ದೆಹಲಿ : ದೇಶದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ) ಬ್ಯಾನ್ ಮಾಡಿರುವ ಸರ್ಕಾರಕ್ಕೆ ಆರ್‌ಎಸ್‌ಎಸ್ ಅನ್ನೂ ಸಹ ಬ್ಯಾನ್ ಮಾಡಬೇಕು ಎಂದು ಕೇರಳದ ಕಾಂಗ್ರೆಸ್ ಸಂಸದ ಕೊಡ್ನಿಕುನ್ನಿಲ್ ಸುರೇಶ್ ಟೀಕಿಸಿದ್ದಾರೆ.
ಪಿಎಫ್‌ಐ ಬ್ಯಾನ್ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಕೊಡ್ನಿಕಲ್ ಸುರೇಶ್ “ ಪಿಎಫ್‌ಐ ಅನ್ನು ಬ್ಯಾನ್ ಮಾಡಿರುವುದಷ್ಟೇ ಕೋಮುವಾದಕ್ಕೆ ಪರಿಹಾರವಲ್ಲ. ರಾಷ್ಟ್ರೀ ಯ ಸ್ವಯಂ ಸೇವಕ ಸಂಘ (RSS) ಸಹ ದೇಶದಲ್ಲಿ ಕೋಮುಸಂಘರ್ಷಗಳನ್ನು ಹುಟ್ಟಿಸುವ ಕೆಲಸ ಮಾಡುತ್ತಿದೆ. ಕೇಂದ್ರ ಸರ್ಕಾರ ಆರ್‌ಎಸ್‌ಎಸ್ ಅನ್ನು ಸಹ ಬ್ಯಾನ್ ಮಾಡಬೇಕು ಎಂದು ಟೀಕೆ ಮಾಡಿದ್ದಾರೆ.
ಪಿಎಫ್‌ಐ ಮತ್ತು ಆರ್‌ಎಸ್‌ಎಸ್ ಎರಡೂ ಒಂದೇ ಉದ್ದೇಶದ ಕೆಲಸಗಳನ್ನು ಮಾಡುತ್ತಿವೆ ಎಂದ ಮೇಲೆ ಸರ್ಕಾರ ಪಿಎಫ್‌ಐ ಅನ್ನು ಮಾತ್ರ ಯಾಕೆ ಬ್ಯಾನ್ ಮಾಡಿದೆ ಎಂದು ಕೇರಳದ ಕಾಂಗ್ರೆಸ್ ಸಂಸದ ವಾಗ್ದಾಳಿ ನಡೆಸಿದ್ದಾರೆ.
🔸ಪೀಪಲ್ ಗ್ರೂಪ್ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/GBc6sg7E2FQLuXblEdBxSi
ಇದನ್ನೂ ನೋಡಿ:
ಮಹಾತ್ಮ ಗಾಂಧಿಯವರಿಂದ ಪ್ರಭಾವಿತರಾದವರು ಕೇವಲ ಭಾರತೀಯರು ಮಾತ್ರವಲ್ಲ. ಜಗತ್ತಿನಾದ್ಯಂತ ಅವರ ಅಭಿಮಾನಿಗಳು ಹುಟ್ಟಿಕೊಂಡಿದ್ದರು. ಅಮೆರಿಕದ ಹೆಸರಾಂತ ನಾಗರಿಕ ಹಕ್ಕು ಹೋರಾಟಗಾರ ಮಾರ್ಟಿನ್ ಲೂಥರ್ ಕಿಂಗ್ ಇದಕ್ಕೊಂದು ಉದಾಹರಣೆ. ಗಾಂಧಿಯವರು ಮಾರ್ಟಿನ್ ಲೂಥರ್ ಕಿಂಗ್ ಅವರನ್ನು ಹೇಗೆ ಪ್ರಭಾವಿಸಿದ್ದರು ಎಂಬುದನ್ನು ವಿವರಿಸಿದ್ದಾರೆ ಸಾಮಾಜಿಕ ಚಿಂತಕ ನಿಕೇತ್ ರಾಜ್ ಮೌರ್ಯ.
https://www.youtube.com/watch?v=ULe6eJJ51XQ