Home ಬೆಂಗಳೂರು KPSC ಹಗರಣ OMR ಸ್ಕ್ಯಾನ್ ಮಾಡಿದ ಹಾರ್ಡ್‌ಡಿಸ್ಕ್ – ನಾಪತ್ತೆ

KPSC ಹಗರಣ OMR ಸ್ಕ್ಯಾನ್ ಮಾಡಿದ ಹಾರ್ಡ್‌ಡಿಸ್ಕ್ – ನಾಪತ್ತೆ

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಪರೀಕ್ಷೆಯ OMR ಶೀಟ್‌ಗಳನ್ನು ಸ್ಕ್ಯಾನ್ ಮಾಡಿದ್ದ ಹಾರ್ಡ್‌ಡಿಸ್ಕ್ ನಾಪತ್ತೆಯಾಗಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ ಎಂಬ ಮಾಹಿತಿ ಹೊರಬಿದ್ದಿದೆ.

400 ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆ 2026ರ ಜನವರಿ 8 ಮತ್ತು 9ರಂದು ನಡೆದಿತ್ತು. ನೇಮಕಾತಿಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ, OMR ಶೀಟ್ ತಿದ್ದುಪಡಿ ಹಾಗೂ ಮೌಲ್ಯಮಾಪನದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಪ್ರಕರಣವನ್ನು ರಾಜ್ಯ ಸರ್ಕಾರ CID ತನಿಖೆಗೆ ವಹಿಸಿದೆ.

You cannot copy content of this page

Exit mobile version