ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
●ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮ●ಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?●ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್●ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರ●ಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆ●ಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರ●ರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈ●ಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌●ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿ●ಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕ●ಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶ●ಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್●ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆ●ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪ●ಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹ●ದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟ●ಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯ●ನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌●300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿ●ತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ಹಾಸನಾಂಬೆ ದರ್ಶನಕ್ಕಿಂದು ವಿಧ್ಯುಕ್ತ ತೆರೆ, ಭಕ್ತರ ಸಂಖ್ಯೆ ಎಷ್ಟು ? ಕಲೆಕ್ಷನ್‌ ಎಷ್ಟು ?

ರರಮೇಶ್‌ ಹಾಸನ್‌

ರಮೇಶ್‌ ಹಾಸನ್‌ • ರಾಜ್ಯ

• 1 ನಿಮಿಷದ ಓದು

ಹಾಸನಾಂಬೆ ದರ್ಶನಕ್ಕಿಂದು ವಿಧ್ಯುಕ್ತ ತೆರೆ, ಭಕ್ತರ ಸಂಖ್ಯೆ ಎಷ್ಟು ? ಕಲೆಕ್ಷನ್‌ ಎಷ್ಟು ?

ಹಾಸನ : ಹಾಸನಾಂಬೆ (Hasanamba) ದೇಗುಲ ಗರ್ಭಗುಡಿ ಮುಚ್ಚಲು ಕ್ಷಣಗಣನೆ ಶುರುವಾಗಿದೆ. 13ನೇ ದಿನವಾದ ಇಂದು ಕೂಡ ಸಾವಿರಾರು ಜನ ಮಳೆ ನಡುವೆ ಕಿಲೋ ಮೀಟರ್​ಗಟ್ಟಲೇ​ ಕ್ಯೂನಲ್ಲಿ ನಿಂತು ಶಕ್ತಿದೇವತೆ ದರ್ಶನ ಪಡೆದಿದ್ದಾರೆ.

ಕೊನೆ ದಿನವಾದ ಇಂದೂ ಕೂಡ ಸ್ಯಾಂಡಲ್​​ವುಡ್ ಮಂದಿ, ರಾಜಕಾರಣಿಗಳು ಸೇರಿ ಗಣ್ಯರ ದಂಡೇ ಹರಿದು ಬಂದಿತ್ತು. ನಟ ಧ್ರುವಸರ್ಜಾ, ನಟಿ ಮಿಲನಾ ನಾಗರಾಜ್​, ಸಚಿವ ರಾಮಲಿಂಗಾರೆಡ್ಡಿ, ಅವಧೂತ ಅರ್ಜುನ್ ಗುರೂಜಿ ದರ್ಶನ ಪಡೆದು ಪುನೀತರಾಗಿದ್ದಾರೆ.

ಹಾಸನಾಂಬೆ ಹುಂಡಿ ತುಂಬಿಸಿದ ಭಕ್ತಗಣ

ಈ ಬಾರಿ ಬರೋಬ್ಬರಿ 26 ಲಕ್ಷ ಜನ ಹಾಸನಾಂಬೆ ದರ್ಶನ ಪಡೆದಿದ್ದಾರೆ. ಟಿಕೆಟ್ ಮಾರಾಟದಿಂದಲೇ 22 ಕೋಟಿ ರೂಪಾಯಿ ಸಂಗ್ರಹವಾಗಿದೆ. ಕಳೆದ ವರ್ಷ 17 ಲಕ್ಷ 46 ಸಾವಿರ ಜನ ದೇವಿ ದರ್ಶನ ಪಡೆದಿದ್ರು. ಕಳೆದ ವರ್ಷ ಕೇವಲ 9 ಲಕ್ಷ 68 ಸಾವಿರ ರೂಪಾಯಿ ಸಂಗ್ರಹವಾಗಿತ್ತು.ಒಟ್ಟು 13 ದಿನ ಹಾಸನಾಂಬಾ ಜಾತ್ರಾ ಮಹೋತ್ಸವಕ್ಕೆ ತೆರೆ ಬಿದ್ದಿದ್ದು, ಇಂದು ಸಂಜೆ 7ರಿಂದಲೇ ಸಾರ್ವಜನಿಕ ದರ್ಶನ ಬಂದ್ ಆಗಿದೆ. ಗರ್ಭಗುಡಿ ಮುಚ್ಚಿ ಸಂಜೆ 7ರಿಂದ ತಾಯಿಗೆ ವಿಶೇಷ ಅಲಂಕಾರ, ಪೂಜೆ ಮಾಡಲಾಗ್ತಿದೆ. ಮತ್ತೆ ಮಧ್ಯರಾತ್ರಿ 12ಕ್ಕೆ ದೇಗುಲ ಓಪನ್ ಮಾಡಲಾಗುತ್ತೆ. ಸ್ಥಳೀಯರಿಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗುತ್ತೆ. ಸಿದ್ದೇಶ್ವರ ಕೊಂಡ ಹಾಯುವ ಕಾರ್ಯಕ್ರಮ ಇರುತ್ತೆ. ದೀಪಹಚ್ಚಿ ಗರ್ಭಗುಡಿ ಬಂದ್ ಮಾಡಲಾಗುತ್ತೆ. ನಾಳೆ ಮಧ್ಯಾಹ್ನ 2ಕ್ಕೆ ಅಭಿಜಿನ್ ಮುಹೂರ್ತದಲ್ಲಿ ದೇಗುಲ ಬಂದ್ ಆಗಲಿದೆ. ಮುಂದಿನ ವರ್ಷದವರೆಗೂ ಹಚ್ಚಿದ ದೀಪ, ಅಲಂಕಾರದ ಹೂವು ಇಡ್ತಾರೆ. ಆದ್ರೆ ದೀಪ ನಂದುವುದಿಲ್ಕ, ಹೂವು ಬಾಡುವುದಿಲ್ಲ.

ಯಾವ ದಿನ ಎಷ್ಟು ಜನರಿಂದ ದರ್ಶನ?

ಯಾವ ದಿನ ಎಷ್ಟು ಜನರು ದರ್ಶನ ಪಡೆದಿದ್ದಾರೆ ಅಂತ ನೋಡೋದಾದ್ರೆ,

  • ಅಕ್ಟೋಬರ್ 10 ರಂದು 58 ಸಾವಿರ ಜನ
  • ಅಕ್ಟೋಬರ್ 11 ರಂದು 2 ಲಕ್ಷದ 8 ಸಾವಿರ ಜನ
  • ಅಕ್ಟೋಬರ್ 12 ರಂದು 1 ಲಕ್ಷದ 45 ಸಾವಿರ ಜನ
  • ಅಕ್ಟೋಬರ್ 13 ರಂದು 2 ಲಕ್ಷದ 29 ಸಾವಿರ ಜನ
  • ಅಕ್ಟೋಬರ್ 14 ರಂದು 2 ಲಕ್ಷದ 44 ಸಾವಿರ ಜನ
  • ಅಕ್ಟೋಬರ್ 15 ರಂದು 2 ಲಕ್ಷದ 47 ಸಾವಿರ ಜನ
  • ಅಕ್ಟೋಬರ್ 16 ರಂದು 2 ಲಕ್ಷದ 58 ಸಾವಿರ ಜನ
  • ಅಕ್ಟೋಬರ್ 17 ರಂದು 3 ಲಕ್ಷದ 62 ಸಾವಿರ ಜನ
  • ಅಕ್ಟೋಬರ್ 18 ರಂದು 2 ಲಕ್ಷದ 17 ಸಾವಿರ ಜನ
  • ಅಕ್ಟೋಬರ್ 19 ರಂದು 1 ಲಕ್ಷದ 27 ಸಾವಿರ ಜನ
  • ಅಕ್ಟೋಬರ್ 20 ರಂದು 2 ಲಕ್ಷದ 2 ಸಾವಿರ ಜನ
  • ಅಕ್ಟೋಬರ್ 21 ರಂದು ಒಂದೂವರೆ ಲಕ್ಷ ಜನ
  • ಅಕ್ಟೋಬರ್ 22 ರಂದು 1 ಲಕ್ಷದ 60 ಸಾವಿರ ಜನ ಹಾಸನಾಂಬೆ ದರ್ಶನ ಪಡೆದಿದ್ದಾರೆ.

ವಿಷಯಗಳು: #news #peepalmedia
ರರಮೇಶ್‌ ಹಾಸನ್‌

ರಮೇಶ್‌ ಹಾಸನ್‌

Peepal Media · ರಾಜ್ಯ ವಿಭಾಗ

ಸಂಬಂಧಿತ ಸುದ್ದಿಗಳು