Tuesday, May 7, 2024

ಸತ್ಯ | ನ್ಯಾಯ |ಧರ್ಮ

ಕುಡಿಯುವ ನೀರಿಗೆ ಬರ : ಕಲುಷಿತ ನೀರಿನಿಂದ 37 ಮಂದಿ ಅಸ್ವಸ್ಥ

ಯಾದಗಿರಿ : ಯಾದಗಿರಿಯ ಹೊಟ್‌ಪೇಟ್‌ ಗ್ರಾಮದಲ್ಲಿ ಕಲುಷಿತ ನೀರನ್ನು ಕುಡಿದು ಒಬ್ಬ ಸಾವನ್ನಪ್ಪಿದ್ದು, 37 ಮಂದಿ ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ.

ಕುಡಿಯಲು ಶುದ್ದವಾದ ನೀರಿಗೆ ಅಲೆದಾಡುತ್ತಿರುವ ಯಾದಗಿರಿ ಜಿಲ್ಲೆಯ ಜನರು ಕಲುಷಿತ ನೀರನ್ನೇ ಕುಡಿಯುತ್ತಿದ್ದಾರೆ. ಇದರಿಂದ ಜಿಲ್ಲೆ ಶಹಾಪುರ ತಾಲ್ಲೂಕಿನ ಹೋಟ್ ಪೇಟ್‌ ಗ್ರಾಮದಲ್ಲಿ  ಓರ್ವನು ಮೃತಪಟ್ಟಿದ್ದು, 37 ಜನರು ಅಸ್ವಸ್ಥಗೊಂಡಿದ್ದಾರೆ.

ಗ್ರಾಮದಲ್ಲಿ ಶನಿವಾರದಿಂದ ಇಲ್ಲಿಯವರೆಗೂ 37 ಪ್ರಕರಣಗಳು ವರದಿಯಾಗಿದ್ದು, ಹೊನ್ನಪ್ಪ ಗೌಡ ಮೃತವ್ಯಕ್ತಿಯಾಗಿದ್ದಾನೆ. ಹೊನ್ನಪ್ಪ ಗೌಡನ ಸಾವಿಗೆ ಕಲುಷಿತ ನೀರು ಕುಡಿದಿರುವುದೊಂದೇ ಕಾರಣವಲ್ಲದೇ ಬೇರೆ ಕಾರಣಗಳೂ ಇವೆ ಎಂದು ವೈದ್ಯಕೀಯ ವರದಿಗಳ ಪ್ರಕಾರ ಹೇಳಲಾಗತ್ತಿದೆ.ಲ

ಈ ಕುರಿತು ಮಾತನಾಡಿದ ಶಹಾಪುರ ತಹಶೀಲ್ದಾರರಾದ ಮಧುರಾಜ್‌, ʼಕಳೆದ ಮೂರು ದಿನಗಳಲ್ಲಿ ಗ್ರಾಮದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಆದರೆ ಅವರ ಸಾವು ಕಲುಷಿತ ನೀರಿನಿಂದ ಸಂಭವಿಸಿಲ್ಲʼ ಎಂದು ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು