Home ದೇಶ ಕೇರಳದ ʼನರಬಲಿʼ ಪ್ರಕರಣ: ಸಂಪೂರ್ಣ ಮಾಹಿತಿ ನೀಡಿದ ಕೊಚ್ಚಿ ಪೊಲೀಸರು

ಕೇರಳದ ʼನರಬಲಿʼ ಪ್ರಕರಣ: ಸಂಪೂರ್ಣ ಮಾಹಿತಿ ನೀಡಿದ ಕೊಚ್ಚಿ ಪೊಲೀಸರು

0

ಕೇರಳ : ದಂಪತಿಗಳು ತಮ್ಮ ಕುಟುಂಬದ ಸಂಪತ್ತು ಅಭಿವೃದ್ಧಿ ಪಡೆಯಲು “ನರಬಲಿ” ನೀಡುವ ಧಾರ್ಮಿಕ ಕ್ರಿಯೆ ನಡೆಸಿರುವ ಘಟನೆ ಕೇರಳದ ಪತ್ತನಂತಿಟ್ಟದ ಎಳಂತೂರು ಗ್ರಾಮದಲ್ಲಿ ನಡೆದಿದೆ. ಈ ಭಾಗವಾಗಿ ಅಮಾಯಕ ಮಹಿಳೆಯರನ್ನು ವಂಚಿಸಿ ಬಲಿ ಕೊಡುತ್ತಿದ್ದ ಭೀಕರ ಸತ್ಯ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧ ಪಟ್ಟ ಮೂವರು ಆರೋಪಿಗಳನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಕಳುಹಿಸಿಲಾಗಿದೆ.

ಈ ಕುರಿತು ಇದೇ ವರ್ಷದ ಜೂನ್‌ ತಿಂಗಳಲ್ಲಿ ರೋಸ್ಲಿನ್‌ ಎಂಬ ಮತ್ತೊಬ್ಬ ಲಾಟರಿ ಮಾರಾಟಗಾರ್ತಿ ನಾಪತ್ತೆಯಾಗಿರುವಂತೆ ಅವರ ತಂದೆ ಪೊಲೀಸರಿಗೆ ದೂರು ನೀಡಿದ್ದರು. ನಾಲ್ಕೇ ತಿಂಗಳ ನಂತರ 52 ವರ್ಷದ ಪದ್ಮ ಎಂಬ ಲಾಟರಿ ಮಾರುತ್ತಿದ್ದ ಮಹಿಳೆಯು ನಾಪತ್ತೆ ಪ್ರಕರಣ ಸೆಪ್ಟಂಬರ್‌ 26 ರಂದು ಪ್ರಕರಣ ದಾಖಲಾಗಿತ್ತು.ಈ ವಿಚಾರವಾಗಿ ಪೊಲೀಸರು ಗಂಭೀರವಾಗಿ ತನಿಖೆ ನಡೆಸಿ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ.

ಕೇರಳದ ನರಬಲಿ ಪ್ರಕರಣದ ಕುರಿತು ಮಾತನಾಡಿದ ಕೊಚ್ಚಿ ಪೊಲೀಸರಾದ ಸಿ.ಎಚ್‌ ನಾಗರಾಜು “ನಾವು ಸೆಪ್ಟಂಬರ್‌ 26ರಂದು 52 ವರ್ಷದ ಮಹಿಳಾ ಲಾಟರಿ ಟಿಕೆಟ್‌ ಮಾರಾಟಗಾರರ ಪ್ರಕರಣವನ್ನು ದಾಖಲಿಸಿಕೊಂಡಿದ್ದೆವು. ಲಾಟರಿ ಟಿಕೆಟ್‌ ಮಾರುತ್ತಿದ್ದ ಮಹಿಳೆಯನ್ನು ವಂಚಿಸಿ, ಅಪಹರಿಸಿಕೊಂಡು ಹೋಗಿದ್ದಾರೆ. ನಂತರ ಪತ್ತನಂತಿಟ್ಟ ಜಿಲ್ಲೆಗೆ ಕರೆದೊಯ್ದು ಅವರನ್ನು ಕೊಲೆಮಾಡಲಾಗಿದೆ ಎಂದು ತನಿಖೆಯಿಂದ ತಿಳಿದು ಬಂದಿದೆ” ಎಂದು ಹೇಳಿದರು.

“ಎರ್ನಾಕುಲಂ ನ ಶಫಿ ಎಂಬ ವ್ಯಕ್ತಿ ಆಕೆಯನ್ನು ವಂಚಿಸಿದ್ದಾನೆ. ಹಣಕಾಸಿನ ವಿಚಾರದಲ್ಲಿ ಸಹಾಯ ಮಾಡುವ ಭರವಸೆಯನ್ನು ನೀಡಿದ್ದಾನೆ. ಆ ನಂತರ ಶಫಿ ಅವಳನ್ನು ಪತ್ತನಂತಿಟ್ಟಾ ಪ್ರದೇಶಕ್ಕೆ ಕರೆದೊಯ್ದಿದ್ದಾನೆ. ಅಲ್ಲಿನ 68 ವರ್ಷದ ಪುರುಷ ಮತ್ತು 59 ವರ್ಷದ ಮಹಿಳೆ ಈ ಇಬ್ಬರು ದಂಪತಿಗಳಿಗೆ ಮನೆಯ ಸಂಪತ್ತು ಹೆಚ್ಚಿಸಲು ನರಬಲಿ ನೀಡುವುದಕ್ಕಾಗಿ ಆ ಲಾಟರಿ ಮಾರುತ್ತಿದ್ದ ಮಹಿಳೆಯನ್ನು ಅರ್ಪಿಸಿದ್ದಾನೆ” ಎಂದು ತಿಳಿಸಿದರು.

