Home ಆಟೋಟ ಕೊನೆಗೂʼಜಯʼದಕ್ಕಿಸಿಕೊಂಡ ವೆಸ್ಟ್‌ಇಂಡೀಸ್‌

ಕೊನೆಗೂʼಜಯʼದಕ್ಕಿಸಿಕೊಂಡ ವೆಸ್ಟ್‌ಇಂಡೀಸ್‌

0

ಬೆಸೆಟೆರ್, ಸೇಂಟ್ ಕಿಟ್ಸ್: ವಾರ್ನರ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್ ವಿರುದ್ದದ ಟಿ20 ಎರಡನೇ ಕ್ರಿಕೆಟ್  ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಭಾರತದ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿದೆ.

ಏಕದಿನ ಸರಣಿಯಲ್ಲಿ ಭಾರತ ತಂಡದ ಮೇಲೆ ಒಂದು ಪಂದ್ಯದಲ್ಲಿಯೂ ಕೂಡ ಗೆಲ್ಲದೆ ಕ್ಲೀನ್‌ ಸ್ವೀಪ್‌  ಆಗಿದ್ದ ವೆಸ್ಟ್‌ ಇಂಡೀಸ್‌ ತಂಡವು, ಟಿ20 ಸರಣಿಯಲ್ಲಿಯೂ ಮೊದಲನೆ ಪಂದ್ಯ ಸೋತು ಹೋಗಿತ್ತು. ಆದರೆ ಟಿ20 ಎರಡನೆ ಪಂದ್ಯದಲ್ಲಿ ಐದು ವಿಕೆಟ್‌ಗಳ ಜಯಗಳಿಸುವುದರ ಮೂಲಕ ಸರಣಿ ಸಮಬಲ
(1-1) ಮಾಡಿಕೊಂಡಿದ್ದಾರೆ.

ಮೊದಲು ಬ್ಯಾಟಿಂಗ್‌ ಇಳಿದ ಟೀಮ್‌ ಇಂಡಿಯಾದ ಅನುಭವಿ ಆಟಗಾರರಾದ ನಾಯಕ ರೋಹಿತ್‌ ಶರ್ಮ ಮತ್ತು ಸೂರ್ಯಕುಮಾರ್‌ ಯಾದವ್‌ ವೆಸ್ಟ್‌ ಇಂಡೀಸ್‌ ಬೌಲಿಂಗ್‌ ದಾಳಿಗೆ ವಿಕೆಟ್‌ ಚೆಲ್ಲಿ ಪೆವಿಲಿಯನ್‌ ಸೇರಿದರು. ನಂತರ ಜೊತೆಯಾದ ರಿಷಬ್‌ ಪಂತ್‌ 24 ರನ್‌ ಮತ್ತು ಹಾರ್ದಿಕ್‌ ಪಾಂಡ್ಯ  31 ರನ್‌ ಹಾಗು ಜಡೇಜ 27 ರನ್‌ ಕಲೆಹಾಕಿ ತಂಡವನ್ನ ಒಂದು ಹಂತಕ್ಕೆ ಕರೆದೊಯ್ದರು. ಭಾರತ ಕೊನೆಗೂ 19.4 ಒವರ್‌ ಗಳಲ್ಲಿ ತನ್ನ ಎಲ್ಲಾ ವಿಕೆಟ್‌ ಕಳೆದುಕೊಂಡು 138 ರನ್‌ ಗಳಿಸಿತು.

ನಂತರ 138 ಚೇಸ್‌ ಮಾಡಲು ಹೊರಟ ವೆಸ್ಟ್‌ ಇಂಡೀಸ್‌ ತಂಡವು ಆರಂಭದಲ್ಲಿ ರನ್‌ ಕಲೆಹಾಕಲು ಪರದಾಡಿತು. ನಂತರ ಬ್ರಾಂಡನ್ ಕಿಂಗ್ 64 ಮತ್ತು ಡೆವೊನ್ ಥಾಮಸ್ 31 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಕರೆದೊಯ್ದರು. ಕೊನೆಗೆ 19.2 ಓವರ್‌ಗಳಿಗೆ 141 ರನ್‌ ಗಳಿಸಿ 5 ವಿಕೆಟ್‌ಗಳ ಜಯ ಸಾಧಿಸಿತು. ಇನ್ನೂ ಬೌಲಿಂಗ್‌ನಲ್ಲಿ ಮಿಂಚಿದ ವೆಸ್ಟ್‌ ಇಂಡೀಸ್‌ ಆಟಗಾರ ಓ.ಮೆಕಾಯ್‌ ನಾಲ್ಕು ಓವರ್‌ಗಳಲ್ಲಿ 17 ರನ್‌ ಕೊಟ್ಟು 6 ವಿಕೆಟ್‌ಗಳನ್ನ ಕಬಳಿಸಿ ತಂಡದ ಗೆಲುವಿಗೆ ಕಾರಣರಾದರು.  

You cannot copy content of this page

Exit mobile version