ಕಾಶ್ಮೀರದ ಬುದ್ಗಾಮ್‌ನಲ್ಲಿ ಭಾರಿ ಅಪಘಾತ ಸಂಭವಿಸಿದೆ. ಶುಕ್ರವಾರ ಬಿಎಸ್ಎಫ್ ಯೋಧರು ತುಂಬಿದ್ದ ಬಸ್ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದಿದೆ. ಈ ಬಸ್‌ನಲ್ಲಿ ಒಟ್ಟು 36 ಸೈನಿಕರಿದ್ದು, ಈ ಪೈಕಿ 4 ಮಂದಿ ಸಾವನ್ನಪ್ಪಿದ್ದು, 28 ಮಂದಿ ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಾಹಿತಿಯ ಪ್ರಕಾರ, ಸೈನಿಕರಿಂದ ತುಂಬಿದ್ದ ಬಸ್ ಬುದ್ಗಾಮ್‌ನ ಬ್ರಿಲ್ ಗ್ರಾಮದ ಬಳಿ ತಲುಪಿದಾಗ, ಬಸ್ ಚಾಲಕ ಇದ್ದಕ್ಕಿದ್ದಂತೆ ಅದರ ಮೇಲೆ ನಿಯಂತ್ರಣ ಕಳೆದುಕೊಂಡನು. ಚಾಲಕ ಬಸ್ಸನ್ನು ನಿಯಂತ್ರಿಸಲು ಹರಸಾಹಸ ಪಟ್ಟರೂ ವಿಫಲಗೊಂಡಿದ್ದರಿಂದ ಬಸ್ ರಸ್ತೆಯಲ್ಲೇ ಕೆಲಕಾಲ ತೂಗಾಡುತ್ತಾ ರಸ್ತೆಯ ಹಲವು ಅಡಿ ಕೆಳಗಿರುವ ಕಂದಕಕ್ಕೆ ಬಿದ್ದಿದೆ ಎಂದು ಹೇಳಲಾಗುತ್ತಿದೆ.
ಸಮೀಪದ ಹಳ್ಳಿಗಳ ಜನರಿಂದ ಸಹಾಯ
ಭಾರೀ ಸದ್ದಿನೊಂದಿಗೆ ಬಸ್ ಕಲ್ಲುಗಳಿಗೆ ಅಪ್ಪಳಿಸಿದೆ. ಇದರಿಂದ ಬಿಎಸ್‌ಎಫ್ ಯೋಧರು ಸಾಕಷ್ಟು ಗಾಯಗೊಂಡಿದ್ದಾರೆ. ದೊಡ್ಡ ಸದ್ದು ಕೇಳಿದ ಸುತ್ತಮುತ್ತಲಿನ ಗ್ರಾಮಗಳ ಜನರು ಸಹಾಯಕ್ಕಾಗಿ ಅಪಘಾತ ಸ್ಥಳದ ಕಡೆಗೆ ಓಡಿಹೋದರು. ಅಗ್ನಿಶಾಮಕ ದಳ ಮತ್ತು ಪೊಲೀಸರಿಗೆ ವಿಷಯ ತಿಳಿಸಲಾಯಿತು. ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದ್ದು, ಬಸ್‌ನಿಂದ ಯೋಧರನ್ನು ಹೊರತರುವ ಪ್ರಕ್ರಿಯೆ ಆರಂಭವಾಗಿದೆ.
ಸುದ್ದಿ ಬರೆಯುವ ಹೊತ್ತಿಗೆ, ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ನಾಲ್ವರು ಸೈನಿಕರು ಸಾವನ್ನಪ್ಪಿದ್ದರೆ, 28 ಗಾಯಾಳುಗಳನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಘಟನಾ ಸ್ಥಳದಲ್ಲಿ ಪೊಲೀಸರು ಮತ್ತು ಸೇನೆ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ.