ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
●ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮ●ಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?●ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್●ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರ●ಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆ●ಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರ●ರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈ●ಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌●ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿ●ಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕ●ಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶ●ಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್●ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆ●ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪ●ಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹ●ದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟ●ಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯ●ನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌●300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿ●ತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ಇಡೀ ವಿಶ್ವ ಈ ಜಿಯೋನಿಸ್ಟರ ಕ್ರೌರ್ಯದ ವಿರುದ್ಧ ನಿಲ್ಲಬೇಕಿದೆ: ಎಸ್‌ಡಿಪಿಐ

PPeepal Media Desk

Peepal Media Desk • ರಾಜ್ಯ

• 2 ನಿಮಿಷದ ಓದು

ಇಡೀ ವಿಶ್ವ ಈ ಜಿಯೋನಿಸ್ಟರ ಕ್ರೌರ್ಯದ ವಿರುದ್ಧ ನಿಲ್ಲಬೇಕಿದೆ: ಎಸ್‌ಡಿಪಿಐ

ಬೆಂಗಳೂರು: ಪ್ಯಾಲೇಸ್ತೀನನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಇಸ್ರೇಲ್ ಕಳೆದ 70 ವರ್ಷಗಳಿಂದ ಪ್ಯಾಲೇಸ್ತೀನಿಯರ ಶೋಷಣೆಯಲ್ಲಿ ತೊಡಗಿದೆ. ಈಗ ಅದು ಪ್ಯಾಲೇಸ್ತೀನಿಯರನ್ನು ಶಾಶ್ವತವಾಗಿ ಇಲ್ಲವಾಗಿಸುವ ಉದ್ದೇಶದಿಂದ ಬರ್ಬರ ನರಮೇಧದಲ್ಲಿ ತೊಡಗಿದೆ. ಇದಕ್ಕೆ ಜಿಯೋನಿಸ್ಟ್ ಇಸ್ರೇಲ್ ಈಗ ನಡೆಯುತ್ತಿರುವ ಸಂಘರ್ಷದಲ್ಲಿ ವೈಟ್ ಪಾಸ್ಫರ್ ರಾಸಾಯನಿಕ ಅಸ್ತ್ರ ಬಳಸುತ್ತಿರುವುದು ಮತ್ತು ಆಸ್ಪತ್ರೆಗಳ ಮೇಲೆ ದಾಳಿ ಮಾಡಿ ಸುಮಾರು 800 ಮಂದಿಯನ್ನು ಕೊಂದಿರುವುದು ಪುಷ್ಟಿ ನೀಡುತ್ತವೆ. ಈ ಕ್ರೌರ್ಯದ ವಿರುದ್ಧ ಭಾರತ ಸೇರಿದಂತೆ ಇಡೀ ವಿಶ್ವ ನಿಲ್ಲಬೇಕಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಹಿಟ್ಲರನಿಂದ ಶೋಷಣೆಗೆ ಒಳಗಾಗಿ ನೆಲೆ ಕಂಡುಕೊಳ್ಳಲು ಹೆಣಗಾಡುತ್ತಾ ಅಮೆರಿಕ ಜೊತೆಗೂಡಿ ಕುತಂತ್ರದಿಂದ ಪ್ಯಾಲೆಸ್ತೀನಿಯರ ಭೂಮಿಯನ್ನು ಇಸ್ರೇಲ್ ಕಸಿದುಕೊಂಡಿತು. ಇಂದು ಪ್ಯಾಲೇಸ್ತೀನಿಯರು ತಮ್ಮದೇ ನೆಲದಲ್ಲಿ ನಿರ್ಗತಿಕರಾಗಿ ಅತಿಕ್ರಮಣಕಾರರ ವಿರುದ್ಧ ತಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡಬೇಕಾದ ಅನಿವಾರ್ಯತೆ ಎದುರಾಗಿದೆ. 1948 ರಿಂದ ಸುಮಾರು ಏಳು ದಶಕಗಳಿಂದ ಇಸ್ರೇಲಿನ ಅತಿಕ್ರಮಣ, ದೌರ್ಜನ್ಯ, ಹಿಂಸಾಚಾರದ ವಿರುದ್ಧ ತಮ್ಮ ಜೀವಗಳನ್ನೇ ಪಣಕ್ಕಿಟ್ಟು ಹೋರಾಡುತ್ತಿರುವ ಪ್ಯಾಲೆಸ್ತೀನಿಯರ ಸ್ವಾತಂತ್ರ ಹೋರಾಟವನ್ನು ಎಸ್‌ಡಿಪಿಐ ಪಕ್ಷ ಗೌರವಿಸುತ್ತದೆ ಎಂದು ಎಸ್‌ಡಿಪಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಹಿಟ್ಲರ ಶೋಷಣೆ ಮತ್ತು ಹತ್ಯಾಕಾಂಡಗಳಿಂದ ತತ್ತರಿಸಿಹೋಗಿ ದಿಕ್ಕು ತೋಚದಂತಾಗಿದ್ದ ಜ್ಯೂಗಳಿಗೆ ಮಾನವೀಯತೆಯ ಆಧಾರದ ಮೇಲೆ ಪುನರ್ವಸತಿ ಕಲ್ಪಸಿಕೊಡುವ ಮನಸ್ಸು ಮಾಡಿದ್ದು ಪ್ಯಾಲೆಸ್ತೀನಿಯರು ಮಾತ್ರ. ಉಳಿದಂತೆ ಜಗತ್ತಿನ ಬೇರೆ ಯಾವ ದೇಶವೂ ಅವರ ನೆರವಿಗೆ ಅಂದು ನಿಂತಿರಲಿಲ್ಲ. ಆದರೆ ಇಸ್ರೇಲಿಗರು ಆಶ್ರಯ ಕೊಟ್ಟವರಿಗೆ ದ್ರೋಹ ಬಗೆದು ಕೆಲವೇ ವರ್ಷಗಳಲ್ಲಿ ಪ್ಯಾಲೆಸೀನಿಯರಿಂದ ಅವರ ದೇಶವನ್ನೇ ಕಸಿದುಕೊಂಡರು. ಕೊನೆಗೆ ಅವರಿಗೆ ವೆಸ್ಟ್ ಬ್ಯಾಂಕ್ ಮತ್ತು ಗಾಝಾ ಎಂಬ ಎರಡು ತುಂಡು ಭೂಮಿ, ಅದೂ ಒಂದರಿಂದ ಒಂದು ನೂರಾರು ಕಿಲೋ ಮೀಟರ್ ದೂರ, ನಡುವೆ ಇಸ್ರೇಲ್ ಪ್ರದೇಶ ಇರುವಂತೆ ನೋಡಿಕೊಂಡು ಪ್ಯಾಲೆಸ್ತೀನಿಗರಿಗೆ ನೀಡಿದರು. ಇಂದು ಗಾಝಾ ಪಟ್ಟಿ ಜಗತ್ತಿನ ಅತಿ ಹೆಚ್ಚು ಜನನಿಭಿಡ ಪ್ರದೇಶಗಳಲ್ಲಿ ಒಂದಾಗಿದ್ದು, ಒಂದು ಚದರ ಕಿಲೋ ಮೀಟರ್ ಪ್ರದೇಶದಲ್ಲಿ ಸುಮಾರು 5500 ಜನ ಅಲ್ಲಿ ವಾಸ ಮಾಡಬೇಕಾದಷ್ಟು ಇಕ್ಕಟ್ಟಿನ ಪ್ರದೇಶವನ್ನು ಅವರ ಪಾಲಿಗೆ ನೀಡಲಾಗಿದೆ. ಇದು ಮನುಕುಲದ ಇತಿಹಾಸದಲ್ಲೇ ಅತ್ಯಂತ ದೊಡ್ಡ ದ್ರೋಹ ಎಂದು ಎಸ್‌ಡಿಪಿಐ ತಿಳಿಸಿದೆ.