ಇದನ್ನು ಓದಿ : ಕೇರಳ: ನರಬಲಿ ಆರೋಪಿಗಳು ನ್ಯಾಯಾಂಗ ಬಂಧನಕ್ಕೆ

ಈ ರೀತಿಯ ಇನ್ನೊಂದು ಘಟನೆಯೂ ಜೂನ್ 2022 ರಲ್ಲಿ ಸಂಭವಿಸಿತು. ಲಾಟರಿ ಟಿಕೆಟ್ ಮಾರಾಟಗಾರರಾದ 49 ವರ್ಷದ ಮತ್ತೊಬ್ಬ ಮಹಿಳೆಯೂ ಇದೇ ರೀತಿ ಮೋಸ ಹೋಗಿದ್ದಳು. ಶಫಿ ಮತ್ತು ದಂಪತಿಗಳು ಮೂವರೂ ಸೇರಿ ‘ನರಬಲಿ’ ಆಚರಣೆ ನಡೆಸಿ ಈ ಮಹಿಳೆಯರನ್ನು ಕೊಂದಿದ್ದಾರೆ. ಮಹಿಳೆಯ  ದೇಹವನ್ನು ತುಂಡುಗಳಾಗಿ ಕತ್ತರಿಸಿ ಮನೆಯ ಹಿತ್ತಲಿನಲ್ಲಿ ಹೂಳಿದ್ದು, ಅತ್ಯಂತ ಭೀಕರ ಕೊಲೆ ಮಾಡಿದ್ದಾರೆ. ಈ ಎಲ್ಲಾ ಕೃತ್ಯಗಳು ತನಿಖೆಯ ನಂತರ ಹೊರಬಂದಿದ್ದು ಮೂರು ಜನ ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಎಂದು ಘಟನೆಯ ಬಗ್ಗೆ ತಿಳಿಸಿದ್ದಾರೆ.

ಸತ್ಯ ತಿಳಿದ ನಂತರ ಮನೆಯ ಹಿತ್ತಲಲ್ಲಿ ಹೂತಿಟ್ಟಿದ್ದ ದೇಹದ ಭಾಗಗಳನ್ನು ಪತ್ತೆ ಹಚ್ಚಿ, ಹೊರತೆಗೆದು ವಿಡಿಯೋ ಮಾಡಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. ಮುಖ್ಯ ಸಂಚುಕೋರ ಶಫಿ, ದಂಪತಿಗಳಾದ ಭಗವಲ್ ಸಿಂಗ್ ಮತ್ತು ಲೈಲಾ ಅವರನ್ನು ಬಲೆಗೆ ಬೀಳಿಸಿ, ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ‘ನರಬಲಿ’ ಆಚರಣೆಯನ್ನು ನಡೆಸಬೇಕೆಂದು ನಂಬಿದ್ದರು ಎಂದು ತಪ್ಪೊಪ್ಪಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ಮಹಿಳೆಯರನ್ನು ವಂಚಿಸಿ ದಂಪತಿಗಳಿಗೆ ನರಬಲಿಗೆಂದು ಅರ್ಪಿಸುತ್ತಿದ್ದ ಶಫಿ ಒಬ್ಬ ಲೈಂಗಿಕ ವಿಕೃತ. ವಂಚಿಸಿದ ಮಹಿಳೆಯರ ಖಾಸಗಿ ಭಾಗಗಳಲ್ಲಿ ದುಃಖಕರ ಗಾಯಗಳು ಕಂಡುಬಂದಿವೆ. 2020 ರಲ್ಲಿ, ಶಫಿ 75 ವರ್ಷದ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದನು. ಮತ್ತು ಆಕೆಯ ಖಾಸಗಿ ಅಂಗಗಳಿಗೂ ಗಂಭೀರವಾದ ಗಾಯಗಳನ್ನು ಉಂಟುಮಾಡಿದ್ದನು. ಇದು ಲೈಂಗಿಕ ವಿಕೃತಿ ಮತ್ತು ಮನೋರೋಗದ ನಡವಳಿಕೆಯನ್ನು ಸೂಚಿಸುತ್ತದೆ ಎಂದು ಕೊಚ್ಚಿ ಪೊಲೀಸರಾದ ಸಿ.ಎಚ್‌ ನಾಗರಾಜುರವರು ನರಬಲಿ ಪ್ರಕರಣಕ್ಕೆ ಸಂಬಂಧಪಟ್ಟ ಸಂಪೂರ್ಣ ಮಾಹಿತಿಯನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ.

https://youtu.be/9AhplPICZFc

You cannot copy content of this page

Exit mobile version