Monday, June 17, 2024

ಸತ್ಯ | ನ್ಯಾಯ |ಧರ್ಮ

ಕರುನಾಡ ರಾಜಕುಮಾರನ ಕನಸು ನನಸಾಗಲಿ : ಡಿಕೆಶಿ

ಬೆಂಗಳೂರು : ಪುನೀತ್‌ ರಾಜ್‌ಕುಮಾರ್‌ ಅವರ ಪೂರ್ವಭಾವಿ ಸಭೆಯಾಗಿ ಆಯೋಜಿಸಲಾಗಿದ್ದ ʼಪುನೀತ ಪರ್ವʼ ಕಾರ್ಯಕ್ರಮದ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಾಡಿನಾದ್ಯಂತ ಎಲ್ಲರ ಮನದಲ್ಲಿ ಚಿರಿಸ್ಥಾನ ಹೊಂದಿರುವ ಪುನೀತ್‌ ರಾಜ್‌ಕುಮಾರ್‌ ಕೊನೆಯ ಅಭಿನಯ ಮಾಡಿರುವ  ಅವರ ಕನಸಿನ ಚಿತ್ರ ಗಂಧದ ಗುಡಿ ಸಿನೆಮಾದ ಪ್ರೀ ರಿಲೀಸ್‌ ಕಾರ್ಯಕ್ರಮ ಶುಕ್ರವಾರ ಸಂಜೆ ನಡೆದಿದೆ . ಕಾರ್ಯಕ್ರಮಕ್ಕೆ ರಾಜ್ಯಾದ್ಯಂತ ಅಭಿಮಾನಿಗಳು ಆಗಿಮಿಸಿದ್ದು ಗಂಧದ ಗುಡಿ ಚಿತ್ರದ ಬಿಡುಗಡೆಗಾಗಿ ಅಪ್ಪು ಅಭಿಮಾನಿಗಳು ಕಾದು ಕುಳಿತಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಡಿ.ಕೆ.ಶಿವಕುಮಾರ್‌, ʼಸಿನಿಮಾ ಒಂದು ಸಾಮಾಜಿಕ ಜವಾಬ್ದಾರಿ ಎಂದು ನಂಬಿದ್ದವರು ನಮ್ಮ ಪ್ರೀತಿಯ ಶ್ರೀ ಪುನೀತ್ ರಾಜ್‍ಕುಮಾರ್. ಅವರ ಕನಸಿನ ಗಂಧದಗುಡಿ ಸಾಕ್ಷ್ಯಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಅಭಿಮಾನಿಗಳು ಸಾಗರದಂತೆ ಹರಿದುಬಂದಿದ್ದಾರೆ. ತೆರೆಗೆ ಬರಲು ಸಿದ್ಧವಾಗಿರುವ ಅಪ್ಪು ಅವರನ್ನು ನೋಡಲು ಕಾತುರನಾಗಿದ್ದೇನೆ. ಕರುನಾಡ ರಾಜಕುಮಾರನ ಕನಸು ನನಸಾಗಲಿʼ ಎಂದು ಆಶಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು