Home ಆಟೋಟ ಕಿರುತೆರೆ ಕಲಾವಿದರ ಕ್ರಿಕೆಟ್ ಪಂದ್ಯಾವಳಿ ಮುಕ್ತಾಯ ಟಿಪಿಎಲ್ ಕಪ್ ಮುಡಿಗೇರಿಸಿಕೊಂಡ ಭಜರಂಗಿ ಲಯನ್ಸ್

ಕಿರುತೆರೆ ಕಲಾವಿದರ ಕ್ರಿಕೆಟ್ ಪಂದ್ಯಾವಳಿ ಮುಕ್ತಾಯ ಟಿಪಿಎಲ್ ಕಪ್ ಮುಡಿಗೇರಿಸಿಕೊಂಡ ಭಜರಂಗಿ ಲಯನ್ಸ್

0

ಎನ್ 1 ಅಕಾಡೆಮಿ ವತಿಯಿಂದ ಮೂರು ದಿನಗಳ ಕಾಲ ಆಯೋಜಿಸಿದ್ದ ಕಿರುತೆರೆ ಕಲಾವಿದರ ಕ್ರಿಕೆಟ್ ಪಂದ್ಯಾವಳಿ ಮುಕ್ತಾಯಗೊಂಡಿದೆ. ಒಂದೊಳ್ಳೆ ಧ್ಯೇಯ ಇಟ್ಟುಕೊಂಡು ಈ ಟೂರ್ನಿಯನ್ನು ಏರ್ಪಡಿಲಾಗಿತ್ತು. ಹಿರಿಯ ಕಲಾವಿದರಿಗೆ ಈ ಪಂದ್ಯಾವಳಿಯಿಂದ ಸಹಾಯ ಮಾಡುವುದಾಗಿ ಆಯೋಜಕ ಸುನಿಲ್ ಕುಮಾರ್ ಬಿ ಆರ್ ತಿಳಿಸಿದ್ದರು. ಅದರಂತೆ ಟಿವಿ ಧಾರಾವಾಹಿಗಳ ಪ್ರೊಡಕ್ಷನ್ ಮ್ಯಾನೇಜರ್ ಪಾರ್ಥ ಎಂಬುವವರಿಗೆ ಆರ್ಥಿಕ ನೆರವು ಒದಗಿಸಲಾಗಿದೆ. ಎರಡು ಕಿಡ್ನಿ ಕಳೆದುಕೊಂಡಿದ್ದ ಅವರಿಗೆ ಧನ ಸಹಾಯ ಮಾಡಲಾಗಿದೆ ಎಂದು ಸುನಿಲ್ ಹೇಳಿದ್ದಾರೆ.

ಇದೇ 18 ರಿಂದ 20ರವರೆಗೆ ನಡೆದ ಮೂರು ದಿನದ ಕ್ರಿಕೆಟ್ ಪಂದ್ಯಾವಳಿಯಲ್ಲಿ ರಂಜಿತ್ ಕುಮಾರ್ ನಾಯಕತ್ವದ ಭಜರಂಗಿ ಲಯನ್ಸ್ ಟಿಪಿಎಲ್ ಕಪ್ ಗೆ ಮುತ್ತಿಟ್ಟಿದೆ. ಹರ್ಷ ಸಿಎಂ ಗೌಡ ನಾಯಕತ್ವದ ಎಂಜಲ್ XI ತಂಡ ರನ್ನರ್ ಅಪ್ ಆಗಿ ಹೊರಹೊಮ್ಮಿದೆ. ಒಟ್ಟು ಆರು ತಂಡಗಳು ಈ ಟೂರ್ನಮೆಂಟ್ ನಲ್ಲಿ ಭಾಗಿಯಾಗಿದ್ದವು.

You cannot copy content of this page

Exit mobile version