ಮೊದಲೇ ನಲುಗಿಹೋಗಿರುವ ಪ್ಯಾಲೇಸ್ತೀನಿಯರ ವಿರುದ್ಧ ಜಿಯೋನಿಸ್ಟ್ ಇಸ್ರೇಲ್ ಈಗ ಅತಿದೊಡ್ಡ ದಾಳಿ ಮಾಡುತ್ತಿದೆ. ಅಲ್ಲಿನ ಜನರಿಗೆ ನೀರು, ಆಹಾರ, ವಿದ್ಯುತ್, ಅನಿಲ ಪೂರೈಕೆ ಸ್ಥಗಿತಗೊಳಿಸಿ ನರಳಿಸಿ ಕೊಲ್ಲಲಾಗುತ್ತಿದೆ. ಇದನ್ನು ಜಗತ್ತು ತಡೆಯದೇ ಹೋದರೆ ಇದು ಜಗತ್ತಿನ ಅತಿ ದೊಡ್ಡ ಸೋಲಾಗಲಿದೆ. ಭಾರತದಂತಹ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ಇಂತಹ ನರಮೇಧವನ್ನು ಇಲ್ಲಿ ಸರ್ಕಾರ ನಡೆಸುತ್ತಿರುವ ಪಕ್ಷದ ಮುಸ್ಲಿಂ ವಿರೋಧಿ ಮನಸ್ಥಿತಿಯ ಕಾರಣಕ್ಕೆ ಮೂಕಪ್ರೇಕ್ಷಕನಂತೆ ಕುಳಿತಿದ್ದರೆ ಇತಿಹಾಸ ಮೋದಿ ಸರ್ಕಾರವನ್ನು ಎಂದೂ ಕ್ಷಮಿಸುವುದಿಲ್ಲ. 1947 ರಿಂದ ಇಲ್ಲಿಯವರೆಗೆ, ನೆಹರೂ ಕಾಲದಿಂದ ವಾಜಪೇಯಿ ಅವರಾಧಿಯಾಗಿ ಮನಮೋಹನ್ ಸಿಂಗ್ ಅವರ ವರೆಗೆ ಭಾರತ ಪ್ಯಾಲೇಸ್ತೀನಿಯರ ಹಕ್ಕುಗಳ ಪರ ನಿಂತಿದೆ. ಈ ನೀತಿಯನ್ನು ಬಿಜೆಪಿ ತನ್ನ ವಯಕ್ತಿಕ ದ್ವೇಷದ ಕಾರಣಕ್ಕೆ ಬದಲಾಯಿಸಲು ಹೊರಟಿರುವುದು ದುರಂತ. ಮಾನವೀಯತೆಗೆ ಮಾಡುವ ದ್ರೋಹವಾಗುತ್ತದೆ ಎಂದು ಎಸ್‌ಡಿಪಿಐ ಅಭಿಪ್ರಾಯಪಟ್ಟಿದೆ.

ಪ್ಯಾಲೇಸ್ತೀನಿಯರ ಈ ನರಮೇಧವನ್ನು ತಡೆಯಲು ಭಾರತ ಸೇರಿದಂತೆ ಇಡೀ ಜಗತ್ತು ಜಿಯೋನಿಸ್ಟ್ ಇಸ್ರೇಲಿಗರ ಈ ಆಕ್ರಮಣದ ವಿರುದ್ಧ ನಿಲ್ಲಬೇಕು ಎಂದು ನಾವು ಈ ಮೂಲಕ ಭಾರತ ಸರ್ಕಾರ ಹಾಗೂ ಜಗತ್ತಿನ ಎಲ್ಲ ದೇಶಗಳಲ್ಲಿ ವಿನಂತಿಸುತ್ತೇವೆ ಎಂದು ಎಸ್‌ಡಿಪಿಐ ತನ್ನ ಪ್ರಕಟಣೆಯಲ್ಲಿ ಆಗ್ರಹಿಸಿದೆ.

PPeepal Media Desk

Peepal Media Desk

Peepal Media · ರಾಜ್ಯ ವಿಭಾಗ

ಸಂಬಂಧಿತ ಸುದ್ದಿಗಳು