Home ರಾಜ್ಯ ಕಳಪೆ ರಸ್ತೆ ಕಾಮಗಾರಿ: ಸುಧಾರಣೆಗೆ ಮನವಿ

ಕಳಪೆ ರಸ್ತೆ ಕಾಮಗಾರಿ: ಸುಧಾರಣೆಗೆ ಮನವಿ

0

ಆಳಂದ ತಾಲೂಕಿನ ಕಾಮನಳ್ಳಿಗ್ರಾಮದಿಂದ ಮಾದನಹಿಪ್ಪರಗಾ ರಸ್ತೆಯು ಸಂಪೂರ್ಣ ಹದಗೆಟ್ಟಿದೆ. ಮೊದಲೇ ಕಳಪೆ ಮಟ್ಟದ ಕಾಮಗಾರಿ ಮಾಡಿರುವುದರಿಂದ ಇವಾಗ ಆ ರಸ್ತೆ ಮೇಲೆ ವಾಹಾನಗಳು ಸಂಚಾರ ಮಾಡೋದಕ್ಕೆ ಆಗುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಕಾಮನಳ್ಳಿಯ ರೈತರು ತಮಗೆ ಬೇಕಾಗುವ ರಸಗೊಬ್ಬರ, ಬಿತ್ತನೆ ಬೀಜ ಮತ್ತು ರೋಗಿಗಳನ್ನು ರಾತ್ರಿ ಸಮಯದಲ್ಲಿ ಕರೆದುಕೊಂಡು ಹೋಗುವುದು ಹೇಗೆ? ಸ್ವತಹ ಗಾಡಿ ಡ್ರೈವರ್‌ಗಳು ತಮ್ಮ ಗಾಡಿ ರಸ್ತೆ ಮಧ್ಯ ಸಿಕ್ಕಿಹಾಕಿಕೊಂಡಾಗ ಜೆಸಿಬಿ ತರಿಸಿ ಮುರಳು ಹಾಕಿ ರಸ್ತೆ ದಾಟಿ ಹೋಗುವ ಪರಿಸ್ಥಿತಿ ಇಲ್ಲಿನ ಜನರದ್ದಾಗಿದೆ.

ಇದು ರಾಜಕೀಯ ನಾಯಕರಿಗೆ ನಾಚಿಕೆ ತರುವ ವಿಷಯ, ಆದಷ್ಟು ಬೇಗ ರಸ್ತೆ ಸುಧಾರಣೆ ಮಾಡಿ ಎಂದು ಕರ್ನಾಟಕ ಪೊಲೀಸ್ ಮಹಾಸಂಘದ ಸಂಚಾಲಕರಾದ ಸುರೇಶ ನೇಲ್ಲುರ್‌ ಅವರು ಮನವಿ ಮಾಡಿದ್ದಾರೆ.

https://youtu.be/9AhplPICZFc

You cannot copy content of this page

Exit mobile version