ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
●ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮ●ಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?●ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್●ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರ●ಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆ●ಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರ●ರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈ●ಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌●ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿ●ಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕ●ಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶ●ಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್●ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆ●ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪ●ಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹ●ದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟ●ಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯ●ನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌●300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿ●ತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ರಾಜಕಾರಣಕ್ಕೆ ಬಂದ ಸೂರಜ್ ರೇವಣ್ಣಗೆ ಬುದ್ದಿ ಭ್ರಮಣೆ ಆಗಿದೆ – ಕಾಂಗ್ರೇಸ್‌ ಮಾಧ್ಯಮ ವಕ್ತಾರ ದೇವರಾಜೇಗೌಡ

ರರಮೇಶ್‌ ಹಾಸನ್‌

ರಮೇಶ್‌ ಹಾಸನ್‌ • ರಾಜ್ಯ

• 2 ನಿಮಿಷದ ಓದು

ರಾಜಕಾರಣಕ್ಕೆ ಬಂದ ಸೂರಜ್ ರೇವಣ್ಣಗೆ ಬುದ್ದಿ ಭ್ರಮಣೆ ಆಗಿದೆ – ಕಾಂಗ್ರೇಸ್‌ ಮಾಧ್ಯಮ ವಕ್ತಾರ ದೇವರಾಜೇಗೌಡ

ಹಾಸನ: ಮೂರು ವರ್ಷಗಳ ಹಿಂದೆ ಉದ್ಬವ ಮೂರ್ತಿಯಾಗಿ ಕುಟುಂಬದ ಹಿನ್ನಲೆಯಿಂದ ರಾಜಕಾರಣಕ್ಕೆ ಬಂದವರು ಮೊದಲು ಹಿಂದೆ ನಡೆದ ಪ್ರಕರಣವನ್ನು ಸ್ಪಷ್ಟ ಮಾಹಿತಿ ಪಡೆದು ಮಾತನಾಡಬೇಕಾಗಿತ್ತು. ಈಗ ಮಾತನಾಡಿರುವ ಎಂ.ಎಲ್.ಸಿ. ಸೂರಜ್ ರೇವಣ್ಣಗೆ ಬುದ್ದಿ ಭ್ರಮಣೆ ಆಗಿದೆ ಎಂದು ಕಾಂಗ್ರೆಸ್ ಜಿಲ್ಲಾ ಮಾಧ್ಯಮ ವಕ್ತಾರ ದೇವರಾಜೇಗೌಡ ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಕಳೆದ ಮೂರು ವರ್ಷಗಳ ಹಿಂದೆಯಷ್ಟೆ ರಾಜಕೀಯಕ್ಕೆ ಉದ್ಭವ ಮೂರ್ತಿಯಾಗಿ ಕಾಲಿಟ್ಟಿದ್ದಾರೆ. ಎಂ.ಎಲ್.ಸಿ. ಅನುಧಾನ ಬಿಟ್ಟು ವಯಕ್ತಿಕ ವಾಗಿ ಸರಕಾರದಿಂದ ಎಷ್ಟು ಅನುಧಾನ ತಂದಿದ್ದಾರೆ. ಈ ಸಂದರ್ಭದಲ್ಲಿ ಆಸಿಡ್ ದಾಳಿ ಪ್ರಕರಣವನ್ನು ಪ್ರಸ್ತಾಪಿಸುವ ಅಗತ್ಯ ಇರಲಿಲ್ಲ ಪ್ರಕರಣ ಸಂಬAಧ ಆರೋಪಿಗೆ ಶಿಕ್ಷೆಯಾಗಿದ್ದು ಮುಕ್ತಾಯಗೊಂಡಿರುವ ವಿಷಯವನ್ನು ಪ್ರಸ್ತಾಪಿಸುವ ಅವಶ್ಯಕತೆ ಇದೆ ಎಂದು ಹೇಳಿದರು. 2001 ಫೆಬ್ರವರಿ 21 ರಂದು ಸೂರಜ್ ರೇವಣ್ಣ ಅವರಿಗೆ ಬುದ್ಧಿ ಭ್ರಮಣೆಯಾಗಿದೆ.

ದೇವೇಗೌಡರು ಹಾಗೂ ಅವರ ಸಹೋದರ ಬಸವೇಗೌಡರ ನಡುವಿನ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆಸಿಡ್ ದಾಳಿ ಪ್ರಕರಣ ನಡೆದಿದೆ ಬಸವೇಗೌಡರ ಮಗ ಜ್ಞಾನೇಶ್ ಪರ ನ್ಯಾಯಾಲಯದಲ್ಲಿ ನಾನೇ ವಕಾಲತ್ತು ಮಾಡಿದ್ದೇನೆ. ಈ ಬಗ್ಗೆ ಸ್ಪಷ್ಟ ಮಾಹಿತಿ ನನ್ನ ಬಳಿಯಿದ್ದು, ಇದರಲ್ಲಿ ಸಂಸದ ಶ್ರೇಯಸ್ ಪಟೇಲ್ ಅವರ ತಾತಾ ಪುಟ್ಟಸ್ವಾಮಿಗೌಡರ ಪಾತ್ರ ಇಲ್ಲವೇ ಇಲ್ಲ ಎಂದು ಸ್ಪಷ್ಟಪಡಿಸಿದರು. ಆಸಿಡ್ ದಾಳಿ ರಾಜಕೀಯ ಪ್ರೇರಿತವಲ್ಲ ಕೇವಲ ಕುಟುಂಬದ ಕಲಹದಿಂದ ಆಗಿದೆ ಎಂದು ಹೇಳಿದ ಅವರು 2001ರಲ್ಲಿ ದೇವೇಗೌಡರ ಪತ್ನಿ ಹಾಗೂ ಭವಾನಿ ರೇವಣ್ಣ ಅವರು ದೇವಾಲಯದ ಪೂಜೆಯಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು. ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿ ಎ1 ಆರೋಪಿಗೆ ಶಿಕ್ಷೆಯು ಕೂಡ ಆಗಿದೆ.

ಆ ಸಂದರ್ಭದಲ್ಲಿ ಬಸವೇಗೌಡರ ಕುಟುಂಬ ಪುಟ್ಟಸ್ವಾಮಿಗೌಡರ ಸಹಾಯವನ್ನು ಕೇಳಿದ್ದರು ಅಷ್ಟೇ ಈ ಘಟನೆ ನಡೆದಾಗ ಸೂರಜ್ ರೇವಣ್ಣ ಅವರಿಗೆ ಸುಮಾರು 12 ವರ್ಷ ಪ್ರಾಯ ಇರಬಹುದು, ಆಸಿಡ್ ಪ್ರಕರಣದಲ್ಲಿ ಬೇರೆಯವರ ಮೇಲೆ ಗೂಬೆಕೂರಿಸುವ ಕೆಲಸವನ್ನು ಸೂರಜ್ ರೇವಣ್ಣ ಮಾಡಬಾರದು ಹಾಗೂ ಪ್ರಕರಣ ಈಗಾಗಲೇ ನ್ಯಾಯಾಲಯದಿಂದ ತಿರ್ಪು ಹೊರಬಿದ್ದಿದ್ದು, ಆರೋಪಿಯು ಶಿಕ್ಷೆಯನ್ನು ಅನುಭವಿಸಿ ಆಗಿದೆ. ಇದೀಗ ತನಿಖೆಗೆ ವಹಿಸಬೇಕು ಎಂಬುದು ಮೂರ್ಖತನವಾಗಿದೆ ಎಂದು ಟೀಕಿಸಿದರು.

