ ಎರಡು ದಿನಗಳ ಹಿಂದೆ ಇದೇ ಕರ್ನಾಟಕ ರೈಲ್ವೆ ಪೊಲೀಸರಾದ ಯಶವಂತಪುರ ಹಾಗೂ ಹಾಸನದ ರೈಲ್ವೆ ಪೊಲೀಸರಾದ ಖಲೀಲ್, ಜಾವೀದ್, ಎ.ಎಸ್.ಐ ರವಿ ಹಾಗೂ ಇತರರ ನಮ್ಮ ಗ್ರಾಮದ ಹುಡುಗರನ್ನು ಕರೆದುಕೊಂಡು ರೈಲ್ವೆ ಮಾಲನ್ನು ತೆಗೆದುಕೊಂಡಿದ್ದೀರಾ ಎಂದು ಕಿರುಕುಳ ನೀಡುತ್ತಿದ್ದು, ಇವರ ಕಿರುಕುಳದಿಂದ ನಮ್ಮ ಗ್ರಾಮದ ಕಾಳ ರವರು ಆತ್ಮಹತ್ಯೆ ಮಾಡಿಕೊಳ್ಳಲು ಬೆಂಕಿ ಹಚ್ಚಿಕೊಂಡು ಗಾಯಗೊಂಡು ಈಗ ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆ. ಅಲ್ಲದೆ ಅರ್ಮಾನ್ ಬಿನ್ ಸಮೀರ್ ಪಾಷಾ ಇವರನ್ನು ಸಹ 4 ದಿನಗಳ ಹಿಂದೆ ಕರೆದುಕೊಂಡು ಅವರಿಗೆ ಕಿರುಕುಳ ನೀಡುತ್ತಿದ್ದು, ಅವರ ಬಗ್ಗೆ ಮಾಹಿತಿ ಕೇಳಿದರೆ ನನಗೆ ಗೊತ್ತಿಲ್ಲ ಎಂದು ತಿಳಿಸುತ್ತಿರುತ್ತಾರೆ. ಪ್ರತಿ ಬಾರಿ ರೈಲ್ವೆ ಪೋಲೀಸರು ಪರಿಶಿಷ್ಟ ಪಂಗಡದವರಾದ ನಮ್ಮಗಳ ಮೇಲೆ ದೌರ್ಜನ್ಯ ನಡೆಸುತ್ತಿರುತ್ತಾರೆ ಎಂದು ಗಂಭೀರವಾಗಿ ಆರೋಪಿಸಿದರು. ಕಿರುಕುಳ ನೀಡುತ್ತಿರುವ ಇವರ ವಿರುದ್ದ ಕ್ರಮ ಕೈಗೊಂಡು ನಮಗೆ ಜೀವನ ನಡೆಸಲು ಅವಕಾಶ ಮಾಡಿಕೊಡಬೇಕಾಗಿ ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಆಲೂರು ತಾಲೂಕು ಹುಣುಸೆವಳ್ಳಿ ಗ್ರಾಮದ ನವಾಜ್, ತೋಫಿಕ್ ಪಾಷಾ, ರಾಜು, ವಸಂತ, ಆಶಾ, ಗೀತಾ, ಶಾಂತಿ, ಲೀಲಾ, ರತ್ನ, ಆರತಿ, ಮಂಜೂಳಾ, ಪ್ರಿಯಾ, ವಿಜಯ, ಧನುಷ್, ಗಣೇಶ್, ಕಾನೇಶ್, ಸುಮಿತ್ರಾ, ಅಭಿಮಾನ್, ಪವನ್, ತಾರಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಿಷಯಗಳು: #karnataka #news #peepal
ರರಮೇಶ್‌ ಹಾಸನ್‌

ರಮೇಶ್‌ ಹಾಸನ್‌

Peepal Media · ರಾಜ್ಯ ವಿಭಾಗ

ಸಂಬಂಧಿತ ಸುದ್ದಿಗಳು