ಪಿಎಂ, ಸಿಎಮ್, ಸಚಿವರಾದ ಕುಟುಂಬಕ್ಕೆ ಆನೆ ಕಾರಿಡಾರ್ ನೆನಪಾಗಲಿಲ್ಲವೇ! ಕೇವಲ ಲೆಟರ್ ಹೆಡ್ ನಲ್ಲಿ ಕೇಂದ್ರ ಸಚಿವರಿಗೆ ಮನವಿ ಪತ್ರ ನೀಡಿದರೆ ಸಾಲದು ಎಂದು ಸೂರಜ್ ರೇವಣ್ಣ ಟೀಕೆಸಿದ್ದಾರೆ. ಬಾರಿ ಸಚಿವರಾಗಿ ಅಧಿಕಾರ ನಡೆಸಿರುವ ದೇವೇಗೌಡರ ಕುಟುಂಬದಿಂದ ಜಿಲ್ಲೆಯಲ್ಲಿ ಆನೆ ಕಾರಿಡಾರ್ ಮಾಡಲು ಏಕೆ ಆಗಲಿಲ್ಲ. ಆ ಸಂದರ್ಭದಲ್ಲಿ ಅವರಿಗೆ ಇಚ್ಛಾಶಕ್ತಿ ಇರಲಿಲ್ಲವೇ ಎಂದು ಪ್ರಶ್ನಿಸಿದರು.ಯಾರೇ ಒಬ್ಬ ಜನಪ್ರತಿನಿಧಿ ಸಾರ್ವಜನಿಕವಾಗಿ ಮಾತನಾಡುವ ಮುನ್ನ ಹತ್ತಾರು ಬಾರಿ ಯೋಚನೆ ಮಾಡಬೇಕು. ಸಾರ್ವಜನಿಕ ವೇದಿಕೆಯಲ್ಲಿ ಎಂಎಲ್ಸಿ ಸೂರಜ್ ರೇವಣ್ಣ ಅವರು ಅವರ ಕುಟುಂಬದವರೊಂದಿಗೆ ಮಾತನಾಡಿ, ಹಿಂದೆ ನಡೆದಿರುವ ಪ್ರಕರಣ ಕುರಿತು ಸ್ಪಷ್ಟ ಮಾಹಿತಿಯನ್ನು ಪಡೆದು ಮಾತನಾಡುವ ಬುದ್ಧಿ ಬೇಕಿತ್ತು ಎಂದರು.

ಹೆಚ್.ಡಿ. ಕುಮಾರಸ್ವಾಮಿ ಅವರೇ ಪೆನ್ ಡ್ರೈವ್ ಹಂಚಿರಬಹುದು!? ಪೆನ್ ಡ್ರೆöÊವ್ ಹಂಚುವ ಮೂಲಕ ಶ್ರೇಯಸ್ ಪಟೇಲ್ ಸಂಸದರಾದರು ಎಂಬ ಸೂರಜ್ ರೇವಣ್ಣ ಆರೋಪ ಸತ್ಯಕ್ಕೆ ದೂರವಾದದ್ದು, ಪೆನ್ ಡ್ರೈವ್ ಅನ್ನು ನಿಮ್ಮ ಕುಟುಂಬ ಸದಸ್ಯರೇ ಹಂಚಿರಬಹುದು ಎಂದು ಅನುಮಾನಿಸಿದರು.ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ಆರಿಫ್, ಚಂದ್ರಶೇಖರ್, ವಕೀಲ ಸುರೇಶ್, ತುಳಸಿಧರ, ದಿನೇಶ್ ಕುಮಾರ್ ಇತರರು ಉಪಸ್ಥಿತರಿದ್ದರು

ವಿಷಯಗಳು: #india #kannada #karnataka #peepal #politics
ರರಮೇಶ್‌ ಹಾಸನ್‌

ರಮೇಶ್‌ ಹಾಸನ್‌

Peepal Media · ರಾಜ್ಯ ವಿಭಾಗ

ಸಂಬಂಧಿತ ಸುದ್ದಿಗಳು